Latest Videos

9 ವರ್ಷಗಳಾಯ್ತು, ಈಗಲೂ ರೋಹಿತ್ ಶರ್ಮಾ ಜತೆಗಿನ ಬಾಂಧವ್ಯ ಗಟ್ಟಿಯಾಗಿದೆ ಎಂದ ಧವನ್..!

By Naveen KodaseFirst Published Jul 13, 2022, 1:30 PM IST
Highlights

9 ವರ್ಷಗಳಿಂದ ಆರಂಭಿಕರಾಗಿ ಮಿಂಚುತ್ತಿರುವ ರೋಹಿತ್ ಶರ್ಮಾ-ಶಿಖರ್ ಧವನ್
ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶತಕದ ಜತೆಯಾಟ ನಿಭಾಯಿಸಿದ ಈ ಜೋಡಿ
ರೋಹಿತ್ ಜತೆಗಿನ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ ಎಂದ ಗಬ್ಬರ್ ಸಿಂಗ್

ಲಂಡನ್‌(ಜು.13): ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್, ತಮ್ಮ ಮತ್ತು ರೋಹಿತ್ ಶರ್ಮಾ ಜತೆಗಿನ ಬಾಂಧವ್ಯ ಸಾಕಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಇನ್ನು ಮೊದಲ ಏಕದಿನ ಇಂಗ್ಲೆಂಡ್ ನೀಡಿದ್ದ 111 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸಿತು

ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 110 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ(76*) ಹಾಗೂ ಶಿಖರ್ ಧವನ್(31*) ಮುರಿಯದ 114 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಮುಕ್ತಾಯದ ಬಳಿಕ ಟ್ವೀಟ್ ಮಾಡಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, 9 ವರ್ಷಗಳಾಯ್ತು. ರೋಹಿತ್ ಶರ್ಮಾ ಜತೆಗಿನ ಸಂಬಂಧ ಈಗಲೂ ಗಟ್ಟಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

9 years on, the bond is still strong 💪 Congratulations to the Team India for the spectacular victory ✌️ pic.twitter.com/eWiQvCP3zq

— Shikhar Dhawan (@SDhawan25)

ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5,000 ರನ್ ಬಾರಿಸಿದ ನಾಲ್ಕನೇ ಆರಂಭಿಕ ಜೋಡಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ಬಾರಿಗೆ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳೆಯಲ್ಲಿ ಭಾರತದ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿತ್ತು. 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಅದ್ಭುತ ಜತೆಯಾಟವಾಡುವ ಮೂಲಕ ಭಾರತ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದಾದ ಬಳಿಕ ಕಳೆದ 9 ವರ್ಷಗಳಿಂದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆರಂಭಿಕ ಜೋಡಿಯಾಗಿ ಯಶಸ್ವಿಯಾಗಿದೆ.

Eng vs Ind: ಕ್ಯಾಪ್ಟನ್‌ ರೋಹಿತ್ ಭರ್ಜರಿ ಬ್ಯಾಟಿಂಗ್,‌ ಭಾರತಕ್ಕೆ 10 ವಿಕೆಟ್‌ ವಿನ್‌!

2013ರ ಬಳಿಕ ಈ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಏಕದಿನ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಆರಂಭಿಕ ಜೋಡಿಯಾಗಿ ಗುರುತಿಸಿಕೊಂಡಿದೆ. ಸಚಿನ್ ತೆಂಡುಲ್ಕರ್-ಸೌರವ್ ಗಂಗೂಲಿ ಬಳಿಕ ಏಕದಿನ ಕ್ರಿಕೆಟ್ ಮಾದರಿಯಲ್ಲಿ 5000 ರನ್‌ಗಳ ಜತೆಯಾಟವಾಡಿದ ಭಾರತದ ಎರಡನೇ ಓಪನ್ನಿಂಗ್ ಜೋಡಿ ಎನ್ನುವ ಕೀರ್ತಿಗೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಪಾತ್ರವಾಗಿದೆ. ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿ 1996ರಿಂದ 2007ರ ಅವಧಿಯವರೆಗೆ ಟೀಂ ಇಂಡಿಯಾ ಆರಂಭಿಕರಾಗಿ 21 ಶತಕ ಹಾಗೂ 23 ಅರ್ಧಶತಕ ಸಹಿತ ಒಟ್ಟು 6,609 ರನ್ ಬಾರಿಸಿದ್ದಾರೆ. 

ಇಂಗ್ಲೆಂಡ್ ವಿರುದ್ದ ಮೊದಲ ಬಾರಿ 10 ವಿಕೆಟ್ ಗೆಲುವು

ಭಾರತ ಕ್ರಿಕೆಟ್ ತಂಡವು ಏಕದಿನ ಮಾದರಿಯಲ್ಲಿ 7ನೇ ಬಾರಿ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇಂಗ್ಲೆಂಡ್ ತಂಡದ ವಿರುದ್ದ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಇದಕ್ಕೂ ಮೊದಲು ಜಿಂಬಾಬ್ವೆ(2 ಬಾರಿ), ಈಸ್ಟ್ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಕೀನ್ಯಾ ವಿರುದ್ದ 10 ವಿಕೆಟ್‌ಗಳ ಜಯ ಸಾಧಿಸಿತ್ತು.

click me!