IND vs NZ ಭಾರತದ ದಾಳಿಗೆ ಕಂಗಾಲಾದ ನ್ಯೂಜಿಲೆಂಡ್, 100 ರನ್ ಟಾರ್ಗೆಟ್

Published : Jan 29, 2023, 08:45 PM ISTUpdated : Jan 29, 2023, 09:04 PM IST
IND vs NZ ಭಾರತದ ದಾಳಿಗೆ ಕಂಗಾಲಾದ ನ್ಯೂಜಿಲೆಂಡ್, 100 ರನ್ ಟಾರ್ಗೆಟ್

ಸಾರಾಂಶ

ಮೊದಲ ಪಂದ್ಯದಲ್ಲಿ ಅಬ್ಬರಿಸಿದ ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯದಲ್ಲಿ ಮಕಾಡೆ ಮಲಗಿದೆ. ಟೀಂ ಇಂಡಿಯಾ ಪ್ರಖರ ದಾಳಿಗೆ ನ್ಯೂಜಿಲೆಂಡ್ 99 ರನ್ ಸಿಡಿಸಿದೆ. ಈ ಮೂಲಕ ಭಾರತಕ್ಕೆ 100 ರನ್ ಟಾರ್ಗೆಟ್ ನೀಡಿದೆ.  

ಲಖನೌ(ಜ.29):  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯ ರೋಚಕ ಘಟ್ಟ ತಲುಪಿದೆ. ಮೊದಲ ಪಂದ್ಯ ಗೆದ್ದ ನ್ಯೂಜಿಲೆಂಡ್ ಎರಡನೇ ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಭಾರತದ ದಿಟ್ಟ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 99 ರನ್ ಸಿಡಿಸಿದೆ. ಇದೀಗ ಭಾರತದ ಗೆಲುವಿಗೆ 100 ರನ್ ಸಿಡಿಸಿಬೇಕಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ ಶಾಕ್ ನೀಡಿತು. ಆದರೆ ದೃತಿಗೆಡದ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ಅಬ್ಬರಕ್ಕೆ ಬ್ರೇಕ್ ಹಾಕಿತು. ಫಿನ್ ಅಲೆನ್ ಹಾಗೂ ಡೆವೋನ್ ಕಾನ್ವೇ ಅಬ್ಬರಿಸಲು ಸಾಧ್ಯವಾಗಲಿಲ್ಲ. ಅಲೆನ್ 11 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ 21 ರನ್‌ಗೆ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. 

ಇಂಗ್ಲೆಂಡ್ ಮಣಿಸಿ ಚೊಚ್ಚಲ U19 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡ!

ಫಿನ್ ಅಲೆನ್ ಬೆನ್ನಲ್ಲೇ ಡೆವೋನ್ ಕಾನ್ವೇ ವಿಕೆಟ್ ಪತನಗೊಂಡಿತು. ಕಾನ್ವೇ 11 ರನ್ ಸಿಡಿಸಿ ನಿರ್ಗಮಿಸಿದರು. ಗ್ಲೆನ್ ಫಿಲಿಪ್ಸ್ ಕೇವಲ 5 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಡರಿಲ್ ಮಿಚೆಲ್ 8 ರನ್ ಸಿಡಿಸಿ ಔಟಾದರು. ಮಾರ್ಕ್ ಚಾಪ್‌ಮ್ಯಾನ್ 14 ರನ್ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಯಾವುದೇ ಬ್ಯಾಟ್ಸ್‌ಮನ್ ಜೊತೆಯಾಟ ನೀಡಲು ಟೀಂ ಇಂಡಿಯಾ ಬೌಲರ್ಸ್ ಅವಕಾಶ ನೀಡಲಿಲ್ಲ.

ಮಿಚೆಲ್ ಬ್ರೇಸ್‌ವೆಲ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಇವರ ಜೊತೆಯಾಟವೂ ಹೆಚ್ಚು ಹೊತ್ತು ಇರಲಿಲ್ಲ. ಬ್ರೇಸ್‌ವೆಲ್ 14 ರನ್ ಸಿಡಿಸಿ ಔಟಾದರು. ಸ್ಯಾಂಟ್ನರ್ ಹೋರಾಟ ಮುಂದುವರಿಸಿದರು. ಆದರೆ ಐಶ್ ಸೋಧಿ ಹಾಗೂ ಲ್ಯೂಕಿ ಫರ್ಗ್ಯೂಸನ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 

ಸ್ಯಾಂಟ್ನರ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಸ್ಯಾಂಟ್ನರ್ ಅಜೇಯ 20 ರನ್ ಸಿಡಿಸಿದರೆ, ಜಾಕೋಬ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ 8 ವಿಕೆಟ್ ನಷ್ಟಕ್ಕೆ 99 ರನ್ ಸಿಡಿಸಿತು. 

Ind vs NZ ಧೋನಿ, ರೈನಾ ಟಿ20 ದಾಖಲೆ ಮುರಿದ ಸೂರ್ಯಕುಮಾರ್ ಯಾದವ್..!

ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಮಿಚೆಲ್‌ ಅಬ್ಬರದಿಂದ ಕಿವೀಸ್‌ ಸ್ಫೋಟಕ ಆರಂಭ ಪಡೆಯಿತು. ಆ್ಯಲೆನ್‌ ಹಾಗೂ ಕಾನ್‌ವೇ 4.2 ಓವರಲ್ಲಿ 43 ರನ್‌ ಜೊತೆಯಾಟವಾಡಿದರು. ಕಾನ್‌ವೇ 52 ರನ್‌ ಗಳಿಸಿ ಔಟಾದ ಬಳಿಕ ಡ್ಯಾರೆಲ್‌ ಮಿಚೆಲ್‌ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 30 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ನೊಂದಿಗೆ 59 ರನ್‌ ಸಿಡಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣರಾದರು.

ಸ್ಕೋರ್‌: ನ್ಯೂಜಿಲೆಂಡ್‌ 20 ಓವರಲ್ಲಿ 176/6(ಮಿಚೆಲ್‌ 59*, ಕಾನ್‌ವೇ 52, ಆ್ಯಲೆನ್‌ 35, ವಾಷಿಂಗ್ಟನ್‌ 2-22), ಭಾರತ 20 ಓವರಲ್ಲಿ 155/9(ವಾಷಿಂಗ್ಟನ್‌ 50, ಸೂರ್ಯ 47, ಸ್ಯಾಂಟ್ನರ್‌ 2-11, ಬ್ರೇಸ್‌ವೆಲ್‌ 2-31)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ