ಪಾಕ್ ತಂಡ ಈ ಬಾರಿ ವಿಶ್ವಕಪ್‌ಗೆ ಬಲಿಷ್ಠ ತಂಡವಾಗಿ ಕಾಲಿಟ್ಟಿದ್ದರೂ ತಂಡದಲ್ಲೀಗ ಹಲವು ಸಮಸ್ಯೆಗಳಿವೆ. ತಾನು ಹೆಚ್ಚಿನ ಭರವಸೆ ಇಟ್ಟಿದ್ದ ನಾಯಕ ಬಾಬರ್ ಆಜಂ, ಇಮಾಮ್ ಲಯದಲ್ಲಿಲ್ಲ. ಇತರ ಬ್ಯಾಟರ್‌ಗಳೂ ಆಕ್ರಮಣಕಾರಿ ಆಟ ಮರೆತಂತಿದೆ.
ಬೆಂಗಳೂರು(ಅ.20): ಚಿನ್ನಸ್ವಾಮಿ ಕ್ರೀಡಾಂಗಣ ಈ ಬಾರಿ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲೇ 2 ಬಲಿಷ್ಠ ತಂಡಗಳ ನಡುವಿನ ಮೆಗಾ ಫೈಟ್‌ಗೆ ಸಾಕ್ಷಿಯಾಗಲಿದೆ. ಶುಕ್ರವಾರ 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ 1992ರ ಪ್ರಶಸ್ತಿ ವಿಜೇತ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಅಗತ್ಯ ಗೆಲುವಿಗಾಗಿ ಎದುರು ನೋಡುತ್ತಿವೆ. ಬದ್ಧವೈರಿಗಳು ಎನಿಸಿಕೊಂಡಿರುವ 2 ತಂಡಗಳ ನಡುವಿನ ಕಾದಾಟ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿದೆ.
ಪಾಕ್ ತಂಡ ಈ ಬಾರಿ ವಿಶ್ವಕಪ್‌ಗೆ ಬಲಿಷ್ಠ ತಂಡವಾಗಿ ಕಾಲಿಟ್ಟಿದ್ದರೂ ತಂಡದಲ್ಲೀಗ ಹಲವು ಸಮಸ್ಯೆಗಳಿವೆ. ತಾನು ಹೆಚ್ಚಿನ ಭರವಸೆ ಇಟ್ಟಿದ್ದ ನಾಯಕ ಬಾಬರ್ ಆಜಂ, ಇಮಾಮ್ ಲಯದಲ್ಲಿಲ್ಲ. ಇತರ ಬ್ಯಾಟರ್‌ಗಳೂ ಆಕ್ರಮಣಕಾರಿ ಆಟ ಮರೆತಂತಿದೆ. ಹೀಗಾಗಿ ಮೊಹಮದ್ ರಿಜ್ವಾನ್, ಶಫೀಕ್, ಶಕೀಲ್ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಆಲ್ರೌಂಡರ್‌ಗಳಾದ ಶದಾಬ್ ಖಾನ್, ನವಾಜ್, ಇಫ್ತಿಕಾರ್ ಆಸೀಸ್ ಪಂದ್ಯದಲ್ಲಾದರೂ ಮಿಂಚಬಲ್ಲರೇ ಎಂಬ ಕುತೂಹಲವಿದೆ. ಇನ್ನು, ಬೌಲಿಂಗ್ ವಿಭಾಗ ಪ್ರಚಾರ ಪಡೆದಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಮೊದಲ 3 ಪಂದ್ಯದಲ್ಲಿ ಸಾಬೀತಾಗಿದೆ. ಹೀಗಾಗಿ ಬದಲಾವಣೆ ನಿರೀಕ್ಷಿಸಬಹುದು.
undefined
ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನV/sಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯಕ್ಕೆ ಪೊಲೀಸ್ ಬಿಗಿ ಭದ್ರತೆ!
ಮತ್ತೊಂದೆಡೆ ಸತತ 2 ಪಂದ್ಯಗಳ ಸೋಲಿನೊಂದಿಗೆ ಟೂರ್ನಿಗೆ ಕಾಲಿಟ್ಟಿರುವ ಆಸೀಸ್, ಕೊನೆಗೂ ಶ್ರೀಲಂಕಾ ವಿರುದ್ಧ ಗೆದ್ದಿತ್ತು. ಬ್ಯಾಟರ್‌ಗಳು ಕೂಡಾ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಜೋಸ್ ಇಂಗ್ಲಿಸ್ ಮಾತ್ರ ಟೂರ್ನಿಯಲ್ಲಿ ಆಸೀಸ್ ಪರ ಏಕೈಕ ಅರ್ಧಶತಕ ಬಾರಿಸಿದ್ದು ತಂಡದ ಬ್ಯಾಟಿಂಗ್ ವಿಭಾಗ ಎಷ್ಟು ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿ. ಲಬುಶೇನ್ ಹೊರತುಪಡಿಸಿ ಬೇರ್‍ಯಾರೂ ಒಟ್ಟು 100 ರನ್ ದಾಟಿಲ್ಲ. ವಾರ್ನರ್, ಸ್ಮಿತ್, ಮ್ಯಾಕ್ಸ್‌ವೆಲ್, ಮಾರ್ಷ್ ಬ್ಯಾಟ್‌ನಿಂದ ರನ್ ಹರಿದುಬರುತ್ತಿಲ್ಲ. ಇನ್ನು, ಬೌಲರ್‌ಗಳು ಟೂರ್ನಿಯಲ್ಲಿ ತಂಡಕ್ಕೆ ಅಲ್ಪಮಟ್ಟಿಗೆ ಆಸರೆಯಾಗಿದ್ದು, ಪಾಕ್ ಬ್ಯಾಟರ್‌ಗಳನ್ನೂ ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ಟೀಂ ಇಂಡಿಯಾಗೆ ಬಿಗ್ ಶಾಕ್; ಮೈದಾನ ತೊರೆದ ಹಾರ್ದಿಕ್ ಪಾಂಡ್ಯ..! 8 ವರ್ಷಗಳ ಬಳಿಕ ಕಿಂಗ್ ಕೊಹ್ಲಿ ಬೌಲಿಂಗ್
ಸಂಭವನೀಯರ ಪಟ್ಟಿ
ಪಾಕಿಸ್ತಾನ: ಶಫೀಕ್, ಇಮಾಮ್ ಉಲ್ ಹಕ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಶಕೀಲ್, ಇಫ್ತಿಕಾರ್ ಅಹಮ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಪಿತ್, ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಮುಖಾಮುಖಿ: 107
ಪಾಕಿಸ್ತಾನ: 34
ಆಸ್ಟ್ರೇಲಿಯಾ: 69
ಟೈ: 01
ಫಲಿತಾಂಶವಿಲ್ಲ: 03
ಪಂದ್ಯ: ಮಧ್ಯಾಹ್ನ 2ಕ್ಕೆ
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಜೊತೆಗೆ ಸಣ್ಣ ಬೌಂಡರಿಗಳು ಇರುವ ಕಾರಣ ಸಹಜವಾಗಿಯೇ ದೊಡ್ಡ ಮೊತ್ತ ನಿರೀಕ್ಷಿಸಲಾಗುತ್ತಿದೆ. ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.