19 ಬೌಂಡರಿ, 8 ಸಿಕ್ಸರ್, 143 ಎಸೆತಗಳಲ್ಲಿ 173 ರನ್..! ತಂದೆ ಸೆಹ್ವಾಗ್‌ ರೀತಿ ಮೈದಾನದಲ್ಲಿ ಘರ್ಜಿಸಿದ ಆರ್ಯವೀರ್..!

Published : Oct 16, 2026, 06:03 PM IST
Aaryavir Sehwag

ಸಾರಾಂಶ

ವಿನೂ ಮಂಕಡ್ ಟೂರ್ನಿಯಲ್ಲಿ ಡೆಲ್ಲಿ ತಂಡದ ನಾಯಕ ಆರ್ಯವೀರ್ ಸೆಹ್ವಾಗ್ 173 ರನ್ ಸಿಡಿಸಿ ತಂದೆ ವಿರೇಂದ್ರ ಸೆಹ್ವಾಗ್ ಅವರ ಆಟವನ್ನು ನೆನಪಿಸಿದ್ದಾರೆ. ಇದೇ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಕೂಡ ಕರ್ನಾಟಕದ ಪರ ಅಜೇಯ 85 ರನ್ ಬಾರಿಸಿ ಮಿಂಚಿದ್ದಾರೆ. ದಿಗ್ಗಜರ ಮಕ್ಕಳ ಈ ಅದ್ಭುತ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ವಿರೇಂದ್ರ ಸೆಹ್ವಾಗ್ ಹಿರಿಯ ಮಗ ಆರ್ಯವೀರ್ ಸೆಹ್ವಾಗ್ ಇದೀಗ ಕ್ರಿಕೆಟ್ ಮೈದಾನದಲ್ಲಿ ತಮ್ಮ ತಂದೆಯ ಹೆಜ್ಜೆಯನ್ನೇ ಫಾಲೋ ಮಾಡುತ್ತಿದ್ದಾರೆ. ವಿನೂ ಮಂಕಡ್ ಎಲೈಟ್ ಟೂರ್ನಿಯಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಆರ್ಯವೀರ್ ಸೆಹ್ವಾಗ್, ಇದೀಗ ಸ್ಪೋಟಕ ಶತಕ ಸಿಡಿಸುವ ಮೂಲಕ ತಂದೆಯ ಆಟವನ್ನು ಕ್ರಿಕೆಟ್ ಅಭಿಮಾನಿಗಳು ನೆನಪು ಮಾಡಿಕೊಳ್ಳುವಂತೆ ಮಾಡಿದ್ದಾರೆ.

18 ವರ್ಷದ ಆರ್ಯವೀರ್ ಸೆಹ್ವಾಗ್ ಡೆಲ್ಲಿ ಪರ ಕೇವಲ 143 ಎಸೆತಗಳನ್ನು ಎದುರಿಸಿ 19 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ ಸಹಿತ ಆಕರ್ಷಕ 173 ರನ್ ಸಿಡಿಸಿದರು. ಪರಿಣಾಮ ವಿನೂ ಮಂಕಡ್ ಟೂರ್ನಿಯಲ್ಲಿ ಡೆಲ್ಲಿ ತಂಡವು ನಿಗದಿತ 50 ಓವರ್‌ಗಳಲ್ಲಿ 289 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಇನ್ನು ಡೆಲ್ಲಿ ಪರ ಅರ್ನವ್ ಬುಗ್ಗಾ 47 ರನ್ ಬಾರಿಸಿ ಆರ್ಯವೀರ್‌ಗೆ ಉತ್ತಮ ಸಾಥ್ ನೀಡಿದರು.

ಇದೇ ಅಕ್ಟೋಬರ್ 08ರಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಿರುವ ವಿನೂ ಮಂಕಡ್ ಟೂರ್ನಿಯಲ್ಲಿ 16 ಆಟಗಾರರನ್ನೊಳಗೊಂಡ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂದಹಾಗೆ ಆರ್ಯವೀರ್ ಸೆಹ್ವಾಗ್ ಇತ್ತೀಚೆಗಷ್ಟೇ ಭಾರತ ಅಂಡರ್-19 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರು ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದ ವೇಳೆಯಲ್ಲಿ ಆರ್ಯವೀರ್ ಸೆಹ್ವಾಗ್ ಭಾರತ ಅಂಡರ್-19 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ನಾಯಕನ ಆಟವಾಡಿದ ಆರ್ಯವೀರ್ ಸೆಹ್ವಾಗ್:

ಇನ್ನು ಈ ಪಂದ್ಯಕ್ಕೂ ಮುನ್ನ ಕರ್ನಾಟಕ ಎದುರು ಡೆಲ್ಲಿ ತಂಡವು 418 ರನ್‌ಗಳನ್ನು ಚಚ್ಚಿಸಿಕೊಂಡಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಕೇವಲ 220 ರನ್‌ಗಳಿಗೆ ಸರ್ವಪತನ ಕಂಡಿತ್ತು. ಆ ಪಂದ್ಯದಲ್ಲಿ ನಾಯಕ ಆರ್ಯವೀರ್ ಸೆಹ್ವಾಗ್ ಕೇವಲ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಡೆಲ್ಲಿ ತಂಡವು ಇದೀಗ ಬೌನ್ಸ್ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರ್ಯವೀರ್ ಸೆಹ್ವಾಗ್, ಇದೀಗ ನಾಯಕನ ಆಟವಾಡಿ ಗಮನ ಸೆಳೆದಿದ್ದಾರೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾ ಅಂಡರ್-19 ಎದುರಿನ ಯೂಥ್ ಏಕದಿನ ಸರಣಿಯಲ್ಲಿನ ಮೂರು ಇನ್ನಿಂಗ್ಸ್‌ಗಳಿಂದ ಆರ್ಯವೀರ್ ಸೆಹ್ವಾಗ್ 109 ರನ್ ಸಿಡಿಸಿ ಗಮನ ಸೆಳೆದಿದ್ದರು. ಇದಷ್ಟೇ ಅಲ್ಲದೇ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಯವೀರ್ ಸೆಹ್ವಾಗ್, ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಪರ ಕಣಕ್ಕಿಳಿದು ಮಿಂಚಿದ್ದರು.

ಸೆಹ್ವಾಗ್ ಮಗನ ರೀತಿಯಲ್ಲಿಯೇ ದ್ರಾವಿಡ್ ಮಗನೂ ಶೈನಿಂಗ್:

ಅಂದಹಾಗೆ ಇದೇ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಕೂಡಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಅನ್ವಯ್ ದ್ರಾವಿಡ್ ಕಳೆದ ಅಕ್ಟೋಬರ್ 12ರಂದು ಡೆಲ್ಲಿ ವಿರುದ್ದ ನಡೆದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಅಜೇಯ 85 ರನ್ ಬಾರಿಸುವ ಮೂಲಕ ಕರ್ನಾಟಕ ತಂಡವು ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡೆಲ್ಲಿ ಎದುರು ಕರ್ನಾಟಕ ತಂಡವು 198 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪ್ರತಿ ಏಕದಿನ ಪಂದ್ಯ ಆಡಿದ ಬಳಿಕ ಬಿಸಿಸಿಐನಿಂದ ಗಳಿಸುವ ಸಂಬಳ ಎಷ್ಟು?
IND vs WI: ಬೆಂಗಳೂರು ಟಿ20 ಪಂದ್ಯದಿಂದ ಮಾರಕ ವೇಗಿ ಔಟ್; ಆರ್‌ಸಿಬಿ ಬ್ರಹ್ಮಾಸ್ತ್ರ ಭುವಿಗೆ ಬುಲಾವ್