Ind vs SA: ಆ ಬೌಲರ್ ಕಂಡ್ರೆ ಟೀಂ ಇಂಡಿಯಾ ಬ್ಯಾಟರ್ಸ್‌ ಹೆದರೋದ್ಯಾಕೆ..?

Published : Nov 05, 2023, 01:12 PM IST
Ind vs SA: ಆ ಬೌಲರ್ ಕಂಡ್ರೆ ಟೀಂ ಇಂಡಿಯಾ ಬ್ಯಾಟರ್ಸ್‌ ಹೆದರೋದ್ಯಾಕೆ..?

ಸಾರಾಂಶ

ಒನ್ಡೇ ವರ್ಲ್ಡ್‌ಕಪ್ನಲ್ಲಿ ಭಾರತೀಯರು, ಸೋಲಿಲ್ಲದ ಸರದಾರರು. ಲೀಗ್‌ನಲ್ಲಿ ಆಡಿರುವ 7ಕ್ಕೆ ಏಳೂ ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ, ಇನ್ನುಳಿದ ಎರಡು ಮ್ಯಾಚ್ ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡ್ತಿದೆ. 7 ಪಂದ್ಯದಲ್ಲೂ ಭಾರತೀಯರು ಡಾಮಿನೆಂಟ್ ಸಾಧಿಸಿದ್ದಾರೆ.

ಕೋಲ್ಕತಾ(ನ.05): ಭಾರತೀಯರು ಯಾವ ಬೌಲರ್‌ಗೆ ಹೆಚ್ಚು ರನ್ ಹೊಡೆಯುತ್ತಾರೋ ಅದೇ ಬೌಲರ್‌ಗೆ ವಿಕೆಟ್ ಒಪ್ಪಿಸ್ತಿದ್ದಾರೆ. ಅದೇ ಅವರ ವೀಕ್ನೆಸ್ ಆಗಿ ಬಿಟ್ಟಿದೆ. ಈಗ ಇದೇ ಭಯವೂ ಆಗಿದೆ. ಯಾಕಂದ್ರೆ ನಾಳೆಯೂ ಅದೇ ಬೌಲರ್ ಸೌತ್ ಆಫ್ರಿಕಾ ಪರ ಆಡ್ತಿದ್ದಾನೆ. ಅವನೇನೋ ರನ್ ಕೊಟ್ಟರೆ ಪರವಾಗಿಲ್ಲ. ವಿಕೆಟ್ ಬೇಟೆಯಾಡಿದ್ರೆ ಟೀಂ ಇಂಡಿಯಾಗೆ ಸೋಲು ಖಚಿತ.

ಒನ್ಡೇ ವರ್ಲ್ಡ್‌ಕಪ್ನಲ್ಲಿ ಭಾರತೀಯರು, ಸೋಲಿಲ್ಲದ ಸರದಾರರು. ಲೀಗ್‌ನಲ್ಲಿ ಆಡಿರುವ 7ಕ್ಕೆ ಏಳೂ ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ, ಇನ್ನುಳಿದ ಎರಡು ಮ್ಯಾಚ್ ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡ್ತಿದೆ. 7 ಪಂದ್ಯದಲ್ಲೂ ಭಾರತೀಯರು ಡಾಮಿನೆಂಟ್ ಸಾಧಿಸಿದ್ದಾರೆ. ಬ್ಯಾಟಿಂಗ್-ಬೌಲಿಂಗ್ ಎರಡು ವಿಭಾಗದಲ್ಲೂ ಎದುರಾಳಿಯನ್ನ ಹುಟ್ಟಡಗಿಸಿದ್ದಾರೆ. ಆದ್ರೆ ಬ್ಯಾಟರ್ಗಳ ಒಂದು ವೀಕ್ನೆಸ್ ಮಾತ್ರ ಸರಿಯಾಗಿಲ್ಲ. ರನ್ ಹೊಳೆಯನ್ನೇ ಹರಿಸಿದ್ರೂ ಆ ಬೌಲರ್ಗೆ ವಿಕೆಟ್ ಒಪ್ಪಿಸಿ ಬರ್ತಿದ್ದಾರೆ.

ಮೊಹಮ್ಮದ್ ಶಮಿ ಸಾಧನೆಗೆ ಧರ್ಮದ ಲೇಬಲ್: ಕ್ರಿಕೆಟ್ನಲ್ಲಿ ಧರ್ಮವನ್ನ ಎಳೆದು ತಂದ ಪಾಕಿಗಳು..!

ಎಡಗೈ ವೇಗಿಗಳಿಗೆ ಔಟ್ ಆಗ್ತಿದ್ದಾರೆ ಭಾರತೀಯರು..!

ಯೆಸ್, ಭಾರತೀಯ ಬ್ಯಾಟರ್ಸ್‌ಗೆ  ಈ ವಿಶ್ವಕಪ್ನಲ್ಲೂ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಗಳ ಫೋಬಿಯಾ ಕಾಡ್ತಿದೆ. 7 ಪಂದ್ಯಗಳಲ್ಲೂ ಎಡಗೈ ವೇಗಿಗಳ ಎದುರು ಭಾರತೀಯರು ಡಾಮಿನೆಂಟ್ ಸಾಧಿಸಿದ್ದಾರೆ. ಬೌಂಡ್ರಿ-ಸಿಕ್ಸರ್ಗಳನ್ನ ಸಿಡಿಸಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಲಂಕಾ, ಪಾಕ್, ಆಸೀಸ್, ಕಿವೀಸ್, ಇಂಗ್ಲೆಂಡ್ ಹೀಗೆ 5 ಟೀಮ್ನಲ್ಲಿರುವ ಎಡಗೈ ಬೌಲರ್ಗಳನ್ನ ದಂಡಿಸಿದ್ದಾರೆ.

ಲೆಫ್ಟಿಗಳಿಗೆ ರನ್ ಹೊಡೆದ್ರು, ಲೆಫ್ಟಿಗಳಿಗೆ ಔಟಾದ್ರು..!

ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್‌ಗೆ ಭಾರತೀಯರು ರನ್ ಹೊಡೆದ್ರೂ ಕೊನೆಗೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಹೌದು, ಮೊನ್ನೆ ಶ್ರೀಲಂಕಾದ ದಿಲ್ಶಾನ್ ಮದುಶಂಕಗೆ 10 ಓವರ್‌ನಲ್ಲಿ 80 ರನ್ ಬಾರಿಸಿದ್ರು. ಕೊನೆಗೆ ಆತನಿಗೆ ಐವರು ಬ್ಯಾಟರ್ಸ್‌ ಔಟಾದ್ರು.

ICC World Cup 2023: ಅಗ್ರಸ್ಥಾನಕ್ಕೆ ಭಾರತ vs ದಕ್ಷಿಣ ಆಫ್ರಿಕಾ ಫೈಟ್‌!

ಇಂಗ್ಲೆಂಡ್‌ನ ಡೇವಿಡ್ ವಿಲ್ಲೆ 3, ಆಸೀಸ್‌ನ ಮಿಚೆಲ್ ಸ್ಟಾರ್ಕ್ 2, ಕಿವೀಸ್‌ನ ಟ್ರೆಂಟ್ ಬೌಲ್ಟ್ ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ ಭಾರತ ವಿರುದ್ಧ ತಲಾ 1 ವಿಕೆಟ್ ಪಡೆದಿದ್ದಾರೆ. ಈ ಎಲ್ಲರಿಗೂ ಭಾರತೀಯರು ಸಿಕ್ಕಾಪಟ್ಟೆ ರನ್ ಹೊಡೆದಿದ್ದಾರೆ. ಆದ್ರೂ ಕೊನೆಗೆ ಅವರಿಗೆ ಔಟಾಗಿರೋದು ವಿಪರ್ಯಾಸ. ಇದನ್ನ ನೋಡುತ್ತಿದ್ದರೆ, ಈಗಲೂ ಭಾರತೀಯರಿಗೆ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್ ಫೋಬಿಯಾ ಕಾಡ್ತಿದೆ ಅನಿಸ್ತಿದೆ.

ಆಫ್ರಿಕಾ ಟೀಮ್‌ನಲ್ಲಿದ್ದಾನೆ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್
 
ಸೌತ್ ಆಫ್ರಿಕಾ ವಿರುದ್ಧ ಇಂದು ಟೀಂ ಇಂಡಿಯಾ ಪಂದ್ಯ ಆಡ್ತಿದೆ. ಆ ಟೀಮ್‌ನಲ್ಲೂ ಒಬ್ಬ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ ಇದ್ದಾನೆ. ಆತನೇ ಮಾರ್ಕೊ ಯಾನ್ಸೆನ್. ಈ ವಿಶ್ವಕಪ್ನಲ್ಲಿ 7 ಪಂದ್ಯಗಳಿಂದ 16 ವಿಕೆಟ್ ಕಬಳಿಸಿದ್ದಾರೆ. 5.83ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿರೋ ಮಾರ್ಕೋ, ಇಂದು ಭಾರತೀಯರಿಗೆ ಕಂಟಕವಾದ್ರೂ ಆಶ್ಚರ್ಯವಿಲ್ಲ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?