ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಪಾಕ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿದ ಭಾರತ, ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಿದೆ.
ಅಹಮ್ಮದಾಬಾದ್(ಅ.14) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿದೆ. ಈ ಬಾರಿ ಟೀಂ ಇಂಡಿಯಾ ಸೋಲಿಸಿ ಹೊಸ ಇತಿಹಾಸ ರಚಿಸುವು ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನ ಸೋಲಿಗೆ ಶರಣವಾಗಿದೆ. ದಿಟ್ಟ ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನಕ್ಕೆ ಭಾರತ ಶಾಕ್ ನೀಡಿತ್ತು. ಕೇವಲ 191 ರನ್‌ಗೆ ಆಲೌಟ್ ಮಾಡಿ ಭಾರಿ ಮೇಲುಗೈ ಸಾಧಿಸಿತ್ತು. ಇನ್ನು 192 ರನ್ ಟಾರ್ಗೆಟ್‌ನ್ನು ಸುಲಭವಾಗಿ ಚೇಸ್ ಮಾಡಿತು. ನಾಯಕ ರೋಹಿತ್ ಶರ್ಮಾ 86 ರನ್ ಸಿಡಿಸಿ ಅಬ್ಬರಿಸುವ ಮೂಲಕ ಗೆಲುವು ಖಚಿತಪಡಿಸಿದರು. ಭಾರತ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 8ನೇ ಬಾರಿಗೆ ಭಾರತಕ್ಕೆ ಶರಣಾಗಿದೆ.
ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿತು. ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾಟದ ಮೂಲಕ ಬೃಹತ್ ಮೊತ್ತ ಟಾರ್ಗೆಟ್ ಸೂಚನೆ ನೀಡಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ ಭಾರತೀಯ ಬೌಲರ್‌ಗಳು ಡಬಲ್ ಶಾಕ್ ನೀಡಿತು. ಪಾಕ್ ತಂಡವನ್ನು 42.5 ಓವರ್‌ಗಳಲ್ಲಿ 191 ರನ್‌ಗೆ ಆಲೌಟ್ ಮಾಡಿತು.
IND vs PAK ಪಂದ್ಯದ ನಡುವೆ ಕಾಣಿಸಿಕೊಂಡ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್, ಪ್ರತಿಕ್ರಿಯಿಸಿದ ಸರ್ಕಾರ!
ಸುಲಭ ಟಾರ್ಗೆಟ್ ನಡುವೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಡೆಂಗ್ಯೂವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಶುಭಮನ್ ಗಿಲ್ 16 ರನ್ ಸಿಡಿಸಿ ಔಟಾದರು. ಇತ್ತ ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 16 ರನ್ ಸಿಡಿಸಿ ಔಟಾದರು. ಆದರೆ ನಾಯಕ ರೋಹಿತ್ ಶರ್ಮಾ ದಿಟ್ಟ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು.
ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ಉಳಿದಿದ್ದ ಕಡೆಯ ಗೆಲುವಿನ ಆಸೆಯೂ ಕಮರಿತು. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಶ್ರೇಯಸ್ ಅಯ್ಯರ್ ಕೂಡ ಉತ್ತಮ ಸಾಥ್ ನೀಡಿದರು. ರೋಹಿತ್ ಶರ್ಮಾ 6 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 86 ರನ್ ಸಿಡಿಸಿ ಔಟಾದರು.
IND vs PAK ಪೆವಿಲಿಯನ್ ರೈಡ್ ಸಹಾಯಕ್ಕಿದೆ ಹೆಕ್ಟರ್, ಪಾಕಿಸ್ತಾನ ಬ್ಯಾಟಿಂಗ್ ಕುಟುಕಿದ ಎಂಜಿ ಮೋಟಾರ್ಸ್!
ಇತ್ತ ಶ್ರೇಯಸ್ ಜವಾಬ್ದಾರಿ ಹೊತ್ತುಕೊಂಡರು. ಅಯ್ಯರ್ ಹಾಗೂ ಕೆಎಲ್ ರಾಹುಲ್ ಜೊತೆಯಾಟ ಭಾರತ ಗೆಲುವಿನತ್ತ ದಾಪುಗಾಲಿಟ್ಟಿತು. ರೋಹಿತ್ ವಿಕೆಟ್ ಪತನದ ಬಳಿಕ ಭಾರತದ ರನ್ ಗತಿ ನಿಧಾನಗೊಂಡಿತು. ಆದರೆ ಎಚ್ಚರಿಕೆ ಹೆಜ್ಜೆ ಮೂಲಕ ಗುರಿಯತ್ತ ಸಾಗಿತು.ಶ್ರೇಯಸ್ ಅಯ್ಯರ್ ಬೌಂಡರಿ ಸಿಡಿಸು ಮೂಲಕ ಹಾಫ್ ಸೆಂಚುರಿ ಪೂರೈಸಿದರು.ರಾಹುಲ್ ಅಜೇಯ 19 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ ಅಜೇಯ 53ರನ್ ಸಿಡಿಸಿದರು. ಭಾರತ 30.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ.