
ಇಂದೋರ್(ಮಾ.01): ಆಸ್ಟ್ರೇಲಿಯಾ ವಿರುದ್ದದ ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಯಾವುದೇ ಆತಂಕ ಎದುರಿಸದೆ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸುತ್ತಿದೆ.ಇಂದೋರ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೃಹತ್ ಮೊತ್ತದ ಲೆಕ್ಕಾಚಾರದಲ್ಲಿತ್ತು. ಕುಹ್ನೆಮೆನ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಯಾವುದೇ ಹೋರಾಟ ನೀಡಿದ 109 ರನ್‌ಗೆ ಆಲೌಟ್ ಆಯಿತು. ಭಾರತದ ವಿರುದ್ಧ ಅಬ್ಬರಿಸಿದ ಆಸೀಸ್ ಬ್ಯಾಟಿಂಗ್‌ನಲ್ಲೂ ದಿಟ್ಟ ಹೋರಾಟ ನೀಡಿತು.ಇದರೊಂದಿಗೆ ಆಸ್ಟ್ರೇಲಿಯಾ ದಿನಾದಾಟದ ಅಂತ್ಯದಲ್ಲಿ 47 ರನ್ ಮುನ್ನಡೆ ಪಡೆದುಕೊಂಡಿದೆ. ಸದ್ಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದೆ.
ಭಾರತವನ್ನು ಕೇವಲ 109 ರನ್‌ಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ಆತ್ಮವಿಶ್ವಾಸದೊಂದಿದೆ ಬ್ಯಾಟಿಂಗ್ ಇಳಿಯಿತು. ಆರಂಭದಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಸಂಭ್ರಮ ಆಚರಿಸಿತು. ಆಸ್ಟ್ರೇಲಿಯಾ ತಂಡವನ್ನೂ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರದಲ್ಲಿದ್ದ ಟೀಂ ಇಂಡಿಯಾಗೆ ಉಸ್ಮಾನ್ ಖವಾಜ ಹೊಡೆತ ನೀಡಿದರು. ಮಾರ್ನಸ್ ಲಬುಶಾನೆ ಹಾಗೂ ಖವಾಜ ಜೊತೆಯಾಟ, ಭಾರತಕ್ಕೆ ಹಿನ್ನಡೆ ತಂದಿತು.
Indore Test: ಕುಹ್ನೆಮನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ವಿಲವಿಲ, ಅಲ್ಪಮೊತ್ತಕ್ಕೆ ಆಲೌಟ್..!
ರವೀಂದ್ರ ಜಡೇಜಾ ಸ್ಪಿನ್ ಮೂಲಕ ಮೋಡಿ ಮಾಡಲು ಆರಂಭಿಸಿದರು. ಆದರೆ ಇತರ ಬೌಲರ್‌ಗಳಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ಇತ್ತ ಮಾರ್ನಸ್ ಲಬುಶಾನೆ 31 ರನ್ ಕಾಣಿಕೆ ನೀಡಿದರು. ಆದರೆ ಖವಾಜ ಹೋರಾಟ ಮುಂದುವರಿಯಿತು. ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಖವಾಜ 147 ಎಸೆತದಲ್ಲಿ 60 ರನ್ ಸಿಡಿಸಿ ಆಸ್ಟ್ರೇಲಿಯಾ ತಂಡದ ಆತಂಕ ದೂರ ಮಾಡಿದರು. ಇತ್ತ ನಾಯಕ ಸ್ಟೀವ್ ಸ್ಮಿತ್ ಹೋರಾಟವೂ ನೆರವಾಯಿತು.
ಸ್ಟೀವ್ ಸ್ಮಿತ್ 26 ರನ್ ಸಿಡಿಸಿ ಔಟಾದರು. ಪ್ರಮುಖ ನಾಲ್ಕು ವಿಕೆಟ್ ಕಬಳಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಗೂ ಕ್ಯಾಮರೂನ್ ಗ್ರೀನ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನದಾಟ ಅಂತ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 456 ರನ್ ಸಿಡಿಸಿತು. ಇಷ್ಟೇ ಅಲ್ಲ ಭಾರತದ ಇನ್ನಿಂಗ್ಸ್‌ನಗಿಂತ 47 ರನ್ ಮುನ್ನಡೆ ಪಡೆದುಕೊಂಡು ಆತ್ಮವಿಶ್ವಾಸ ಹೆಚ್ಚಿಸಿದೆ.
ಭಾರತ ಇನ್ನಿಂಗ್ಸ್
ಇಂದೋರ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಿ ಆಸ್ಟ್ರೇಲಿಯಾವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಮಾಡಿತ್ತು. ಆದರೆ ಈ ಲೆಕ್ಕಾಚಾರ ವರ್ಕೌಟ್ ಆಗಲಿಲ್ಲ . ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ರನ್ ಗಳಿಸಲು ಪರದಾಡಿತು. ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್ ಸೇರಿಕೊಂಡರು. ನಾಯಕ ರೋಹಿತ್ ಶರ್ಮಾ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಶುಭಮನ್ ಗಿಲ್ 21 ರನ್ ಸಿಡಿಸಿದರು.ಚೇತೇಶ್ವರ ಪೂಜಾರ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.
Eng vs NZ ಫಾಲೋ-ಆನ್‌ಗೆ ತುತ್ತಾದರೂ 1 ರನ್‌ನಿಂದ ಗೆದ್ದ ನ್ಯೂಜಿಲೆಂಡ್..!
ವಿರಾಟ್ ಕೊಹ್ಲಿ 22 ರನ್ ಕಾಣಿಕೆ ನೀಡಿದರು. ಇದು ತಂಡದ ಪರವಾಗಿ ದಾಖಲಾದ ವೈಯುಕ್ತಿಕ ಗರಿಷ್ಠ ಮೊತ್ತವಾಗಿದೆ. ಇನ್ನುಳಿದವರು ಯಾರೂ ಈ ಸಂಖ್ಯೆ ದಾಟಿಲ್ಲ. ರವೀಂದ್ರ ಜಡೇಜಾ 4 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ ಡಕೌಟ್ ಆದರು. ಶ್ರೀಕಾರ್ ಭರತ್ 17 ರನ್ ಸಿಡಿಸಿ ನಿರ್ಗಮಿಸಿದರು. ಪ್ರತಿ ಬಾರಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ಜೊತೆಯಾಟ ನೆರವಾಗಿತ್ತು. ಇಂದು ಅದೂ ಕೂಡ ಸಾಧ್ಯವಾಗಲಿಲ್ಲ. ಅಕ್ಸರ್ ಪಟೇಲ್ 12 ರನ್ ಸಿಡಿಸಿದರೆ, ಅಶ್ವಿನ್ 3 ರನ್ ಸಿಡಿಸಿ ಔಟಾದರು. ಉಮೇಶ್ ಯಾದವ್ 17 ರನ್ ಸಿಡಿಸಿದರು. ಮೊಹಮ್ಮದ್ ಸಿರಾಜ್ ಶೂನ್ಯ ಸುತ್ತಿದರು. ಈ ಮೂಲಕ ಭಾರತ ಕೇವಲ 33.2 ಓವರ್‌ಗಳಲ್ಲಿ 109 ರನ್ ಸಿಡಿಸಿ ಆಲೌಟ್ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.