ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20ಯಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಗಯಾನ(ಆ.06) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕುಲ್ದೀಪ್ ಯಾದವ್ ಗಾಯಗೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಕುಲ್ದೀಪ್ ಬದಲು ರವಿ ಬಿಶ್ನೋಯ್ ಸ್ಥಾನ ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್, ಮುಕೇಶ್ ಕುಮಾರ್, ರವಿ ಬಿಶ್ನೋಯ್
undefined
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜೋನ್ಸನ್ ಚಾರ್ಲೆಸ್, ನಿಕೋಲಸ್ ಪೂರನ್, ರೊವ್ಮನ್ ಪೊವೆಲ್(ನಾಯಕ), ಶಿಮ್ರೊನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೀಲ್ ಹುಸೈನ್, ಅಲ್ಜಾರಿ ಜೊಸೆಫ್, ಒಬೆಡ್ ಮೆಕೊಯ್
ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್ ಪವರ್-ಪ್ಲೇ ಮುಕ್ತಾಯಕ್ಕೆ 2 ವಿಕೆಟ್‌ಗೆ 54 ರನ್ ಸಿಡಿಸಿದರೂ, 10 ಓವರ್ ಮುಕ್ತಾಯಕ್ಕೆ 3 ವಿಕೆಟ್‌ಗೆ 69 ರನ್ ಗಳಿಸಿತು. ನಾಯಕ ರೋವ್ಮನ್ ಪೋವೆಲ್(48)ರ ಹೋರಾಟದ ನೆರವಿನಿಂದ ಕೊನೆಯ 10 ಓವರಲ್ಲಿ 80 ರನ್ ಕಲೆಹಾಕಿದ ವಿಂಡೀಸ್ 20 ಓವರಲ್ಲಿ 6 ವಿಕೆಟ್‌ಗೆ 149 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಪಾಕ್ ಮಾಜಿ ಕ್ರಿಕೆಟಿಗ..!
ಶುಭ್‌ಮನ್ ಗಿಲ್(03), ಇಶಾನ್ ಕಿಶನ್(06) ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಸೂರ್ಯಕುಮಾರ್(21) ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪದಾರ್ಪಣಾ ಪಂದ್ಯದಲ್ಲೇ ಆಕರ್ಷಕ ಆಟವಾಡಿದ ತಿಲಕ್ ವರ್ಮಾ 22 ಎಸೆತದಲ್ಲಿ 39 ರನ್ ಸಿಡಿಸಿದರು. ಆದರೆ 16ನೇ ಓವರಲ್ಲಿ ಹಾರ್ದಿಕ್, ಸ್ಯಾಮ್ಸನ್ ಇಬ್ಬರೂ ಔಟಾಗಿದ್ದು ಪಂದ್ಯ ವಿಂಡೀಸ್‌ನತ್ತ ವಾಲುವಂತೆ ಮಾಡಿತು. ಕೊನೆಯಲ್ಲಿ ಅಶ್‌ರ್‍ದೀಪ್ 2 ಬೌಂಡರಿ ಬಾರಿಸಿ ಸಾಹಸ ಮೆರೆಯುವ ಯತ್ನ ನಡೆಸಿದರೂ, ಗೆಲುವಿಗೆ ಸಾಕಾಗಲಿಲ್ಲ. ಭಾರತ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ 30 ಎಸೆತದಲ್ಲಿ ಗೆಲ್ಲಲು ಕೇವಲ 37 ರನ್ ಬೇಕಿತ್ತು. ಆದರೆ 16ನೇ ಓವರ್ ಪಂದ್ಯದ ಗತಿ ಬದಲಿಸಿತು. ಹಾರ್ದಿಕ್ ಹಾಗೂ ಸ್ಯಾಮ್ಸನ್ ಇಬ್ಬರೂ ಔಟಾದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವೆನಿಸಿತು.