ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪ್ರತಿ ಏಕದಿನ ಪಂದ್ಯ ಆಡಿದ ಬಳಿಕ ಬಿಸಿಸಿಐನಿಂದ ಗಳಿಸುವ ಸಂಬಳ ಎಷ್ಟು?

Published : Oct 16, 2026, 05:32 PM IST
Rohit Sharma and Virat Kohli

ಸಾರಾಂಶ

ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಬಿ ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ. ಇದರಿಂದಾಗಿ ಇವರ ವಾರ್ಷಿಕ ಸಂಬಳ 3 ಕೋಟಿ ರೂಪಾಯಿಗೆ ಇಳಿಕೆಯಾಗಿದ್ದು, ಗಿಲ್ ಮತ್ತು ಬುಮ್ರಾಗಿಂತ ಕಡಿಮೆಯಾಗಿದೆ. ಸದ್ಯ ಇವರು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದು, ಪ್ರತಿ ಪಂದ್ಯಕ್ಕೆ 6 ಲಕ್ಷ ರೂ. ಪಡೆಯುತ್ತಾರೆ.

ಬೆಂಗಳೂರು: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರರಾಗಿದ್ದಾರೆ. ಇದೀಗ ಈ ಇಬ್ಬರು ಕ್ರಿಕೆಟಿಗರು ನಿವೃತ್ತಿಯ ಹೊಸ್ತಿಲಲ್ಲಿದ್ದು, ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ರೋ-ಕೊ ಜೋಡಿ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರು ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.

ಈಗಾಗಲೇ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ವಿಚಾರಕ್ಕೆ ಬರುವುದಾದರೇ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಸಂಬಳವು ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗಿಂತಲೂ ಕಡಿಮೆಯಿದೆ. ಆದರೆ ರೋ-ಕೊ ಜೋಡಿ ತಮ್ಮದೇ ಆದ ಬ್ಯುಸಿನೆಸ್ ಮೂಲಗಳಿಂದ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳ ಮೂಲಕ ಪ್ರತಿವರ್ಷವೂ ಕೋಟಿ ಕೋಟಿ ಆದಾಯವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಬಿಸಿಸಿಐನಿಂದ ರೋಹಿತ್-ಕೊಹ್ಲಿಗೆ ವಾರ್ಷಿಕ 3 ಕೋಟಿ ರುಪಾಯಿ ಸಂಬಳ:

2026-27ನೇ ಸಾಲಿನ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪರಿಷ್ಕರಿಸಲಾಗಿದ್ದು ಇದುವರೆಗೂ ಎ+ ಗ್ರೇಡ್ ಹೊಂದಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿ ಗ್ರೇಡ್‌ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಕೆ ಎಲ್ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ ಜತೆಗೆ ಕೊಹ್ಲಿ ಹಾಗೂ ರೋಹಿತ್ ಕೂಡಾ ಬಿಸಿಸಿಐನಿಂದ ವಾರ್ಷಿಕ 3 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಪ್ರತಿ ಮ್ಯಾಚ್‌ಗೆ ರೋ-ಕೊ ಜೋಡಿಗೆ ಸಿಗುವ ಮ್ಯಾಚ್ ಫೀ ಎಷ್ಟು?

ಬಿಸಿಸಿಐ ಪ್ರಕಾರ, ಒಂದು ಟೆಸ್ಟ್ ಮ್ಯಾಚ್ ಆಡುವ ಆಟಗಾರನಿಗೆ 15 ಲಕ್ಷ ರುಪಾಯಿ, ಒಂದು ಏಕದಿನ ಪಂದ್ಯ ಆಡಿದ್ದಕ್ಕೆ 6 ಲಕ್ಷ ರುಪಾಯಿ ಹಾಗೂ ಒಂದು ಟಿ20 ಪಂದ್ಯ ಆಡಿದರೆ 3 ಲಕ್ಷ ರುಪಾಯಿ ಮ್ಯಾಚ್ ಫೀ ಪಡೆಯುತ್ತಾರೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿರುವುದರಿಂದ ಪ್ರತಿ ಪಂದ್ಯಕ್ಕೆ 6 ಲಕ್ಷ ರುಪಾಯಿ ಮ್ಯಾಚ್ ಫೀ ಜೇಬಿಗಿಳಿಸಿಕೊಳ್ಳುತ್ತಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs WI: ಬೆಂಗಳೂರು ಟಿ20 ಪಂದ್ಯದಿಂದ ಮಾರಕ ವೇಗಿ ಔಟ್; ಆರ್‌ಸಿಬಿ ಬ್ರಹ್ಮಾಸ್ತ್ರ ಭುವಿಗೆ ಬುಲಾವ್
ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡೋದು ಡೌಟ್; ಈಗಲಾದ್ರೂ ಮೊಹಮ್ಮದ್ ಶಮಿಗೆ ಸಿಗುತ್ತಾ ಚಾನ್ಸ್?