ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಕಿವೀಸ್‌ ಬಳಗಕ್ಕೆ ಭಾರತ ತಿರುಗೇಟು

Published : Jun 22, 2021, 06:16 PM IST
ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಕಿವೀಸ್‌ ಬಳಗಕ್ಕೆ ಭಾರತ ತಿರುಗೇಟು

ಸಾರಾಂಶ

* ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್‌ * 5ನೇ ದಿನದಾಟದ ಮೊದಲ ಸೆಷನ್‌ನಲ್ಲಿ 3 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ವೇಗಿಗಳು * ಶಮಿಗೆ 2, ಇಶಾಂತ್ ಶರ್ಮಾ ಒಂದು ವಿಕೆಟ್

ಸೌಥಾಂಪ್ಟನ್‌(ಜೂ.22): ಮಳೆಯಾಟದ ನಡುವೆಯೇ ಭಾರತದ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ದಿಟ್ಟ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಲಂಚ್ ಬ್ರೇಕ್‌ ವೇಳೆಗೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 135 ರನ್‌ ಬಾರಿಸಿದ್ದು, ಇನ್ನೂ 82 ರನ್‌ ಹಿನ್ನಡೆಯಲ್ಲಿದೆ.

ಐದನೇ ದಿನದಾಟ ಆರಂಭಿಸುವಾಗ ಕೇವಲ 2 ವಿಕೆಟ್ ಕಳೆದುಕೊಂಡು 101 ರನ್‌ ಕಲೆಹಾಕಿದ್ದ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ತನ್ನ ಖಾತೆಗೆ 34 ರನ್‌ ಸೇರಿಸುವಷ್ಟರಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಸ್ ಟೇಲರ್ 11 ರನ್‌ ಗಳಿಸಿ ಶಮಿಗೆ ಮೊದಲ ಬಲಿಯಾದರೆ, ಹೆನ್ರಿ ನಿಕೋಲಸ್‌ 7 ರನ್‌ ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಬಿ.ಜೆ. ವ್ಯಾಟ್ಲಿಂಗ್(1) ಶಮಿಗೆ ಎರಡನೇ ಬಲಿಯಾಗಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: 5ನೇ ದಿನದಾಟ ಪಂದ್ಯ ನಡೆಯುತ್ತಾ?

ಸದ್ಯ ನಾಯಕ ಕೇನ್‌ ವಿಲಿಯಮ್ಸನ್‌(19) ಹಾಗೂ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌(0) ಕ್ರೀಸ್‌ ಕಾಯ್ದುಕೊಂಡಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಟ್‌ಮ್ಯಾನ್‌ಗೆ ಬಿಗ್ ಶಾಕ್ ಕೊಟ್ಟ ಗಂಭೀರ್ ಮಾಸ್ಟರ್ ಪ್ಲಾನ್! 2027ರ ವಿಶ್ವಕಪ್ ಟೀಮ್‌ನಲ್ಲಿ ದೊಡ್ಡ ಬದಲಾವಣೆ?
ಸರ್ಫರಾಜ್‌ಗೆ ದಿಗಿಲು ಹುಟ್ಟಿಸಿದ ಸಿರಾಜ್.. 'ಮಿಯಾ' ಕಂಡು ಗುರಾಯಿಸಿದ್ದು ಹೇಗೆ ನೋಡಿ -ವಿಡಿಯೋ