INDvSA ಕೊಹ್ಲಿ ಶತಕ ದಾಖಲೆಗೆ ಪರ ವಿರೋಧ, ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿಶ್ ಸೆಂಚುರಿ ಟ್ರೆಂಡ್!

By Suvarna News  |  First Published Nov 5, 2023, 6:19 PM IST

ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದ ಸಿಡಿಸಿದ ಸೆಂಚುರಿಗೆ ಹಲವು ದಾಖಲೆಗಳು ನಿರ್ಮಣವಾಗಿದೆ. ಕೊಹ್ಲಿ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೊಹ್ಲಿ ಶತಕ ಸ್ವಾರ್ಥಿಯಾಗಿತ್ತು ಅನ್ನೋ ಟೀಕೆಯೂ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸೆಲ್ಫಿಶ್ ಸೆಂಚುರಿ ಎಂದು ಟ್ರೆಂಡ್ ಆಗಿದೆ.
 


ಕೋಲ್ಕತಾ(ನ.05) ಕ್ರಿಕೆಟ್ ಜಗತ್ತಿನ ರನ್ ಮಶಿನ್ ಎಂದೇ ಖ್ಯಾತಿಗೊಂಡಿರುವ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಸೆಂಚುರಿ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ದಿಟ್ಟ ಹೋರಾಟ ನೀಡಿದ ಕೊಹ್ಲಿ ಹುಟ್ಟು ಹಬ್ಬ ದಿನವೇ ಶತಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಸೆಂಚುರಿ ಕುರಿತು ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೇ ವೇಳೆ ಕೊಹ್ಲಿ ಸೆಂಚುರಿ ಅತ್ಯಂತ ಸ್ವಾರ್ಥ ಶತಕವಾಗಿತ್ತು ಅನ್ನೋ ಟೀಕೆಯೂ ಕೇಳಿಬಂದಿದೆ. 

ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶತಕಕ್ಕಾಗಿ ಆಡಿದ ರೀತಿ ಇತ್ತು ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಆಟದಲ್ಲಿ ಸೆಂಚುರಿ ಪೂರೈಸಲೇಬೇಕು ಅನ್ನೋ ಹಠವಿತ್ತೇ ಹೊರತು ಭಾರತಕ್ಕಾಗಿ ಆಡುತ್ತಿದ್ದೇನೆ ಅನ್ನೋ ಛಾಯೆ ಕಾಣಿಸಲಿಲ್ಲ ಎಂದು ಕೆಲವರು ಹೇಳಿದ್ದಾರೆ.

Latest Videos

undefined

ಬರ್ತ್‌ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್‌ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!

ಶತಕದ ಸನಿಹದಲ್ಲಿ ಕೊಹ್ಲಿ ಅತೀವ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದಾರೆ. ಬೌಂಡರಿ ಸಿಕ್ಸರ್‌ಗಿಂತ ಕೊಹ್ಲಿ, ತಮ್ಮ ಶತಕದ ಮೇಲೆ ಹೆಚ್ಚು ಗಮನಕೇಂದ್ರಿಕರಿಸಿದ್ದರು. ಹೀಗಾಗಿ ಇದು ಸೆಲ್ಫಿಶ್ ಸೆಂಚುರಿ ಅನ್ನೋ ಟೀಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ. ಇದೇ ವೇಳೆ ರೋಹಿತ್ ಶರ್ಮಾ ಸೇರಿದಂತೆ ಇತರರ ಬ್ಯಾಟಿಂಗ್ ಪ್ರದರ್ಶನ ಕುರಿತು ಹೋಲಿಕೆಗಳ ಪೋಸ್ಟರ್ ಹರಿದಾಡುತ್ತಿದೆ.

 

Imagine you scored a century and Slow, Selfish and Chokli is trending on Twitter.😭

No matter how many milestones Virat Kohli achieves by statpading but he can never earn the respect like Rohit Sharma. pic.twitter.com/FbiBUreNhp

— Jyran (@Jyran45)

 

ಸೌತ್ ಆಫ್ರಿಕಾ ವಿರುದ್ದ ವಿರಾಟ್ ಕೊಹ್ಲಿ 121 ಎಸೆತದಲ್ಲಿ 10 ಬೌಂಡರಿ ಮೂಲಕ 101 ರನ್ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಸಾಧಕರ ಪಟಟ್ಟಿಯಲ್ಲಿ ಸಚಿನ್ ಹಾಗೂ ಕೊಹ್ಲಿ ತಲಾ 49 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 31 ಸೆಂಚುರಿ ಸಿಡಿಸಿದ್ದಾರೆ.

ಬರ್ತ್‌ ಡೇ ಬಾಯ್ ಕೊಹ್ಲಿ ಶತಕ; ಹರಿಣಗಳಿಗೆ ಕಠಿಣ ಗುರಿ ನೀಡಿದ ಭಾರತ

ವಿಶ್ವಕಪ್ ಟೂರ್ನಿಯಲ್ಲಿ ಹುಟ್ಟಹಬ್ಬದ ದಿನ ಶತಕ ಸಿಡಿಸಿದ ಮೂರನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮೊೊದಲು ನ್ಯೂಜಿಲೆಂಡ್‌ನ ಟೇಲರ್ ಹಾಗೂ ಆಸ್ಟ್ರೇಲಿಯಾದ ಮಾರ್ಶ್ ಸೆಂಚುರಿ ಸಾಧನೆ ಮಾಡಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಹುಟ್ಟುಹಬ್ಬದ ದಿನ ಸೆಂಚುರಿ ಸಿಡಿಸಿದ 7ನೇ ಕ್ರಿಕೆಟಿಗ ಕೊಹ್ಲಿ, ಇದಕ್ಕೂ ಮೊದಲಲು ವಿನೋದ್ ಕಾಂಬ್ಲಿ, ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ ಸೇರಿದಂತೆ ದಿಗ್ಗಜರು ಈ ಸಾಧನೆ ಮಾಡಿದ್ದಾರೆ.

 

After watching this selfish knock one thing is confirmed, can never be a clutch player like Rohit Sharma, Even in his 7 birth he can never be as good as Rohit Sharma, I repeat never. pic.twitter.com/Yla7LLkDGs

— 𝐁𝐚𝐛𝐚 𝐘𝐚𝐠𝐚 (@yagaa__)
click me!