IND vs NZ ಮೊದಲ ಟಿ20ಯಲ್ಲಿ ಕಿವೀಸ್ ದಿಟ್ಟ ಹೋರಾಟ, ಭಾರತಕ್ಕೆ 177ರನ್ ಟಾರ್ಗೆಟ್!

By Suvarna NewsFirst Published Jan 27, 2023, 8:45 PM IST
Highlights

ಭಾರತ ದಿಟ್ಟ ಬೌಲಿಂಗ್ ಪ್ರದರ್ಶನದ ನಡುವೆಯೂ ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ  176 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. 

ರಾಂಚಿ(ಜ.27): ಡೆವೋನ್ ಕೊನ್ವೇ ಅರ್ಧಶತಕ, ಫಿನ್ ಅಲೆನ್ ಹಾಗೂ ಡರಿಲ್ ಮೆಚೆಲ್ ದಿಟ್ಟ ಹೋರಾಟದಿಂದ ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ. ಇದೀಗ ಟೀಂ ಇಂಡಿಯಾ ಗೆಲುವಿಗೆ 177 ರನ್ ಟಾರ್ಗೆಟ್ ಮುಂದಿದೆ. ರಾಂಚಿ ಕ್ರೀಡಾಂಗಣದಲ್ಲಿ ಭಾರತಕ್ಕೆ ಚೇಸಿಂಗ್ ಅಂದುಕೊಂಡಷ್ಟು ಸುಲಭವಿಲ್ಲ. ಡ್ಯೂ ಫ್ಯಾಕ್ಟರ್ ಕೊಂಚ ವರದಾನವಾದರೂ ನ್ಯೂಜಿಲೆಂಡ್ ಬೌಲಿಂಗ್ ಮುಂದೆ ದಿಟ್ಟ ಹೋರಾಟ ನೀಡಬೇಕಾದ ಅನಿವಾರ್ಯತೆ ಇದೆ. 

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಎದುರಾಳಿಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿತ್ತು. ಆದರೆ ಫಿನ್ ಅಲೆನ್ ಹಾಗೂ ಡೇನ್ ಕೊನ್ವೆ ಹೋರಾಟ ಭಾರತಕ್ಕೆ ತಲೆನೋವಾಯಿತು. ಬೃಹತ್ ಮೊತ್ತದತ್ತ ಸಾಗಿದೆ ಈ ಜೊತೆಯಾಟಕ್ಕೆ ವಾಶಿಂಗ್ಟನ್ ಸುಂದರ್ ಬ್ರೇಕ್ ಹಾಕಿದರು. ಫಿನ್ ಅಲೆನ್ 35 ರನ್ ಸಿಡಿಸಿ ಔಟಾದರು. 

ICC ODI Rankings: ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿಸಿದ ವೇಗಿ ಮೊಹಮ್ಮದ್ ಸಿರಾಜ್‌..!

ಡೆವೋನ್ ಕಾನ್ವೋ ಹೋರಾಟ ಮುಂದುವರಿಸಿದರು. ಆದರೆ ಮಾರ್ಕ್ ಚಾಂಪ್‌ಮ್ಯಾನ್ ಡಕೌಟ್ ಆದರು. ಇದು ಕಿವೀಸ್‌ಗೆ ಹೊಡೆತ ನೀಡಿತು. ಹೋರಾಟದ ಸೂಚನೆ ನೀಡಿದ ಗ್ಲೆನ್ ಫಿಲಿಪ್ಸ್ 17 ರನ್ ಸಿಡಿಸಿ ನಿರ್ಗಮಿಸಿದರು. 103 ರನ್‌ಗಳಿಗೆ ನ್ಯೂಜಿಲೆಂಡ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆದರೆ ಡೆವೋನ್ ಬ್ಯಾಟಿಂಗ್ ನ್ಯೂಜಿಲೆಂಡ್ ತಂಡದ ಆತಂಕ ದೂರ ಮಾಡಿತು. ಡೆವೋನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊನ್ವೇ 35 ಎಸೆತದಲ್ಲಿ 52 ರನ್ ಸಿಡಿಸಿ ನಿರ್ಗಮಿಸಿದರು. ಅರ್ಶದೀಪ್ ಸಿಂಗ್ ಎಸೆತದಲ್ಲಿ ಕೊನ್ವೇ ದೀಪಕ್ ಹೂಡಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಬಳಿಕ ಡರಿಲ್ ಮಿಚೆಲ್ ಹೋರಾಟ ಆರಂಭಗೊಂಡಿತು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. 

ಮಿಚೆಲ್ ಬ್ರೇಸ್‌ವೆಲ್ 1 ರನ್ ಸಡಿಸಿ ನಿರ್ಗಮಿಸಿದರು. ಇತ್ತ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಡರಿಲ್ ಹಾಫ್ ಸೆಂಚುರಿ ಸಿಡಿಸಿದರು. ಅಂತಿಮ ಓವರ್‌ಗಳಲ್ಲಿ ಮತ್ತೆ ರನ್ ವೇಗ ಹೆಚ್ಚಿಸಿದರು. ಆದರೆ ನಾಯಕ ಮಿಚೆಲ್ ಸ್ಯಾಂಟ್ನರ್ 7ರನ್ ಸಿಡಿಸಿ ಔಟಾದರು. ಡರಿಲ್ ಮಿಚೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ನೆರವಾದರು.  ಡರಿಲ್ ಮಿಚೆಲ್ 30 ಎಸೆತದಲ್ಲಿ ಅಜೇಯ 59 ರನ್ ಕಾಣಿಕೆ ನೀಡಿದರು. ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತು. ಭಾರತದ ಪರ ವಾಶಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರು. ಇನ್ನು ಅರ್ಶದೀಪ್ ಸಿಂಗ್ 1, ಶಿವಂ ಮಾವಿ 1 ವಿಕೆಟ್ ಕಬಳಿಸಿದರು 

ಮೈದಾನದಲ್ಲೇ ಶಾರ್ದೂಲ್ ಠಾಕೂರ್‌ ಮೇಲೆ ತಾಳ್ಮೆ ಕಳೆದುಕೊಂಡ ಕ್ಯಾಪ್ಟನ್

177 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇನ್ ಫಾರ್ಮ್ ಬ್ಯಾಟ್ಸ್‌ಮನ್ ತಂಡದಲ್ಲಿದ್ದಾರೆ. ಇಶಾನ್ ಕಿಶನ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಅತ್ತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಇಂದಿನ ಹೋರಾಟ ಮತ್ತಷ್ಟು ರೋಚಕವಾಗಲಿದೆ.

click me!