ವಿಶ್ವಕಪ್ ಟೂರ್ನಿಗಳಲ್ಲಿ ಕೊಹ್ಲಿಗೆ ಇವರೇ ವಿಲನ್.! ವಿರಾಟ್ ಕಟ್ಟಿಹಾಕಲು ಕಿವೀಸ್ ಬಳಿಯಿದೆ ವಿಶೇಷ ಅಸ್ತ್ರ

By Suvarna News  |  First Published Nov 15, 2023, 1:22 PM IST

ವಿಶ್ವಕಪ್ ಸಮರದಲ್ಲಿ ವಿರಾಟ್ ಕೊಹ್ಲಿ ಸೂಪರ್ ಫಾರ್ಮ್ನಲ್ಲಿದ್ದಾರೆ. ಅದ್ಭುತ ಬ್ಯಾಟಿಂಗ್‌ನಿಂದ ತಂಡಕ್ಕೆ ಗೆಲುವು ತಂದುಕೊಡ್ತಿದ್ದಾರೆ. ಸೆಮಿಫೈನಲ್ನಲ್ಲೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡೋಕೆ ರೆಡಿಯಾಗಿದ್ದಾರೆ. ಆದ್ರೆ, ಭಾರತೀಯ ಅಭಿಮಾನಿಗಳಿಗೆ ಮಾತ್ರ ಆತಂಕ ಶುರುವಾಗಿದೆ. ಈ ಆತಂಕಕ್ಕೆ ಕಾರಣ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್. 


ಬೆಂಗಳೂರು(ನ.15): ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಕಾದಾಟಕ್ಕೆ ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ. ಆದ್ರೆ, ಈ ಒಂದು ಅಂಶ ಟೀಂ ಇಂಡಿಯಾ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ. ಇದು ಕಿವೀಸ್ ಪಡೆಗೆ ಪ್ಲಸ್ ಪಾಯಿಂಟ್ ಆಗಿದೆ. ತಮ್ಮ ಬಳಿ ಇರೋ ವಿಶೇಷ ಅಸ್ತ್ರದಿಂದ ಕೊಹ್ಲಿಯನ್ನ ಕಟ್ಟಿಹಾಕೋದಕ್ಕೆ ಪ್ಲಾನ್ ಮಾಡಿದೆ.

ಯೆಸ್, ವಿಶ್ವಕಪ್ ಸಮರದಲ್ಲಿ ವಿರಾಟ್ ಕೊಹ್ಲಿ ಸೂಪರ್ ಫಾರ್ಮ್ನಲ್ಲಿದ್ದಾರೆ. ಅದ್ಭುತ ಬ್ಯಾಟಿಂಗ್‌ನಿಂದ ತಂಡಕ್ಕೆ ಗೆಲುವು ತಂದುಕೊಡ್ತಿದ್ದಾರೆ. ಸೆಮಿಫೈನಲ್ನಲ್ಲೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡೋಕೆ ರೆಡಿಯಾಗಿದ್ದಾರೆ. ಆದ್ರೆ, ಭಾರತೀಯ ಅಭಿಮಾನಿಗಳಿಗೆ ಮಾತ್ರ ಆತಂಕ ಶುರುವಾಗಿದೆ. ಈ ಆತಂಕಕ್ಕೆ ಕಾರಣ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್. 

Tap to resize

Latest Videos

ಟ್ರೆಂಟ್ ಬೌಲ್ಟ್ ಎಡಗೈ ವೇಗಿಯಾಗಿದ್ದು, ಬಿಗ್ ಮ್ಯಾಚ್‌ಗಳಲ್ಲಿ ಕೊಹ್ಲಿ ಎಡಗೈ ವೇಗಿಗಳ ವಿರುದ್ಧ ಬ್ಯಾಟ್ ಬೀಸಲು ಪರದಾಡ್ತಾರೆ. ಕಳೆದ ಮೂರು ಸೆಮಿಫೈನಲ್‌ನಲ್ಲಿ ಎಡಗೈ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿರೋದೇ ಇದಕ್ಕೆ ಸಾಕ್ಷಿ.

ಮುಂಬೈನಲ್ಲಿ ಒಂದೇ ಒಂದು ಸೆಮಿಫೈನಲ್ ಗೆದ್ದಿಲ್ಲ ಭಾರತ..! ಹೋಗ್ರೌಂಡ್‌ನಲ್ಲಿ ತ್ರಿಮೂರ್ತಿಗಳಿಗೆ ಬಿಗ್ ಚಾಲೆಂಜ್..!

2011ರ ವಿಶ್ವಕಪ್ ಸೆಮಿಫೈನಲ್ನಲ್ಲಿ ರಿಯಾಜ್..!

2011ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿ ಏಕದಿನ ವಿಶ್ವಕಪ್ ಆಡಿದ್ರು. ಮೊಹಾಲಿಯಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ನಲ್ಲಿ ಎಡಗೈ ವೇಗಿ ವಹಾಬ್ ರಿಯಾಜ್‌ಗೆ ಕೊಹ್ಲಿ ಔಟಾಗಿದ್ರು. 

2015ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಿಚೆಲ್ ಜಾನ್ಸನ್..!

2015ರ ಏಕದಿನ ವಿಶ್ವಕಪ್ನ ಸೆಮಿಫೈನಲ್‌ನಲ್ಲೂ ವಿರಾಟ್, ಎಡಗೈ ವೇಗಿ ಮಿಚೆಲ್ ಜಾನ್ಸನ್ಗೆ ಬಲಿಯಾಗಿದ್ರು. ಅಂದು ವಿರಾಟ್ ವಿಕೆಟ್ ಬೀಳುತ್ತಿದ್ದಂತೆ, ಟೀಂ ಇಂಡಿಯಾ ಸೋಲು ಪಕ್ಕಾ ಆಗಿತ್ತು. 

2019ರ ಸೆಮಿಫೈನಲ್‌ನಲ್ಲಿ ಟ್ರೆಂಟ್ ಬೌಲ್ಟ್..!

2019ರ ವರ್ಲ್ಡ್‌ನಲ್ಲೂ ಅದೇ ರಿಫೀಟ್ ಆಗಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್, ಕೊಹ್ಲಿಗೆ ಪೆವಿಲಿಯನ್‌ಗೆ ದಾರಿ ತೋರಿಸಿದ್ರು. ಕೊಹ್ಲಿ ಜೊತೆಗೆ ರವೀಂದ್ರ ಜಡೇಜಾರನ್ನು ಔಟ್ ಮಾಡಿದ್ರು.

INDvNZ ಸೆಮಿಫೈನಲ್‌ಗೆ ಕಾಡುತ್ತಾ ಮಳೆ? ರಿಸರ್ವ್ ಡೇನಲ್ಲೂ ವರುಣ ವಕ್ಕರಿಸಿದೆ ಫೈನಲ್‌ಗೆ ಯಾರು? 

ವಿರಾಟ್ ಕೊಹ್ಲಿಯಷ್ಟೇ ಅಲ್ಲ, ಟೀಂ ಇಂಡಿಯಾದ ಬೇರೆ ಬ್ಯಾಟರ್ಸ್‌ಗೂ ಎಡಗೈ ವೇಗಿಗಳು ಕಂಟಕವಾಗಿದ್ದಾರೆ. 2021ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರೀದಿ. ಅಕ್ಷರಶ: ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್ನ ಧ್ವಂಸ ಮಾಡಿದ್ರು. 

ಈ ಬಾರಿಯ ವಿಶ್ವಕಪ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಿಲ್ಷನ್ ಮಧುಶಂಕ ಟೀಂ ಇಂಡಿಯಾಗೆ ಕಂಟಕವಾಗಿದ್ರು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ವಿಕೆಟ್ ಪಡೆದುಕೊಂಡಿದ್ರು. ಈ ಅಂಕಿಅಂಶಗಳು, ದಾಖಲೆಗಳು ಏನೇ ಇರಲಿ, ಟೀಂ ಇಂಡಿಯಾ ಬ್ಯಾಟರ್ಸ್ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಇಲ್ಲವಾದಲ್ಲಿ ಬೌಲ್ಟ್ ಅಬ್ಬರಿಸೋದು ಪಕ್ಕಾ.!

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!