26 ಸಾವಿರ ರನ್ ಎಲೈಟ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ..!

Published : Oct 20, 2023, 12:09 PM IST
26 ಸಾವಿರ ರನ್ ಎಲೈಟ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ..!

ಸಾರಾಂಶ

ವಿರಾಟ್ ಕೊಹ್ಲಿ 577 ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದು, ಸಚಿನ್‌ 601 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ಸಚಿನ್‌ ತೆಂಡುಲ್ಕರ್ (34,357), ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ (28,016), ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ (27,483) ಅಗ್ರ 3 ಸ್ಥಾನಗಳಲ್ಲಿದ್ದಾರೆ.

ಪುಣೆ(ಅ.20): ರನ್ ಮೆಷಿನ್‌ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 26,000 ರನ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಬಾಂಗ್ಲಾ ವಿರುದ್ಧ 103 ರನ್‌ ಸಿಡಿಸಿದ ಕೊಹ್ಲಿ ಅಂ.ರಾ. ಕ್ರಿಕೆಟ್‌ನ ರನ್‌ ಗಳಿಕೆಯನ್ನು 26,026ಕ್ಕೆ ಏರಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್‌ ಎನಿಸಿಕೊಂಡಿದ್ದಲ್ಲದೇ, ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಜಯವರ್ಧನೆ(25957) ಅವರನ್ನು ಹಿಂದಿಕ್ಕಿದರು. 

ಮಾಜಿ ನಾಯಕ ವಿರಾಟ್ ಕೊಹ್ಲಿ ವೇಗದ 26 ಸಾವಿರ ರನ್‌ ದಾಖಲೆಯನ್ನೂ ನಿರ್ಮಿಸಿದರು. ವಿರಾಟ್ ಕೊಹ್ಲಿ 577 ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದು, ಸಚಿನ್‌ 601 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ಸಚಿನ್‌ ತೆಂಡುಲ್ಕರ್ (34,357), ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ (28,016), ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ (27,483) ಅಗ್ರ 3 ಸ್ಥಾನಗಳಲ್ಲಿದ್ದಾರೆ.

ವಿರಾಟ್ ಕೊಹ್ಲಿ 48ನೇ ಶತಕ: ಸಚಿನ್‌ ದಾಖಲೆಯನ್ನು ಸರಿಗಟ್ಟಲು ಇನ್ನೊಂದೇ ಶತಕ ಬಾಕಿ!

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 48ನೇ ಶತಕ ಬಾರಿಸಿದ್ದು, ಸಚಿನ್‌ ತೆಂಡುಲ್ಕರ್‌ರ 49 ಶತಕಗಳ ದಾಖಲೆಯನ್ನು ಸರಿಗಟ್ಟಲು ಇನ್ನೊಂದೇ ಶತಕ ಬೇಕಿದೆ. ಈ ವಿಶ್ವಕಪ್‌ನಲ್ಲೇ ಕೊಹ್ಲಿ ಸಚಿನ್‌ರ ದಾಖಲೆ ಮುರಿಯಬಹುದು ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯ ಶತಕಗಳ ಸಂಖ್ಯೆ 78ಕ್ಕೇರಿದ್ದು, ಸಚಿನ್‌ರ 100 ಶತಕಗಳ ದಾಖಲೆ ಸರಿಗಟ್ಟಲು ಇನ್ನೂ 22 ಶತಕ ಗಳಿಸಬೇಕಿದೆ.

World Cup 2023: ಸಿಕ್ಸರ್‌ ಬಾರಿಸಿ ಕೊಹ್ಲಿ ಸೆಂಚುರಿ, ಬಾಂಗ್ಲಾ ಬೆಂಡೆತ್ತಿದ ಭಾರತ

ಭಾರತದ ಅಬ್ಬರಕ್ಕೆ ಬಾಂಗ್ಲಾ ತಬ್ಬಿಬ್ಬು!

ಪುಣೆ: ಈ ವಿಶ್ವಕಪ್‌ನಲ್ಲಿ ಭಾರತದ ಅಬ್ಬರ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಿದೆ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ವಿರುದ್ಧ ಚೇಸ್‌ ಮಾಡಿ ಜಯಿಸಿದ್ದ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧವೂ ತನ್ನ ಪ್ರಾಬಲ್ಯ ಮುಂದುವರಿಸಿ ಸತತ 4ನೇ ಗೆಲುವು ದಾಖಲಿಸಿದೆ. ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದ ರೋಹಿತ್‌ ಶರ್ಮಾ ಪಡೆ, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಸೆಮಿಫೈನಲ್‌ನತ್ತ ದಾಪುಗಾಲಿಡುತ್ತಿದೆ.

ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದ್ದ ಪಿಚ್‌ನಲ್ಲಿ ಬಾಂಗ್ಲಾದೇಶ ಉತ್ತಮ ಆರಂಭ ಪಡೆದರೂ, ಸುರಕ್ಷಿತ ಸ್ಕೋರ್‌ ತಲುಪಲಿಲ್ಲ. 8 ವಿಕೆಟ್‌ಗೆ 258 ರನ್‌ ಗಳಿಸಿ, ಭಾರತದ ಗೆಲುವನ್ನು ಸಲೀಸಾಗಿಸಿತು.

ಲೀಲಾಜಾಲ ಬ್ಯಾಟಿಂಗ್‌: ರೋಹಿತ್‌ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿ ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರೆ, ಶುಭ್‌ಮನ್‌ ಗಿಲ್‌ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿ ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಮೊದಲ ವಿಕೆಟ್‌ಗೆ 88 ರನ್‌ ಜೊತೆಯಾಟ ಮೂಡಿಬಂದ ಬಳಿಕ, ಮೈದಾನಕ್ಕಿಳಿದ ವಿರಾಟ್‌ ಕೊಹ್ಲಿಯನ್ನು ಸಾಲು ಸಾಲು ನೋಬಾಲ್‌, ಫ್ರೀ ಹಿಟ್‌ಗಳಿಂದ ಸ್ವಾಗತಿಸಿದ ಬಾಂಗ್ಲಾ, ಏಕದಿನ ಕ್ರಿಕೆಟ್‌ನಲ್ಲಿ ಅವರು 48ನೇ ಶತಕ ಬಾರಿಸಲೂ ಅನುಕೂಲ ಮಾಡಿಕೊಟ್ಟಿತು.

ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನV/sಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯಕ್ಕೆ ಪೊಲೀಸ್ ಬಿಗಿ ಭದ್ರತೆ!

ಕೊಹ್ಲಿ ಅಬ್ಬರಿಸಲು ಶುರು ಮಾಡಿದ ಬಳಿಕ ಹಿಂದಿರುಗಿ ನೋಡಲಿಲ್ಲ. ಬಾಂಗ್ಲಾದ ಸ್ಪಿನ್ನರ್‌ಗಳು ದಾಳಿಗಿಳಿಯುವ ವೇಳೆಗೆ, ಭಾರತದ ಓಟ ಟಾಪ್‌ ಗೇರ್‌ನಲ್ಲಿ ಸಾಗುತ್ತಿತ್ತು. ಶ್ರೇಯಸ್‌ ಅಯ್ಯರ್‌(19) ದುಬಾರಿ ಹೊಡೆತಕ್ಕೆ ಯತ್ನಿಸಿ ಔಟಾದ ಮೇಲೆ ಕ್ರೀಸ್‌ನಲ್ಲಿ ಕೊಹ್ಲಿಯನ್ನು ಸೇರಿಕೊಂಡ ಕೆ.ಎಲ್‌.ರಾಹುಲ್‌ ಮತ್ತೊಮ್ಮೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಔಟಾಗದೆ 34 ರನ್‌ ಗಳಿಸಿ ಕೆಳ ಕ್ರಮಾಂಕದ ಬ್ಯಾಟರ್‌ಗಳು ಕ್ರೀಸ್‌ಗಿಳಿಯಬೇಕಾದ ಅಗತ್ಯತೆಯೇ ಬರದಂತೆ ನೋಡಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್