ಅಂದು ಸ್ಲಂ ಬಾಡಿಗೆ ಮನೆಯಲ್ಲಿ ವಾಸ..! ಇಂದು ಕೋಟಿ ಬೆಲೆ ಬಾಳೋ ಮನೆಗೆ ಮಾಲೀಕ..! ಸಿರಾಜ್‌ ಸ್ಪೂರ್ತಿಯ ಕಥೆ

By Suvarna News  |  First Published Jun 24, 2023, 5:21 PM IST

ವೇಗಿ ಮೊಹಮ್ಮದ್‌ ಸಿರಾಜ್‌ ಜೀವನ ಹಲವರಿಗೆ ಸ್ಪೂರ್ತಿ
ಸಿರಾಜ್​ನಷ್ಟು ಟ್ರೋಲ್​ಗೊಳಾಗಾದ, ಟೀಕೆಗಳನ್ನ ಎದುರಿಸಿದ ಭಾರತದ ಬೌಲರ್​ ​ ಮತ್ತೊಬ್ಬರಿಲ್ಲ
ಆಗ ಆಟೋ ರಿಕ್ಷಾ, ಈಗ BMW ಕಾರಿನಲ್ಲಿ ಓಡಾಟ


ಹೈದಾರಾಬಾದ್(ಜೂ.24)​: ಮೊಹಮ್ಮದ್ ಸಿರಾಜ್..! ಸದ್ಯ ಕ್ರಿಕೆಟ್ ಜಗತ್ತಿನ ಒನ್​ ಆಫ್ ದಿ ಬೆಸ್ಟ್ ಬೌಲರ್​. ICC ಏಕದಿನ ಫಾರ್ಮೆಟ್​ನ ನಂಬರ್ 2 ರ‍್ಯಾಂಕ್ ಪೇಸರ್​. ಆದ್ರೆ, ಕೆಲ ವರ್ಷಗಳ ಹಿಂದೆ ಸಿರಾಜ್​ನಷ್ಟು ಟ್ರೋಲ್​ಗೊಳಾಗಾದ, ಟೀಕೆಗಳನ್ನ ಎದುರಿಸಿದ ಭಾರತದ ಬೌಲರ್​ ​ ಮತ್ತೊಬ್ಬರಿಲ್ಲ. ಆದ್ರೆ, ಈ ಹೈದ್ರಾಬಾದ್ ಎಕ್ಸ್​ಪ್ರೆಸ್​ ಯಾವ ಟೀಕೆ, ಟ್ರೋಲ್​ಗಳಿಗೂ ಕುಗ್ಗಲಿಲ್ಲ.

ಸಿರಾಜ್​ರ ಈ ಅದ್ಭುತ ಸಕ್ಸಸ್​ಗೆ ಆತನ ಹಾರ್ಡ್​ವರ್ಕ್​ ಆ್ಯಂಡ್ ಡೆಡಿಕೇಷನ್ನೇ ಕಾರಣ. ಇನ್ನು ಸಿರಾಜ್ ಆಟದ ಜೊತೆಗೆ ಲಕ್, ಲೈಫ್​ ಸ್ಟೈಲ್, ಆದಾಯ ಎಲ್ಲವೂ ಫುಲ್ ಚೇಂಜ್ ಆಗಿದೆ. ಸ್ಲಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಿರಾಜ್ ಈಗ, ಕೋಟಿ..ಕೋಟಿ ಬೆಲೆ ಬಾಳೋ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಲಕ್ಷುರಿ ಕಾರ್​ಗಳಲ್ಲಿ ಓಡಾಡ್ತಿದ್ದಾರೆ. 

Latest Videos

undefined

ಯೆಸ್, ಹೈದ್ರಾಬಾದ್ ಪರ ದೇಶಿಯ ಕ್ರಿಕೆಟ್​ನಲ್ಲಿ ಮಿಂಚಿದ ಸಿರಾಜ್ 2017ರಲ್ಲಿ IPLಗೆ  ಎಂಟ್ರಿ ನೀಡಿದ್ರು. ಆಗ ಸಿರಾಜ್​ ಬೇಸ್​ ಪ್ರೈಸ್ ಇದ್ದದ್ದು ಜಸ್ಟ್​ 20 ಲಕ್ಷ. ಈ 20 ಲಕ್ಷ ಸಿಕ್ರೆ ಸಾಕು ಅಂತ ಸಿರಾಜ್ ಅಂದುಕೊಂಡಿದ್ರು. ಆದ್ರೆ, ಸನ್​ರೈಸರ್ಸ್​ ಹೈದ್ರಾಬಾದ್ ಫ್ರಾಂಚೈಸಿ 2.7 ಕೋಟಿ ನೀಡಿ ಸಿರಾಜ್​ರನ್ನ ಖರೀದಿಸ್ತು. ಅಲ್ಲಿಂದ ಸಿರಾಜ್ ಕೋಟ್ಯಾಧಿಪತಿಯಾಗಿ ಬದಲಾದ್ರು. 

ಆಗ ಆಟೋ ರಿಕ್ಷಾ, ಈಗ BMW ಕಾರಿನಲ್ಲಿ ಓಡಾಟ..!

2018ರಿಂದ RCB ಪರ ಆಡ್ತಿರೋ ಸಿರಾಜ್, ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಬೆಂಗಳೂರು ಫ್ರಾಂಚೈಸಿ, ಸಿರಾಜ್​ಗೆ ವರ್ಷಕ್ಕೆ 7 ಕೋಟಿ ಸಂಬಳ ನೀಡ್ತಿದೆ. ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್​ನ B ಗ್ರೇಡ್ ಪ್ಲೇಯರ್ ಆಗಿರೋ ಸಿರಾಜ್, ವರ್ಷಕ್ಕೆ 3 ಕೋಟಿ ಸಂಪಾದಿಸ್ತಿದ್ದಾರೆ.  ಇನ್ನು ಮ್ಯಾಚ್​ ಫೀಸ್ ರೂಪದಲ್ಲಿ ಸಿರಾಜ್, ಒಂದು ಟೆಸ್ಟ್​ ಮ್ಯಾಚ್​ಗೆ 15 ಲಕ್ಷ, ಏಕದಿನ ಪಂದ್ಯವೊಂದಕ್ಕೆ 6 ಲಕ್ಷ, ಟಿ20 ಮ್ಯಾಚ್​ವೊಂದಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಈ ಎಲ್ಲಾ ಆದಾಯ ಲೆಕ್ಕಹಾಕಿದ್ರೆ ಸಿರಾಜ್ ಮಿಯಾ ನೆಟ್​ವರ್ತ್​ 48 ಕೋಟಿ ರೂಪಾಯಿ ಎನ್ನಲಾಗಿದೆ. 

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಸ್ಟ್ರಾಂಗ್ ಆಗಬೇಕಾ..? ಮೊದಲು ಸಂಬಳ ಹೆಚ್ಚಿಸಿ..!

ಒಂದು ಕಾಲಕ್ಕೆ ಸಿರಾಜ್ ಹೈದ್ರಾಬಾದ್​ ಸ್ಲಂ ಏರಿಯಾದಲ್ಲಿ ವಾಸವಾಗಿದ್ರು. ಸಿರಾಜ್ ಅವ್ರ ತಂದೆ ಆಟೋ ಚಾಲಕರಾಗಿದ್ರು. ತಿಂಗಳ ಮನೆ ಬಾಡಿಗೆ ಕಟ್ಟಲು ಆಗದ ಪರಿಸ್ಥಿತಿ ಇತ್ತು. ಆದ್ರೀಗ, ಸಿರಾಜ್ ಹೈದ್ರಾಬಾದ್​​ನ ಪ್ರತಿಷ್ಠಿತ, ಜೂಬ್ಲಿಹಿಲ್ಸ್​​ನ ಫಿಲ್ಮ್​ನಗರ ಪ್ರದೇಶದಲ್ಲಿ ದೊಡ್ಡ ಬಂಗಲೆಯೊಂದನ್ನ ಖರೀದಿಸಿದ್ದಾರೆ. ಈ ಬಾರಿಯ IPL ವೇಳೆ ಸಿರಾಜ್​ರ RCB ಆಟಗಾರರನ್ನ ಮನೆಗೆ ಆಹ್ವಾನಿಸಿ ಭರ್ಜರಿ ಬಿರಿಯಾನಿ ಪಾರ್ಟಿ ನೀಡಿದ್ರು. 

ಇನ್ನು BMW ಸೆಡಾನ್, ಮಹೀಂದ್ರಾ ಥಾರ್, ಟಯೋಟ ಕೊರಲಾ,  ಸೇರಿದಂತೆ  ಹಲವು ಐಷಾರಾಮಿ ಕಾರ್​ಗಳಿಗೆ ಸಿರಾಜ್ ಮಾಲೀಕರಾಗಿದ್ದಾರೆ. 6 ವರ್ಷಗಳ ಹಿಂದೆ ಆಟೋ, ರಿಕ್ಷಾದಲ್ಲಿ ಓಡಾಡ್ತಿದ್ದ ಸಿರಾಜ್, ಈಗ ಲಕ್ಷುರಿ ಕಾರುಗಳಲ್ಲಿ ಓಡಾಡ್ತಿದ್ದಾರೆ.   ಟ್ಯಾಲೆಂಟ್​, ಕಠಿಣ ಪರಿಶ್ರಮ ಅನ್ನೋದು ಇದ್ದರೆ ಅದೃಷ್ಟ ತಾನಾಗೆ ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ಸಿರಾಜ್​ ಜೀವನೇ ಬೆಸ್ಟ್​ ಎಕ್ಸಾಂಪಲ್.

click me!