ಮೂರೇ ದಿನಕ್ಕೆ ಮುಗಿಯಲಿದೆ 3ನೇ ಟೆಸ್ಟ್ ಪಂದ್ಯ, ಆಸೀಸ್‌ಗೆ ಸುಲಭ ಟಾರ್ಗೆಟ್ ನೀಡಿದ ಭಾರತಕ್ಕೆ ಸಂಕಷ್ಟ!

By Suvarna NewsFirst Published Mar 2, 2023, 4:59 PM IST
Highlights

ಆಸ್ಟ್ರೇಲಿಯಾ ವಿರುದ್ದದ 3ನೇ ಟೆಸ್ಟ್ ಪಂದ್ಯವೂ ಮೂರೇ ದಿನಕ್ಕೆ ಮುಕ್ತಾಯಗೊಳ್ಳಲಿದೆ.ಆದರೆ ಕಳೆದೆರಡು ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುುವು ಸುಲಭವಲ್ಲ. ಎರಡನೇ ಇನ್ನಿಂಗ್ಸ್‌ನಲ್ಲೂ ನಿರಾಸೆ ಮೂಡಿಸಿರುವ ಭಾರತ, ಆಸ್ಟ್ರೇಲಿಯಾ ಗೆಲುವಿಗೆ 76 ರನ್ ಸುಲಭ ಟಾರ್ಗೆಟ್ ನೀಡಲಾಗಿದೆ.
 

ಇಂದೋರ್(ಮಾ.02): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ಟೀಂ ಇಂಡಿಯಾಗೆ ಇದೀಗ ಬ್ರೇಕ್ ಬೀಳುವ ಸಾಧ್ಯತೆಗಳು ಗೋಚರಿಸುತ್ತಿದೆ. 3ನೇ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮಾಡಲು ವಿಫಲವಾಗಿರುವ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ 163 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 76 ರನ್ ಸುಲಭ ಟಾರ್ಗೆಟ್ ನೀಡಲಾಗಿದೆ. ಮೂರನೇ ದಿನದಾಟದಲ್ಲಿ ಪಂದ್ಯ ಅಂತ್ಯಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.ಗುರಿ ಅಲ್ಪ ಕಾರಣ ಆಸ್ಟ್ರೇಲಿಯಾಗೆ ಗೆಲುವಿನ ಶೇಕಡ ಹೆಚ್ಚಿದೆ. ಆದರೆ ನಾಲ್ಕನೇ ಇನ್ನಿಂಗ್ಸ್ ಕಾರಣ ಪಿಚ್ ಹಾಗೂ ಪರಿಸ್ಥಿತಿ ಭಾರತೀಯ ಬೌಲರ್‌ಗೂ ನೆರವಾಗಲಿದೆ ಅನ್ನೋದು ಮರೆಯುವಂತಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 197ರನ್‌ಗೆ  ಭಾರತ ಆಲೌಟ್ ಮಾಡಿತು. ಆದರೆ ಆಸ್ಟ್ರೇಲಿಯಾ 88 ರನ್ ಮುನ್ನಡೆ ಪಡೆದುಕೊಂಡು ಸುಸ್ಥಿತಿ ಕಾಪಾಡಿಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಆಡಲು ಭಾರತ ಮುಂದಾಗಿತ್ತು. ಆದರೆ ಕೈಗೂಡಲಿಲ್ಲ. ಸ್ಪಿನ್ನರ್ ನಥನ್ ಲಿಯೋನ್ ದಾಳಿಗೆ ಭಾರತ ತತ್ತರಿಸಿತು. ಶುಭ್‌ಮನ್ ಗಿಲ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ನಾಯಕ ರೋಹಿತ್ ಶರ್ಮಾ 12 ರನ್ ಸಿಡಿಸಿ ಔಟಾದರು.

Eng vs NZ ಫಾಲೋ-ಆನ್‌ಗೆ ತುತ್ತಾದರೂ 1 ರನ್‌ನಿಂದ ಗೆದ್ದ ನ್ಯೂಜಿಲೆಂಡ್..!

ಈ ಬಾರಿ ಚೇತೇಶ್ವರ ಪೂಜಾರ ಹೋರಾಟ ನೀಡಿದರು. ಇತ್ತ ವಿರಾಟ್ ಕೊಹ್ಲಿ 13 ರನ್ ಸಿಡಿಸಿ ನಿರ್ಗಮಿಸಿದರು. ಪೂಜಾರ ಹೋರಾಟ ಭಾರತಕ್ಕೆ ನೆರವಾಯಿತು. ಆದರೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ರವೀಂದ್ರ ಜಡೇಜಾ 7 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ಹಾಗೂ ಪೂಜಾರ ಜೊತೆಯಾಟದಿಂದ ಟೀಂ ಇಂಡಿಯಾ ಉಸಿರಾಡಿತು. ಆದರ ಶ್ರೇಯಸ್ ಅಯ್ಯರ್ 26 ರನ್ ಸಿಡಿಸಿ ನಿರ್ಗಮಿಸಿದರು. ಶ್ರೀಕಾರ್ ಭರತ್ 3 ರನ್ ಸಿಡಿಸಿ ಔಟಾದರು. ರವಿಚಂದ್ರ ಅಶ್ವಿನ್ 16 ರನ್ ಕಾಣಿಕೆ ನೀಡಿದರು.

ಇತ್ತ ಚೇತೇಶ್ವರ್ ಪೂಜಾರ 59 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಅಂತಿಮ ಹಂತದಲ್ಲಿ ಹೋರಾಟ ಮುಂದುವರಿಸಿದರು. ಆದರೆ ಉಮೇಶ್ ಯಾದವ್ ಡಕೌಟ್ ಆದರು. ಇತ್ತ ಸಿರಾಜ್ ಜೊತೆ ಸೇರಿ ಅಕ್ಸರ್ ಇನ್ನಿಂಗ್ಸ್ ಮುಂದುವರಿಸಿದರು. ಅಕ್ಸರ್ ಪಟೇಲ್ ಅಜೇಯ 15 ರನ್ ಸಿಡಿಸಿದರು. ಸಿರಾಜ್ ವಿಕೆಟ್ ಪತನದೊಂದಿಗೆ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 75 ರನ್ ಮುನ್ನಡೆ ಪಡೆಯಿತು. ಇದೀಗ ಆಸ್ಟ್ರೇಲಿಯಾ ಗೆಲುವಿಗೆ 76 ರನ್ ಸಿಡಿಸಬೇಕಿದೆ. ಭಾರತ ಆಲೌಟ್‌ನೊಂದಿಗೆ 2ನೇ ದಿನದಾಟ ಅಂತ್ಯಗೊಂಡಿದೆ. ಇದೀಗ 3ನೇ ದಿನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಭಾರತ ಹರಸಹಾಸವೇ ಪಡಬೇಕಿದೆ. 

ರಿಷಭ್‌ ಪಂತ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಪಂತ್ ಟೀಂ ಇಂಡಿಯಾಗೆ ಮರಳುವ ಬಗ್ಗೆ ಗಂಗೂಲಿ ಹೇಳಿದ್ದೇನು..?

ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಮೊದಲ ದಿನ ರವೀಂದ್ರ ಜಡೇಜಾ ಮೋಡಿ ಮಾಡಿದರೆ, ಎರಡನೇ ದಿನ ಆರ್ ಅಶ್ವಿನ್ ಮ್ಯಾಜಿಕ್ ವರವಾಯಿತು. ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಗೂ ಕ್ಯಾಮರೂನ್ ಗ್ರೀನ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗ್ರೀನ್ 21 ರನ್ ಸಿಡಿಸಿ ಔಟಾದರು. ಹ್ಯಾಂಡ್ಸ್‌ಕಾಂಬ್ 19 ರನ್‌ಗೆ ಹೋರಾಟ ನಿಲ್ಲಿಸಿದರು. ಅಲೆಕ್ಸ್ ಕ್ಯಾರಿ 3, ಮಿಚೆಲ್ ಸ್ಟಾರ್ಕ್ 1, ನಥನ್ ಲಿಯೋನ್ 5 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ 197 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 88 ರನ್ ಮುನ್ನಡೆ ಪಡೆದುಕೊಂಡಿತು.

click me!