
ಮುಂಬೈ(ಮೇ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (Indian Premier League) ಮುಗಿಯುತ್ತಿದ್ದಂತೆ ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಯನ್ನಾಡಲಿದೆ. ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಟೀಂ ಇಂಡಿಯಾವನ್ನ ಪ್ರಕಟಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವದಲ್ಲಿ 18 ಸದಸ್ಯರ ತಂಡವನ್ನ ಸಜ್ಜುಗೊಳಿಸಿತ್ತು. ಇದ್ರಲ್ಲಿ ಕೆಲವರಿಗೆ ಜಾಕ್ಪಾಟ್ ಹೊಡೆದಿತ್ತು. ಸದ್ಯ ಟೀಮ್ ಅನೌನ್ಸ್ ಆಗಿ 3 ದಿನ ಕಳೆದಿದೆ. ಆಫ್ರಿಕಾ ಸರಣಿಗೆ ಸೆಲೆಕ್ಟ್ ಆದ ಎಲ್ಲಾ ಪ್ಲೇಯರ್ಸ್ಗೆ ಹೊಸ ಟೆನ್ಷನ್ ಶುರುವಾಗಿದೆ.
ಟೀಂ ಇಂಡಿಯಾ ಆಟಗಾರರಿಗೆ ಯೋ ಯೋ 'ಟೆಸ್ಟ್:
ಹೌದು, ಆಫ್ರಿಕಾ ಸರಣಿಗೆ ಸೆಲೆಕ್ಟ್ ಆದ ಖುಷಿಯಲ್ಲಿದ್ದ ಆಟಗಾರರಿಗೆ ಬಿಸಿಸಿಐ (BCCI) ಈಗ ಹೊಸ ಟೆನ್ಷನ್ ತಂದೊಡ್ಡಿದೆ. ಅದೇನಂದ್ರೆ ಆಯ್ಕೆಯಾದ 18 ಪ್ಲೇಯರ್ಸ್ ಯೋ ಯೋ ಟೆಸ್ಟ್ (Yo Yo Test) ಪಾಸಾಗಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಸಿಐ ಎಲ್ಲಾ ಆಟಗಾರರಿಗೆ ಕಡ್ಡಾಯವಾಗಿ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗಲೇಬೇಕೆಂದು ಖಡಕ್ ಆಗಿ ಸೂಚಿಸಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಜೂನ್ 5ರಂದು ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ಕ್ಯಾಂಪ್ ನಡೆಯಲಿದೆ. ಈ ವೇಳೆ ಹೆಡ್ ಕೋಚ್ ರಾಹುಲ್ ದ್ರಾವಿಡ್ (Team India head Coach Rahul Dravid) ಹಾಗೂ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಜರಿರಲಿದ್ದಾರೆ. ಈ ಇಬ್ಬರು ದಿಗ್ಗಜರ ಸಮ್ಮುಖದಲ್ಲಿ ಪ್ಲೇಯರ್ಸ್ ಫಿಟ್ನೆಸ್ ಟೆಸ್ಟ್ ಪಾಸಾಗಬೇಕಿದೆ. ಒಂದು ವೇಳೆ ಈ ಟೆಸ್ಟ್ನಲ್ಲಿ ಫೇಲಾದ್ರೆ ಆಫ್ರಿಕಾ ಸರಣಿಯಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ 18 ಆಟಗಾರರ ಎದೆಯಲ್ಲಿ ಢವ ಢವ ಶುರುವಾಗಿದೆ.
ಹಾರ್ದಿಕ್ ಪಾಂಡ್ಯ ಎದೆಯಲ್ಲಿ ಢವಢವ:
ನಿಜ, ಈ ಪ್ರಶ್ನೆ ಎಲ್ಲರನ್ನ ಕಾಡುತ್ತೆ. ಐಪಿಎಲ್ ಪರ್ಫಾಮೆನ್ಸ್ ಮೇಲೆ ಆಫ್ರಿಕಾ ಸರಣಿಗೆ ತಂಡವನ್ನ ಪ್ರಕಟಿಸಲಾಗಿದೆ. ಇದಾಗಿಯೂ ಮತ್ತೊಮ್ಮೆ ಯೋ ಯೋ ಟೆಸ್ಟ್ ನಡೆಸೋದು ಅನಗತ್ಯ ಅನ್ನಿಸಬಹುದು. ಆದ್ರೆ ಇದಕ್ಕೊಂದು ಕಾರಣವಿದೆ. ಯಾಕಂದ್ರೆ ಟೀಂ ಇಂಡಿಯಾದ ಆಯ್ಕೆಯಾದ ಎಲ್ಲಾ ಪ್ಲೇಯರ್ಸ್ ಫುಲ್ ಫಿಟ್ ಆಗಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಹಾರ್ದಿಕ್ ಪಾಂಡ್ಯ.
ಹೌದು, ಹಾರ್ದಿಕ್ ಪ್ರಸಕ್ತ ಐಪಿಎಲ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಜೊತೆಗೆ ತಂಡವನ್ನ ಫೈನಗೇರಿಸಿದ್ದಾರೆ ನಿಜ. ಆದ್ರೆ ಈ ಸ್ಟಾರ್ ಆಲ್ರೌಂಡರ್ ಅನ್ಫಿಟ್ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿದ್ರು. ಬಿಸಿಸಿಐ ಎನ್ಸಿಎ ಶಿಬಿರದಲ್ಲಿ ಭಾಗಿಯಾಗಬೇಕೆಂದು ಖಡಕ್ ಆಗಿ ಸೂಚಿಸಿದ್ರು ಅವರ ಮಾತಿಗೆ ಸೊಪ್ಪಿ ಹಾಕ್ಲಿಲ್ಲ. ಆದ್ರೆ ಫೈನಲ್ ವಾರ್ನಿಂಗ್ ನೀಡಿದ್ದರಿಂದ ಬಂದು ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿ ಹೋದ್ರು. ಆದ್ರೂ ಡೊಮೆಸ್ಟಿಕ್ ಕ್ರಿಕೆಟ್ ಆಡದೆಯೇ ನೇರವಾಗಿ ಐಪಿಎಲ್ಗೆ ಧುಮುಕಿದ್ರು.
ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್...!
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ರೂ, ಇವರ ಫಿಟ್ನೆಸ್ ಬಗ್ಗೆ ಬಿಸಿಸಿಐಗೆ ಅನುಮಾನವಿದೆ. ಯಾಕಂದ್ರೆ ಪಾಂಡ್ಯ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡ್ತಿಲ್ಲ. ಹೀಗಾಗಿ ಬಿಸಿಸಿಐ ಎಲ್ಲಾ ಪ್ಲೇಯರ್ಸ್ಗೆ ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಯೋ ಯೋ ಟೆಸ್ಟ್ ನಡೆಸಲು ಮುಂದಾಗಿದೆ. ಒಂದು ವೇಳೆ ಈ ಟೆಸ್ಟ್ನಲ್ಲಿ ಪಾಂಡ್ಯ ಫೇಲಾದ್ರೆ ಆಫ್ರಿಕಾ ಸರಣಿ ಮಿಸ್ ಮಾಡಿಕೊಳ್ಳಲಿದ್ದಾರೆ. ಇವರಂತೆ ಇನ್ನು ಕೆಲವರಿಗೆ ಆ ಭೀತಿ ಶುರುವಾಗಿದೆ. ಜೂನ್ 5ರಂದು ಯೋ ಯೋ ಟೆಸ್ಟ್ ಭವಿಷ್ಯ ಹೊರಬೀಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.