IND vs NZ T20: ರೋಹಿತ್ ಶರ್ಮಾ ಸಿಕ್ಸರ್ ದಾಖಲೆ, ನ್ಯೂಜಿಲೆಂಡ್‌ಗೆ 185 ರನ್ ಗುರಿ!

By Suvarna NewsFirst Published Nov 21, 2021, 8:53 PM IST
Highlights
  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20
  • ನ್ಯೂಜಿಲೆಂಡ್‌ಗೆ 185 ರನ್ ಟಾರ್ಗೆಟ್ ನೀಡಿದ ಭಾರತ
  • ಟಿ20 ಸಿಕ್ಸರ್‌ನಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ

ಕೋಲ್ಕತಾ(ನ.21):   ಉತ್ತಮ ಆರಂಭ, ದಿಢೀರ್ ವಿಕೆಟ್ ಪತನದ ನಡುವೆ ನ್ಯೂಜಿಲೆಂಡ್(New zealand) ವಿರುದ್ಧ 3ನೇ ಹಾಗೂ ಅಂತಿಮ T20 ಪಂದ್ಯದಲ್ಲಿ ಟೀಂ ಇಂಡಿಯಾ(Team India) 7 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿದೆ. ಈಗಾಗಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಗೆಲುವಿನತ್ತ ಚಿತ್ತ ಹರಿಸಿದ್ದರೆ, ಇತ್ತ ನ್ಯೂಜಿಲೆಂಡ್ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ತವಕದಲ್ಲಿದೆ.

ಕೋಲ್ಕತಾ ಪಂದ್ಯದಲ್ಲಿ( Kolkata) ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ(Rohit Sharma) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಹುಬೇಗನೆ ವಿಕೆಟ್ ಕಬಳಿಸುವ ಲೆಕ್ಕಾಚಾರದಲ್ಲಿದ್ದ ನ್ಯೂಜಿಲೆಂಡ್‌ಗೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಶಾಕ್ ನೀಡಿದರು. ಸ್ಫೋಟಕ ಆರಂಭ ನೀಡುವ ಮೂಲಕ ಅರ್ಧಶತಕದ ಜೊತೆಯಾಟ ಆಡಿದರು.  ಮೊದಲ ವಿಕೆಟ್‌ಗೆ ಈ ಜೋಡಿ 69 ರನ್ ಜೊತೆಯಾಟ ನೀಡಿತು. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಪವರ್ ಪ್ಲೇನಲ್ಲಿ ದಾಖಲಿಸಿದ 3ನೇ ಅತ್ಯುತ್ತಮ ಮೊತ್ತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

IND vs NZ : ಕೋಲ್ಕತಾ ಟಿ20 ಪಂದ್ಯಕ್ಕೂ ಮುನ್ನ 11 ಮಂದಿ ಬಂಧನ!

ಭಾರತ ನ್ಯೂಜಿಲೆಂಡ್ ಟಿ20ಯಲ್ಲಿ ಗರಿಷ್ಠ ಪವರ್ ಪ್ಲೇ ಸ್ಕೋರ್(Power play)
76/1 ಜೋಹಾನ್ಸ್‌ಬರ್ಗ್, 2007
69/0 ಹ್ಯಾಮಿಲ್ಟನ್, 2020
69/0 ಕೋಲ್ಕತಾ, 2021

ತವರಿನಲ್ಲಿ ಟೀಂ ಇಂಡಿಯಾ ಗರಿಷ್ಠ ಪವರ್ ಪ್ಲೇ ಸ್ಕೋರ್:(T20Is)
77/1 vs ಶ್ರೀಲಂಕಾ,  2009
72/0 vs ವೆಸ್ಟ್ ಇಂಡೀಸ್,2019
70/0 vs ಶ್ರೀಲಂಕಾ, 2016
69/0 vs ನ್ಯೂಜಿಲೆಂಡ್, 2021

ಇಶಾನ್ ಕಿಶನ್ 21 ಎಸೆತದಲ್ಲಿ 29 ರನ್ ಸಿಡಿಸಿ ಔಟಾದರು. ಕಿಶನ್ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಡಕೌಟ್ ಆದರು. ಇತ್ತ ರಿಷಬ್ ಪಂತ್ 4 ರನ್ ಸಿಡಿಸಿ ನಿರ್ಗಮಿಸಿದರು.  ಟೀಂ ಇಂಡಿಯಾ ದಿಢೀರ್ 3 ವಿಕೆಟ್ ಕಳೆದುಕೊಂಡಿತು. ದಿಟ್ಟ ಹೋರಾಟ ನೀಡಿದ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದರು. ರೋಹಿತ್ ಶರ್ಮಾ ಇದೀಗ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟರ್ ಅನ್ನೋ ದಾಖಲೆ ಬರೆದಿದ್ದಾರೆ. ಮೊದಲ ಸ್ಥಾನದಲ್ಲಿ 161 ಸಿಕ್ಸರ್ ಸಿಡಿಸಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗಪ್ಟಿಲ್ ಇದ್ದಾರೆ.  ರೋಹಿತ್ ಶರ್ಮಾ 31 ಎಸೆತದಲ್ಲಿ 56 ರನ್ ಸಿಡಿಸಿ ಔಟಾದರು.  

IPL 2022: ಅಭಿಮಾನಿಗಳಿಗೆ ಗುಡ್ ನ್ಯೂಸ್, ಭಾರತದಲ್ಲಿ ಮುಂದಿನ ಐಪಿಎಲ್ ಖಚಿತಪಡಿಸಿದ BCCI!

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ 50+ ಸ್ಕೋರ್:
30, ರೋಹಿತ್ ಶರ್ಮಾ
29, ವಿರಾಟ್ ಕೊಹ್ಲಿ
25, ಬಾಬರ್ ಅಜಮ್
22, ಡೇವಿಡ್ ವಾರ್ನರ್

ರೋಹಿತ್ ಶರ್ಮಾ ವಿಕೆಟ್ ಕಬಳಿಸಿದ ಐಶ್ ಸೋಧಿ, ಭಾರತ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಅನ್ನೋ ದಾಖಲೆ ಬರೆದಿದ್ದಾರೆ.

ಭಾರತ ವಿರುದ್ಧದ ಟಿ20 ಪಂದ್ಯದಲ್ಲಿ ಗರಿಷ್ಠ ವಿಕೆಟ್ ಟೇಕರ್:
20 ಐಶ್ ಸೋಧಿ
16 ಮಿಚೆಲ್ ಸ್ಯಾಂಟ್ನರ್
15 ಟಿಮ್ ಸೌಥಿ
14 ದುಷ್ಮಂತ್ ಚಮೀರಾ
11 ಉಮರ್ ಗುಲ್/ ಟ್ರೆಂಟ್ ಬೌಲ್ಟ್

ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಹೋರಾಟ ಟೀಂ ಇಂಡಿಯಾಗೆ ಚೇತರಿಕೆ ನೀಡಿತು. ಶ್ರೇಯಸ್ ಅಯ್ಯರ್ 25 ರನ್ ಕಾಣಿಕೆ ನೀಡಿದರೆ, ವೆಂಕಟೇಶ್ ಅಯ್ಯರ್ 20 ರನ್ ಸಿಡಿಸಿ ಔಟಾದರು.  ಅಂತಿಮ ಹಂತದಲ್ಲಿ ಹರ್ಷಲ್ ಪಟೇಲ್ ಹಾಗೂ ದೀಪಕ್ ಚಹಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಟೇಲ್ 18 ರನ್ ಸಿಡಿಸಿದರು. ಇತ್ತ ದೀಪಕ್ 8 ಎಸೆತದಲ್ಲಿ 21 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.

click me!