ಕೀಪರ್, ಅಯ್ಯರ್ ಹೊರತುಪಡಿಸಿ 9 ಮಂದಿ ಬೌಲಿಂಗ್ ದಾಖಲೆ, ರೋಹಿತ್-ಕೊಹ್ಲಿಗೆ ವಿಕೆಟ್!

By Suvarna News  |  First Published Nov 12, 2023, 10:06 PM IST

ಐಸಿಸಿ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹೊಸ ಪ್ರಯೋಗ ಮಾಡಿದ ಜೊತೆಗೆ ದಾಖಲೆ ಬರೆದಿದೆ. ನೆದರ್ಲೆಂಡ್ ವಿರುದ್ಧ ಭಾರತದ 9 ಮಂದಿ ಬೌಲಿಂಗ್ ಮಾಡಿದ್ದಾರೆ. ಕೀಪರ್ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಇನ್ನುಳಿದ ಎಲ್ಲರೂ ಬೌಲಿಂಗ್ ಮಾಡಿದ್ದಾರೆ. ಬ್ಯಾಟ್ಸ್‌ಮನ್ ಪೈಕಿ ನಾಯಕ ರೋಹಿತ್ ಶರ್ಮಾ ಹಾಗೂ ಕೊಹ್ಲಿ ವಿಕೆಟ್ ಕಬಳಿಸಿ ಸಂಭ್ರಮಿಸಿದ್ದಾರೆ. 


ಬೆಂಗಳೂರು(ನ.11) ಭಾರತ ಹಾಗೂ ನೆದರ್ಲೆಂಡ್ ನಡುವಿನ ಐಸಿಸಿ ವಿಶ್ವಕಪ್ 2023ರ ಲೀಗ್ ಪಂದ್ಯ ಹಲವು ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಕೆಲ ಪ್ರಯೋಗಳು ನಡೆದಿದೆ. ಈ ಪೈಕಿ 9 ಮಂದಿ ಬೌಲಿಂಗ್ ಮಾಡಿ ಅಭಿಮಾನಿಗಳ ಹುಚ್ಚೆದ್ದು ಕುಣಿಸಿದ್ದಾರೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಂತ ಪ್ರತಿಷ್ಠಿತ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಸ್ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿ ನೆದರ್ಲೆಂಡ್ ಆಲೌಟ್ ಮಾಡಿದ್ದಾರೆ. 

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಬೌಲರ್ ಬಳಕೆ ಮಾಡಿದ ಪಟ್ಟಿಯಲ್ಿ ಇದೀಗ ಭಾರತ ಕೂಡ ಸ್ಥಾನ ಪಡೆದಿದೆ. 1987ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ, ಶ್ರೀಲಂಕಾ ವಿರುದ್ಧ 9 ಬೌಲರ್ ಬಳಕೆ ಮಾಡಿತ್ತು. 1992ರಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ದ 9 ಬೌಲರ್ ಬಳಕೆ ಮಾಡಿತ್ತು. ಇದೀಗ ನೆದರ್ಲೆಂಡ್ ವಿರುದ್ದ ಭಾರತ ಕೂಡ 9 ಬೌಲರ್ ಬಳಕೆ ಮಾಡಿದೆ. 

Latest Videos

undefined

ICC ವಿಶ್ವಕಪ್ ಟೂರ್ನಿಯ ಲೀಗ್‌ನ ಎಲ್ಲಾ ಪಂದ್ಯ ಗೆದ್ದು ಹೊಸ ದಾಖಲೆ ಬರೆದ ಭಾರತ!

ವಿರಾಟ್ ಕೊಹ್ಲಿ 3 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಕೊಹ್ಲಿ ಬೌಲಿಂಗ್ ಎಕಾನಮಿ 4.30. ಇನ್ನು ಶುಭಮನ್ ಗಿಲ್ 2 ಓವರ್ ಬೌಲಿಂಗ್ ಮಾಡಿ 11 ರನ್ ನೀಡಿದ್ದಾರೆ. ಆದರೆ ಯಾವುದೇ ವಿಕೆಟ್ ಕಬಳಿಸಿಲ್ಲ. ಇನ್ನು ಸೂರ್ಯಕುಮಾರ್ ಯಾದವ್ 2 ಓವರ್‌ನಲ್ಲಿ 17 ರನ್ ನೀಡಿ ಕೊಂಚ ದುಬಾರಿಯಾದರು. ಇತ್ತ ನಾಯಕ ರೋಹಿತ್ ಶರ್ಮಾ ಕೇವಲ 5 ಎಸೆತ ಮಾತ್ರ ಬೌಲಿಂಗ್ ಮಾಡಿದ್ದಾರೆ. 5ನೇ ಎಸೆತದಲ್ಲೇ ವಿಕೆಟ್ ಕಬಳಿಸಿ , ನೆದರ್ಲೆಂಡ್ ತಂಡವನ್ನು ಆಲೌಟ್ ಮಾಡಿದ್ದಾರೆ. 

ಇನ್ನು ರವೀಂದ್ರ ಜಡೇಜಾ ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಸ್ಪಿನ್ನರ್ ಅನ್ನೋ ದಾಖಲೆ ಬರೆದಿದ್ದಾರೆ. 1996ರ ವಿಶ್ವಕಪ್ ಟೂರ್ನಿಯಲ್ಲಿ ಅನಿಲ್ ಕುಂಬ್ಳೆ 15 ವಿಕೆಟ್ ಕಬಳಿಸಿದ್ದರು. ಇದೀಗ ಜಡೇಜಾ 16 ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದಿದ್ದಾರೆ.

ವಿಶ್ವಕಪ್‌ನಿಂದ ಹೊರಬಿದ್ದರೂ ಪಾಕಿಸ್ತಾನಕ್ಕೆ ಸಿಗಲಿದೆ ಕೋಟಿ ಕೋಟಿ ರೂ ಪ್ರಶಸ್ತಿ ಮೊತ್ತ!

click me!