
ಬೆಂಗಳೂರು (ನ.21): ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳು ನಿರಾಸೆಯ ಮಡುವಿನಲ್ಲಿದ್ದಾರೆ. ಆದರೆ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಮ್ಮ ಬಹುಕಾಲದ ಗೆಳತಿ ಶ್ರುತಿ ರಘುನಾಥನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಫೋಟೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಆಧಾರ ಸ್ತಂಭವಾಗಿರುವ ವೆಂಕಟೇಶರ್ ಅಯ್ಯರ್, ದೀಪಾವಳಿ ಸಂಭ್ರಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಭಾವಿ ಪತ್ನಿಯ ಜೊತೆಗಿರುವ ಚಿತ್ರಗಳನ್ನು ಅವರು ಸಂಭ್ರಮದಿಂದಲೇ ಹಂಚಿಕೊಂಡಿದ್ದಾರೆ. ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ತಮ್ಮ ಸಂಭ್ರಮವನ್ನು ಸೆರೆಹಿಡಿದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೂ ಥ್ಯಾಂಕ್ಸ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ಇನ್ನಿಂಗ್ಸ್ ಸೀಮಿತವಾಗಿದ್ದರೂ, ಅಯ್ಯರ್ ಕೆಕೆಆರ್‌ಗೆ ಪ್ರಮುಖ ಆಸ್ತಿಯಾಗಿ ಉಳಿದಿದ್ದಾರೆ, ಹಲವಾರು ಪಂದ್ಯಗಳಲ್ಲಿ ತಮ್ಮ ಆಕ್ರಮಣಕಾರಿ ನಿರ್ವಹಣೆಯ ಮೂಲಕ ಗಮನಸೆಳೆದಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಎರಡು ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ ಆಡಿರುವ ಆಲ್ರೌಂಡರ್, ಕೆಲವೊಂದು ಸುಂದರ ಚಿತ್ರಗಳನ್ನು ಹಂಚಿಕೊಂಡು ಗುಡ್ ನ್ಯೂಸ್‌ಅನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ವೆಂಕಟೇಶ್ ತಿಳಿ ಹಸಿರು ಕುರ್ತಾ ಧರಿಸಿ ಕಾಣಿಸಿಕೊಂಡಿದ್ದು, ಶುಭ ಸಂದರ್ಭದಲ್ಲಿ ಶ್ರುತಿ ಪ್ರಿಂಟೆಡ್ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
"ನನ್ನ ಜೀವನದ ಮುಂದಿನ ಅಧ್ಯಾಯಕ್ಕೆ' ಎಂದು ಬರೆದುಕೊಂಡಿರುವ ವೆಂಕಟೇಶ್ ಅಯ್ಯರ್ ಎಂಗೇಜ್ಡ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಇನ್ನು ವೆಂಕಟೇಶ್ ಅಯ್ಯರ್ ಕೈಹಿಡಿಯಲಿರುವ ಶ್ರುತಿ ರಘುನಾಥನ್, ತಮಿಳುನಾಡು ಮೂಲದವರಾಗಿದ್ದಾರೆ. ಆದರೆ, ಅವರ ಕುಟುಂಬ ಹಾಗೂ ವಿದ್ಯಾಭ್ಯಾಸ ಹಿನ್ನಲೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವೆಂಕಟೇಶ್ ಅಯ್ಯರ್ ಹಂಚಿಕೊಂಡ ಫೋಟೋಗೆ ಪ್ರತಿಕ್ರಿಯಿಸಿದ ರುತುರಾಜ್ ಗಾಯಕ್ವಾಡ್, 'ಅತ್ತಿಗೆ ಅಭಿನಂದನೆಗಳು' ಎಂದು ಬರೆದಿದ್ದಾರೆ. ರುತುರಾಜ್ ಗಾಯಕ್ವಾಡ್ ಇತ್ತೀಚೆಗೆ ಉತ್ಕರ್ಷಾ ಪವಾರ್‌ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮ, ಮಂದೀಪ್ ಸಿಂಗ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ದರ್ಶನ್ ಜೊತೆ ನಟಿಸಿ 'ಪ್ರೀತಿನಾ ಹೆಂಗಪ್ಪ ತಡ್ಕೊಳ್ಳೋದು..' ಎಂದಿದ್ದ ನಾಯಕಿಗೆ ಕೂಡಿಬಂತು ಕಂಕಣಭಾಗ್ಯ!
ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ಶ್ರುತಿ ಬಗ್ಗೆ ಹೆಚ್ಚು ಮಾಹಿತಿ ಪತ್ತೆಯಾಗಿಲ್ಲ. ವರದಿಗಳ ಪ್ರಕಾರ ಶ್ರುತಿ ಅವರು PSG ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಿಂದ B.com ಅನ್ನು ಪೂರ್ಣಗೊಳಿಸಿದ್ದಾರೆ ಮತ್ತು ಭಾರತದ NIFT ನಿಂದ ಫ್ಯಾಷನ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಕರ್ನಾಟಕದ ಬೆಂಗಳೂರಿನಲ್ಲಿರುವ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮರ್ಚಂಡೈಸ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಬೃಂದಾವನ' ಚಿತ್ರದ ನಟಿ ಕಾರ್ತಿಕಾ; ಫೋಟೋ ವೈರಲ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.