ಪ್ಲೇಯಿಂಗ್ 11ನಿಂದ ಪಂತ್‌ಗೆ ಠಕ್ಕರ್, ಇಂಡೋ ಪಾಕ್ ಪಂದ್ಯಕ್ಕೆ ಊರ್ವಶಿ ರೌಟೇಲಾ ಹಾಜರ್!

By Suvarna News  |  First Published Aug 28, 2022, 10:46 PM IST

ರಿಷಬ್ ಪಂತ್ ಜೊತೆಗಿನ ಟ್ವಿಟರ್ ವಾರ್ ಬಳಿಕ ಇದೀಗ ಊರ್ವಶಿ ರೌಟೇಲಾ ಪ್ರತ್ಯಕ್ಷಗೊಂಡಿದ್ದಾರೆ. ಈ ಬಾರಿ ಇಂಡೋ ಪಾಕ್ ಪಂದ್ಯಕ್ಕೆ ಹಾಜರಾಗಿದ್ದಾರೆ. ಆದರೆ ಈ ಪಂದ್ಯದಲ್ಲಿ ಪಂತ್ ಆಡುತ್ತಿಲ್ಲ. ಹೀಗಾಗಿ ಅಭಿಮಾನಿಗಳ ಮೀಮ್ಸ್ ಅಬ್ಬರ ಮತ್ತೆ ಆರಂಭಗೊಂಡಿದೆ.
 


ದುಬೈ(ಆ.28): ಬಾಲಿವುಡ್ ನಟಿ ಊರ್ವಶಿ ರೌಟೇಲ್ ಮತ್ತೆ ಸದ್ದು ಮಾಡುತ್ತಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಜೊತೆ ಟ್ವಿಟರ್ ವಾರ್ ಮೂಲಕ ಸಂಚಲನ ಸೃಷ್ಟಿಸಿದ್ದ ಊರ್ವಶಿ ರೌಟೇಲಾ ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಹಾಜರಾಗಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿನ ಪ್ರೇಕ್ಷಕರ ಗ್ಯಾಲರಿಯಲ್ಲಿ ಊರ್ವಶಿ ರೌಟೇಲಾ ಪ್ರತ್ಯಕ್ಷಗೊಂಡಿದ್ದಾರೆ. ಆದರೆ ಈ ಪಂದ್ಯದಲ್ಲಿ ರಿಷಬ್ ಪಂತ್ ಪ್ಲೇಯಿಂಗ್ 11‌ನಲ್ಲಿ ಸ್ಥಾನ ಪಡೆದಿಲ್ಲ. ಇದೇ ವಿಚಾರವನ್ನು ಅಭಿಮಾನಿಗಳು ಮೀಮ್ಸ್ ಮಾಡಿದ್ದಾರೆ. ಪಂತ್ ಇಲ್ಲದ ಹೊತ್ತಲ್ಲಿ ಕ್ರೀಡಾಂಗಣಕ್ಕೆ ಹಾಜರಾದ ಊರ್ವಶಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.  

ಟೀಂ ಇಂಡಿಯಾ ಜರ್ಸಿ ಬಣ್ಣದಲ್ಲಿರುವ ಬ್ಲೂ ಜಾಕೆಟ್ ಮೂಲಕ ಊರ್ವಶಿ ರೌಟೇಲ್ ಕಾಣಿಸಿಕೊಂಡಿದ್ದಾರೆ. ಪಂದ್ಯದ ನಡುವೆ ಕ್ಯಾಮಾರ ಕಣ್ಣು ಊರ್ವಶಿಯತ್ತ ತಿರುಗಿದೆ. ಊರ್ವಶಿಯನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ನೋಡಿದ ಬೆನ್ನಲ್ಲೇ ಅಭಿಮಾನಿಗಳು ಮೀಮ್ಸ್ ಆರಂಭಿಸಿದ್ದಾರೆ. 

Tap to resize

Latest Videos

 

Urvashi Rautela in the stadium and is not in the playing😭😭😭 pic.twitter.com/Ei8U8dHqCI

— ꧁ÄĐ𝕀ƬɎÅ꧂ (@Adityam72049066)

 

Urvashi-Rishabh Controversy: ಬೀದಿಗೆ ಬಂದ ರಿಷಭ್ ಪಂತ್​​-ನಟಿ ಊರ್ವಶಿ ರೌಟೇಲಾ ಜಗಳ

ಸಂದರ್ಶನದಲ್ಲಿ ಪಂತ್ ಕುರಿತು ಹೇಳಿದ್ದ ಊರ್ವಶಿ
ಸಂದರ್ಶನದಲ್ಲಿ ರಿಷಪ್ ಪಂತ್ ಕುರಿತು ಮಾತನಾಡಿದ್ದ ಊರ್ವಶಿ ರೌಟೇಲಾ ವಿವಾದ ಎಬ್ಬಿಸಿದ್ದರು. ಇಲ್ಲಿಂದ ಆರಂಭಗೊಂಡ ಇವರಿಬ್ಬರ ಜಗಳ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ತಾರಕಕ್ಕೇರಿತ್ತು. ಈ ಬೆಳವಣಿಗೆ ಭಾರಿ ಸಂಚಲನ ಸೃಷ್ಟಿಸಿತ್ತು. ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ತನ್ನ ಹಿಂದೆ ಸುತ್ತಿದ್ದರು. ಇನ್ನಿಲ್ಲದಂತೆ ಕಾಡಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಊರ್ವಶಿ ವಿವಾದಕ್ಕೆ ಇನ್‌ಸ್ಟಾಗ್ರಾಮ್ ಮೂಲಕ ರಿಷಪ್ ಪಂತ್ ತಿರುಗೇಟು ನೀಡಿದ್ದರು. ಕೆಲವರು ಸುಳ್ಳುಗಳನ್ನು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ. ದೇವರು ಒಳ್ಳೆಯದು ಮಾಡಲಿ. ನನ್ನನ್ನು ಬಿಟ್ಟುಬಿಡು ಅಕ್ಕ ಎಂದು ಪೋಸ್ಟ್ ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಊರ್ವಶಿ ರೌಟೇಲಾ, ತಮ್ಮ ಬ್ಯಾಟ್ ಬಾಲ್ ಆಟಬೇಡು. ನಾನು ಮುನ್ನಿ ಅಲ್ಲ, ನಿನ್ನಂತ ಚಿಕ್ಕ ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದು ಹಾಳಾಗಲ್ಲ. ರಕ್ಷಾ ಬಂಧನದ ಶುಭಾಶಯ ಎಂದು ಪ್ರತಿಕ್ರಿಯೆ ನೀಡಿದ್ದರು. 

ಮುಂದುವರಿದ ಭಾರತ ತಂಡದ ಪ್ರಯೋಗ: ಹೊರಗುಳಿದ ಪಂತ್‌!
ಟಿ20 ವಿಶ್ವಕಪ್‌ಗೆ ಕೆಲವೇ ವಾರಗಳು ಬಾಕಿ ಇದ್ದರೂ ಭಾರತ ತಂಡ ತನ್ನ ಪ್ರಯೋಗಗಳನ್ನು ಮುಂದುವರಿಸಿದೆ. ತನ್ನ ಯೋಜನೆಯ ಭಾಗಿವಾಗಿ ಏಷ್ಯಾಕಪ್‌ನ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಪ್ರಮುಖ ಆಟಗಾರ ರಿಷಭ್‌ ಪಂತ್‌ರನ್ನು ಹೊರಗಿಡಲಾಯಿತು. ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡಲು ತಂಡದ ಆಡಳಿತ ನಿರ್ಧರಿಸಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತಾದರೂ, ಈ ಸುಳಿವನ್ನು ನಾಯಕ ರೋಹಿತ್‌ ಶರ್ಮಾ ಮುಂಚಿತವಾಗಿಯೇ ನೀಡಿದ್ದರು. ಟೂರ್ನಿಯುದ್ದಕ್ಕೂ ಭಾರತ ಇನ್ನಷ್ಟುಪ್ರಯೋಗಗಳನ್ನು ನಡೆಸುವ ನಿರೀಕ್ಷೆ ಇದ್ದು, ವಿಶ್ವಕಪ್‌ಗೆ ಸೂಕ್ತ ತಂಡ ಸಿದ್ಧಪಡಿಸಿಕೊಳ್ಳಲು ಯತ್ನಿಸಲಿದೆ.


 

Urvashi Rautela just bought a champagne bottle. pic.twitter.com/mI6WO5gD3j

— om rajpurohit (@Omrajguruu)
click me!