
ಅಹಮ್ಮದಾಬಾದ್(ಅ.14) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ಶಾಕ್ ನೀಡಿದೆ. ಅಹಮ್ಮದಾಬಾದ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ವಿಕೆಟ್ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ಅದ್ಭುತ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಜೊತೆ ಹಲವು ಮೀಮ್ಸ್ ಹರಿದಾಡುತ್ತಿದೆ. ಈ ಪಂದ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹಾಜರಿದ್ದರು. ಅಮಿತ್ ಶಾ ಮೈದಾನದಲ್ಲಿ ಹಾಜರಿದ್ದರೆ ಒಂದು ಎಸತೆವೂ ರಾಂಗ್ ಆಗಿಲ್ಲ, ಇನ್ನು ಗೆಲುವು ಕೈತಪ್ಪು ಮಾತೆಲ್ಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯದ ನಡವೆ ಅಮಿತ್ ಶಾ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಕ್ರೀಡಾಂಗಣದಲ್ಲಿ ಹಾಕಿದ್ದ ಸ್ಕ್ರೀನ್‌ನಲ್ಲಿ ಅಮಿತ್ ಶಾ ಪ್ರತ್ಯಕ್ಷಗೊಂಡಿದ್ದರು. ಈ ವೇಳೆ ಹಲವರು ಟ್ವೀಟ್ ಮೂಲಕ ಅಮಿತ್ ಶಾ ಪಂದ್ಯದಲ್ಲಿ ಹಾಜರಿದ್ದಾರೆ. ಮುಂದಿನ ಎಸೆತ ಸಿಕ್ಸರ್ ಎಂದು ಕಮೆಂಟ್ ಮಾಡಿದ್ದಾರೆ.
IND VS PAK ಏಕದಿನ ವಿಶ್ವಕಪ್‌ನಲ್ಲಿ 8ನೇ ಬಾರಿ ತಲೆಬಾಗಿದ ಪಾಕಿಸ್ತಾನ, ಭಾರತಕ್ಕೆ 7 ವಿಕೆಟ್ ಭರ್ಜರಿ ಗೆಲುವು!
ಅಮಿತ್ ಶಾ ಹಾಜರಿದ್ದರೆ ಪಾಕಿಸ್ತಾನ ಸೈಲೆಂಟ್ ಆಗಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಹಲವು ಮೀಮ್ಸ್ ಹರಿದಾಡುತ್ತಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮಣಿಸಿದ ಭಾರತ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಪಾಕಿಸ್ತಾನ ತಂಡ ದಿಟ್ಟ ಆರಂಭ ನೀಡಿದರೂ, ಮಾರಕ ದಾಳಿ ಮೂಲಕ ಕೇವಲ 191 ರನ್‌ಗೆ ಕಟ್ಟಿಹಾಕಿತು. ಪಾಕಿಸ್ತಾನ ನಾಯಕ ಬಾಬರ್ ಅಜಮ್ , ಮೊಹಮ್ಮದ್ ರಿಜ್ವಾನ್, ಇಮಾಮ್ ಉಲ್ ಹಕ್ ದಿಟ್ಟ ಹೋರಾಟ ನೀಡಿದರು. ಆದರೆ ಪಾಕಿಸ್ತಾನ ಹೋರಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಶಫೀಕ್ 20 ರನ್ ಸಿಡಿಸಿದರೆ, ಇಮಾಮ್ ಉಲ್ ಹಕ್ 36 ರನ್ ಸಿಡಿಸಿದರು. ಇನ್ನು ನಾಯಕ ಬಾಬರ್ ಅಜಮ್ 50 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ರಿಜ್ವಾನ್ 49 ರನ್ ಸಿಡಿಸಿ ಔಟಾದರು. ಇನ್ನುಳಿದ ಬ್ಯಾಟ್ಸ್‌ಮನ್ ಅಬ್ಬರಿಸಲು ಸಾಧ್ಯವಾಗಲಿಲ್ಲ. 191 ರನ್‌ಗೆ ಪಾಕ್ ಆಲೌಟ್ ಆಯಿತು.
IND vs PAK ಪೆವಿಲಿಯನ್ ರೈಡ್ ಸಹಾಯಕ್ಕಿದೆ ಹೆಕ್ಟರ್, ಪಾಕಿಸ್ತಾನ ಬ್ಯಾಟಿಂಗ್ ಕುಟುಕಿದ ಎಂಜಿ ಮೋಟಾರ್ಸ್!
ಸುಲಭ ಗುರಿ ಚೇಸಿಂಗ್ ವೇಳೆ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ 86 ರನ್ ಸಿಡಿಸಿದರು. ಶುಭಮನ್ ಗಿಲ್ 16, ವಿರಾಟ್ ಕೊಹ್ಲಿ 16 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಜೇಯ 53 ರನ್ ಸಿಡಿಸಿದರೆ, ರಾಹುಲ್ ಅಜೇಯ 19 ರನ್ ಸಿಡಿಸಿ ಭಾರತಕ್ಕೆ 7 ವಿಕೆಟ್ ಭರ್ಜರಿ ಗೆಲುವು ತಂದುಕೊಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.