IND vs NZ T20: ಅಕ್ಸರ್ ಪಟೇಲ್ ಜಾದೂ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು!

By Suvarna News  |  First Published Nov 21, 2021, 10:34 PM IST
  • 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ
  • 3ನೇ ಪಂದ್ಯದಲ್ಲಿ ಭಾರತಕ್ಕೆ 73 ರನ್ ಭರ್ಜರಿ ಗೆಲುವು
  • ರೋಹಿತ್ ನಾಯಕತ್ವ, ದ್ರಾವಿಡ್ ಮಾರ್ಗರ್ಶನ, ಭಾರತಕ್ಕೆ ಸರಣಿ

ಕೋಲ್ಕತಾ(ನ.21): ಟಿ20 ವಿಶ್ವಕಪ್(T20 world Cup 2021)  ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದ ನಿರಾಸೆ ಅನುಭವಿಸಿದ್ದ ಭಾರತ(Team India) ತಂಡ ಭರ್ಜರಿಯಾಗಿ ನ್ಯೂಜಿಲೆಂಡ್ ಸರಣಿ ಕೈವಶ ಮಾಡಿದೆ.  ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕ್ವೀನ್ ಸ್ವೀಪ್(Clean sweep Victory) ಗೆಲುವು ಕಂಡಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 73 ರನ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 3-0 ಅಂತರದಲ್ಲಿ ಟಿ20 ಸರಣಿ ಗೆದ್ದುಕೊಂಡಿತು. 

ವಿರಾಟ್ ಕೊಹ್ಲಿ(Virat Kohli) ನಾಯಕತ್ವ ತ್ಯಜಿಸಿ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆದ ಮೊದಲ ಟಿ20 ಸರಣಿ ಇದಾಗಿದೆ. ಮೊದಲ ಸರಣಿಯಲ್ಲಿ ರೋಹಿತ್ ಶರ್ಮಾ(Rohit Sharma) ಸರಣಿ ಕ್ವೀನ್ ಸ್ವೀಪ್ ಗೆಲುವು ದಾಖಲಿಸಿದ್ದಾರೆ. ನೂತನ ಕೋಚ್ ರಾಹುಲ್ ದ್ರಾವಿಡ್(Coach Rahul Dravid) ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಈ ಮೂಲಕ ಕೋಚ್ ಆದ ಮೊದಲ ಸವಾಲಿನಲ್ಲೇ ದ್ರಾವಿಡ್ ಫುಲ್ ಮಾರ್ಕ್ಸ್ ಪಡೆದಿದ್ದಾರೆ.

Tap to resize

Latest Videos

IND vs NZ : ಕೋಲ್ಕತಾ ಟಿ20 ಪಂದ್ಯಕ್ಕೂ ಮುನ್ನ 11 ಮಂದಿ ಬಂಧನ!

ರೋಹಿತ್ ಶರ್ಮಾ ಹಾಫ್ ಸೆಂಚುರಿ, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20 ಹಾಗೂ ದೀಪಕ್ ಚಹಾರ್ ಸ್ಫೋಟಕ 21 ರನ್ ನೆರವಿನಿಂದ ಟೀಂ ಇಂಡಿಯಾ ಕೋಲ್ಕತಾ ಟಿ20 ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.  185 ರನ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಅಕ್ಸರ್ ಪಟೇಲ್(Axar patel) ಸ್ಪಿನ್ ದಾಳಿಗೆ ತತ್ತರಿಸಿತು. 21 ರನ್‌ಗಳಿಸುವಷ್ಟರಲ್ಲೇ ನ್ಯೂಜಿಲೆಂಡ್ ಮೊದಲ ವಿಕೆಟ್ ಪತನಗೊಂಡಿತು. 

ಡರಿಲ್ ಮಿಚೆಲ್ ಕೇವಲ 5 ರನ್ ಸಿಡಿಸಿ ಔಟಾದರು. ಮಾರ್ಕ್ ಚಂಪನ್ ಹಾಗೂ ಗ್ಲೆನ್ ಫಿಲಿಪ್ಸ್ ಡಕೌಟ್ ಆದರು. 3 ವಿಕೆಟ್ ಕಬಳಿಸಿದ ಅಕ್ಸರ್ ಪಟೇಲ್ ಟೀಂ ಇಂಡಿಯಾ ಭರ್ಜರಿ ಮೇಲುಗೈ ತಂದುಕೊಟ್ಟರು. 30 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ ಆಸರೆಯಾದರು. ಟಿ20 ಪಂದ್ಯದ ಪವರ್ ಪ್ಲೇನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಪೈಕಿ ಅಕ್ಸರ್ ಪಟೇಲ್ 3ನೇ ಸ್ಥಾನ ಅಲಂಕರಿಸಿದ್ದಾರೆ. 

ಟಿ20 ಪಂದ್ಯದ ಪವರ್ ಪ್ಲೇನಲ್ಲಿ ಗರಿಷ್ಠ ವಿಕೆಟ್ ಸಾಧಕರು:
4 ವಿಕೆಟ್, ಆರ್ ಅಶ್ವಿನ್ vs ಶ್ರೀಲಂಕಾ, 2016
3 ವಿಕೆಟ್, ವಾಶಿಂಗ್ಟನ್ ಸಿಂದರ್ vs ಬಾಂಗ್ಲಾದೇಶ, 2018
3 ವಿಕೆಟ್, ಅಕ್ಸರ್ ಪಟೇಲ್ vs ನ್ಯೂಜಿಲೆಂಡ್, 2021

ಗಪ್ಟಿಲ್ ಏಕಾಂಗಿ ಹೋರಾಟ ನೀಡಿದರು. ಟಿಮ್ ಸೈಫರ್ಟ್ ಸಾಥ್ ಹೆಚ್ಚು ಹೊತ್ತು ಇರಲಿಲ್ಲ. ದಿಟ್ಟ ಪ್ರದರ್ಶನ ನೀಡಿದ ಗಪ್ಟಿಲ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಗಪ್ಟಿಲ್ 36 ಎಸೆತದಲ್ಲಿ 51 ರನ್ ಸಿಡಿಸಿ ಔಟಾದರು. ಟಿಮ್ ಸೈಫರ್ಟ್ 17 ರನ್ ಸಿಡಿಸಿ ಔಟಾದರು.  ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅಬ್ಬರಿಸಲಿಲ್ಲ.

IPL 2022: ಅಭಿಮಾನಿಗಳಿಗೆ ಗುಡ್ ನ್ಯೂಸ್, ಭಾರತದಲ್ಲಿ ಮುಂದಿನ ಐಪಿಎಲ್ ಖಚಿತಪಡಿಸಿದ BCCI!

ಆ್ಯಡಮ್ ಮಿಲ್ನೆ 7 ರನ್ ಸಿಡಿಸಿ ಔಟಾದರು. ಐಶ್ ಸೋಧಿ 9 ರನ್ ಸಿಡಿಸಿ ನಿರ್ಗಮಿಸಿದರು. ಲ್ಯೂಕಿ ಫರ್ಗ್ಯೂಸನ್ 14 ರನ್ ಸಿಡಿಸಿ ಔಟಾದರು. ಈ ಮೂಲಕ ನ್ಯೂಜಿಲೆಂಜ್ 17.2 ಓವರ್‌ಗಳಲ್ಲಿ 111 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ 73 ರನ್ ಗೆಲುವು ದಾಖಲಿಸಿ, ಸರಣಿ ಗೆದ್ದುಕೊಂಡಿತು. 3-0 ಅಂತರದಲ್ಲಿ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. 
 

click me!