World Cup Final ನರೇಂದ್ರ ಮೋದಿ ಸ್ಟೇಡಿಯಂ ಸೈಲೆಂಟ್ ಆಗಿದ್ದು ನೋಡಿ ತೃಪ್ತಿಯಾಯ್ತು: ಪ್ಯಾಟ್ ಕಮಿನ್ಸ್

By Kannadaprabha News  |  First Published Nov 21, 2023, 3:32 PM IST

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ಎದುರು ಆಸ್ಟ್ರೇಲಿಯಾ ತಂಡವು 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಅಹಮದಾಬಾದ್(ನ.21): ಲಕ್ಷಾಂತರ ಭಾರತದ ಅಭಿಮಾನಿಗಳನ್ನು ಮೌನವಾಗಿಸುವ ಬಗ್ಗೆ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಪಂದ್ಯದ ಬಳಿಕವೂ ಈ ಬಗ್ಗೆ ಮಾತನಾಡಿದ್ದು, ಕೊಹ್ಲಿಯನ್ನು ಔಟ್ ಮಾಡಿದಾಗ ಇಡೀ ಕ್ರೀಡಾಂಗಣ ಮೌನವಾಗಿದ್ದು ನೋಡಿ ಬಹಳ ಆನಂದಿಸಿದೆ ಎಂದಿದ್ದಾರೆ. 

‘ಜನಸಾಗರ ಮೌನವಾಗುತ್ತಿರುವುವುದನ್ನು ನೋಡಿ ಸಂಭ್ರಮ ಪಟ್ಟಿದ್ದೇವೆ. ಸಾಮಾನ್ಯವಾಗಿ ಮತ್ತೊಮ್ಮೆ ಶತಕ ಬಾರಿಸಲು ಕಾಯುತ್ತಿದ್ದ ಅಭಿಮಾನಿಗಳೆಲ್ಲಾ, ಒಮ್ಮೆಲೇ ಮೌನವಾದಾಗ ತೃಪ್ತಿಯಾಯಿತು’ ಎಂದು ಹೇಳಿದ್ದಾರೆ.

Latest Videos

undefined

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ಎದುರು ಆಸ್ಟ್ರೇಲಿಯಾ ತಂಡವು 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತದ ಕೋಚ್ ಆಗಿ ಮುಂದುವರಿಯುತ್ತಾರಾ ರಾಹುಲ್ ದ್ರಾವಿಡ್?

ನವದೆಹಲಿ: ಏಕದಿನ ವಿಶ್ವಕಪ್ ಸೋಲಿನೊಂದಿಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ರ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವವಾಗಿದೆ. 2021ರ ಟಿ20 ವಿಶ್ವಕಪ್ ಸೋಲಿನ ಬಳಿಕ ಕನ್ನಡಿಗ ದ್ರಾವಿಡ್ ಭಾರತದ ಕೋಚ್ ಹುದ್ದೆಗೇರಿದ್ದರು. ಒಪ್ಪಂದದ ಪ್ರಕಾರ ಅವರ 2 ವರ್ಷಗಳ ಅವಧಿ ಈ ವಿಶ್ವಕಪ್‌ನೊಂದಿಗೆ ಕೊನೆಗೊಳ್ಳಲಿದೆ. ಆದರೆ ಕೋಚ್ ಆಗಿ ಅವರು ಮುಂದುವರಿಯಲಿದ್ದಾರೆಯೇ ಅಥವಾ ಬೇರೆಯವರು ಹುದ್ದೆಗೇರಲಿದ್ದಾರೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಈ ಬಾರಿ ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲದ ಹೊರತಾಗಿಯೂ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಾಗಿ ಬಿಸಿಸಿಐ ಮುಂದಿನ ಟಿ20 ವಿಶ್ವಕಪ್‌ವರೆಗೂ ಮುಂದುವರಿ ಯುವಂತೆ ಅವರನ್ನು ಕೇಳಿಕೊಳ್ಳಬಹುದು ಎನ್ನಲಾಗುತ್ತಿದೆ.

ಕಳೆದ 3 ವಿಶ್ವಕಪ್‌ನಲ್ಲಿ ಭಾರತದ್ದೇ ಪ್ರಾಬಲ್ಯ: ಟ್ರೋಫಿ ಮಾತ್ರ ಇಲ್ಲ!

ಭಾರತ 2011ರ ಬಳಿಕ 3 ಏಕದಿನ ವಿಶ್ವಕಪ್‌ನಲ್ಲೂ ಕೊನೆ ಕ್ಷಣದಲ್ಲಿ ಸೋತು ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಇತರೆಲ್ಲಾ ತಂಡಗಳಿಗಿಂತ ಭಾರತವೇ ಹೆಚ್ಚು ಪ್ರಾಬಲ್ಯ ಸಾಧಿಸಿರುವುದು ಕಂಡು ಬರುತ್ತದೆ. 2015, 2019, 2023ರ ವಿಶ್ವಕಪ್‌ಗಳಲ್ಲಿ ಭಾರತ ಒಟ್ಟು 28 ಪಂದ್ಯಗಳನ್ನಾಡಿದ್ದು, ಕೇವಲ 4ರಲ್ಲಿ ಸೋತಿದೆ. ಈ ಪೈಕಿ 2 ಸೋಲು ಸೆಮಿಫೈನಲ್‌ನಲ್ಲಿ ಎದುರಾದರೆ, 1 ಸೋಲು ಫೈನಲ್‌ನಲ್ಲಿ ಎದುರಾಯಿತು. ಕಳೆದ 3 ವಿಶ್ವಕಪ್‌ಗಳಲ್ಲಿ 2 ಸಲ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ಒಟ್ಟು 29 ಪಂದ್ಯಗಳಲ್ಲಿ 23 ಗೆದ್ದಿದ್ದು, 6 ಪಂದ್ಯ ಸೋತಿದೆ. 

ಅಚ್ಚರಿ ಏನೆಂದರೆ ಇಂಗ್ಲೆಂಡ್ 3 ವಿಶ್ವಕಪ್‌ಗಳ 26 ಪಂದ್ಯಗಳಲ್ಲಿ ಕೇವಲ 12ರಲ್ಲಿ ಗೆದ್ದಿದ್ದು, 13ರಲ್ಲಿ ಸೋಲನುಭವಿಸಿದೆ. ಇದರ ಹೊರತಾಗಿಯೂ 2019ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇನ್ನು, ನ್ಯೂಜಿಲೆಂಡ್ 29ರಲ್ಲಿ 19 ಜಯ, ದ.ಆಫ್ರಿಕಾ 27ರಲ್ಲಿ 15 ಜಯ, ಪಾಕಿಸ್ತಾನ 24ರಲ್ಲಿ 13 ಪಂದ್ಯಗಳಲ್ಲಿ ಜಯಗಳಿಸಿವೆ.
 

click me!