ಕ್ರಿಕೆಟ್ ದೇವರ ನಾಡಿನಲ್ಲಿ ಕ್ರಿಕೆಟ್ ದೇವರ ದಾಖಲೆ ಬ್ರೇಕ್..? ಕೊಹ್ಲಿ ಮೇಲೆ ಎಲ್ಲರ ಕಣ್ಣು

By Naveen Kodase  |  First Published Nov 15, 2023, 12:32 PM IST

ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಸಿಡಿಸ್ತಾರೆ. ಸಚಿನ್ ತೆಂಡುಲ್ಕರ್‌ನ ಶತಕಗಳ ದಾಖಲೆಯನ್ನ ಹೊಡೆದು ಹಾಕ್ತಾರೆ ಅಂತ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ, ಚಿನ್ನಸ್ವಾಮಿ ಅಂಗಳದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ಔಟಾದ್ರು. ಹೀಗಾಗಿ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ  ಕೊಹ್ಲಿಯಿಂದ ಶತಕದಾಟ ನಿರೀಕ್ಷಿಸಲಾಗಿದೆ. 


ಮುಂಬೈ(ನ.15): ನ್ಯೂಜಿಲೆಂಡ್ ವಿರುದ್ಧದ ಇಂದಿನ ಸೆಮಿಫೈನಲ್ ಪಂದ್ಯ ಟೀಂ ಇಂಡಿಯಾಗೆ 7ನೇ ಸೆಮಿಫೈನಲ್. ಇನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಪಾಲಿಗೆ ಇದು ಸತತ 4ನೇ ಸೆಮಿಫೈನಲ್. ಈ ಬಿಗ್‌ ಫೈಟ್ನಲ್ಲಿ ಕೊಹ್ಲಿ, ಟೀಂ ಇಂಡಿಯಾವನ್ನ ಗೆಲ್ಲಿಸೋ ಜವಬ್ದಾರಿ ಹೊತ್ತಿದ್ದಾರೆ. ಅದ್ರ ಜೊತೆಗೆ ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಏಕದಿನ ವಿಶ್ವಕಪ್ ರಣರಂಗದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅಬ್ಬರಿಸ್ತಿದ್ದಾರೆ. ಕ್ಲಾಸ್ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಈಗಾಗಲೇ 5 ಅರ್ಧಶತಕ ಮತ್ತು 2 ಶತಕ ಬಾರಿಸಿ, ಹಲವು ದಾಖಲೆ ಗಳನ್ನ ಪುಡಿ ಪುಡಿ ಮಾಡಿದ್ದಾರೆ. ಇಂದಿನ ಸೆಮಿಫೈನಲ್ ಫೈಟ್‌ನಲ್ಲೂ ಕೆಲ ರೆಕಾರ್ಡ್ಸ್ಗಳನ್ನು ಬ್ರೇಕ್ ಮಾಡೋದಕ್ಕೆ ಕಾಯ್ತಿದ್ದಾರೆ. 

Tap to resize

Latest Videos

ಸಚಿನ್ ತೆಂಡುಲ್ಕರ್ ತವರಲ್ಲೇ ಸಚಿನ್ ದಾಖಲೆ ಉಡೀಸ್..?

ಯೆಸ್, ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಸಿಡಿಸ್ತಾರೆ. ಸಚಿನ್ ತೆಂಡುಲ್ಕರ್‌ನ ಶತಕಗಳ ದಾಖಲೆಯನ್ನ ಹೊಡೆದು ಹಾಕ್ತಾರೆ ಅಂತ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ, ಚಿನ್ನಸ್ವಾಮಿ ಅಂಗಳದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ಔಟಾದ್ರು. ಹೀಗಾಗಿ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ  ಕೊಹ್ಲಿಯಿಂದ ಶತಕದಾಟ ನಿರೀಕ್ಷಿಸಲಾಗಿದೆ. 

ನೀವು ಯಾವ ನಶೆಯಲ್ಲಿ ಮಾತನಾಡುತ್ತಿದ್ದೀರಾ? 'ಮತಾಂತರದ' ವಿಚಾರವಾಗಿ ಇಂಜಮಾಮ್ ಮೇಲೆ ಕಿಡಿಕಾರಿದ ಭಜ್ಜಿ

ಇಂದು ಕೊಹ್ಲಿ ಶತಕ ಸಿಡಿಸಿದ್ದೇ ಆದಲ್ಲಿ, ಏಕದಿನ ಕ್ರಿಕೆಟ್ನಲ್ಲಿ 50 ಶತಕಗಳ ಮೈಲ್ಸ್ಟೋನ್ ತಲುಪಲಿದ್ದಾರೆ. ಕ್ರಿಕೆಟ್ ದೇವರ ತವರಿನಲ್ಲೇ ಅವ್ರ ದಾಖಲೆಯನ್ನ ಬ್ರೇಕ್ ಮಾಡಲಿದ್ದಾರೆ. ಈ ಒಂದು ಕ್ಷಣಗಕ್ಕಾಗಿ ಕೋಟ್ಯಂತರ ಭಾರತೀಯರ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. 

ಸಚಿನ್ರ ಶತಕಗಳ ಜೊತೆಗೆ ಅವ್ರ ವಿಶ್ವಕಪ್ ಅತ್ಯಧಿಕ ರನ್ ಕೂಡ ಡೇಂಝರ್ ಝೋನ್ನಲ್ಲಿದೆ. 2003ರ ವಿಶ್ವಕಪ್ನಲ್ಲಿ ಸಚಿನ್ 673 ರನ್ಗಳಿಸಿದ್ರು. ಆ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ರು. 20 ವರ್ಷವಾದ್ರೂ ಈ ದಾಖಲೆ ಇನ್ನು ಸಚಿನ್ ಹೆಸರಿನಲ್ಲೇ ಇದೆ. 

ಸೆಮೀಸ್-ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಆತಿಥೇಯರ ಶಾಪ, ಕಳೆದ 3 ವಿಶ್ವಕಪ್ ಟೂರ್ನಿಯಲ್ಲೂ ಸೋಲು!

ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್‌ನ ಈ ದಾಖಲೆ ಬ್ರೇಕ್ ಮಾಡೋಕೆ ಜಸ್ಟ್ 80 ಬೇಕಾಗಿದೆ. ಈ ವಿಶ್ವಕಪ್ ಕೊಹ್ಲಿ ಈವರೆಗು ಆಡಿರೋ 9 ಪಂದ್ಯಗಳಿಂದ 594 ರನ್ ಕಲೆಹಾಕಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಹೈಯೆಸ್ಟ್ ರನ್ಗಳಿಸಿರೋ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿದ್ದಾರೆ. 

ಡೇಂಜರ್ ಝೋನ್ನಲ್ಲಿದೆ ರಿಕಿ ಪಾಂಟಿಂಗ್ ರೆಕಾರ್ಡ್..? 

ರಿಕಿ ಪಾಂಟಿಂಗ್ ಹೆಸರಿನಲ್ಲಿರುವ 55 ಮ್ಯಾಚ್ ವಿನ್ನಿಂಗ್ ಶತಕಗಳ ದಾಖಲೆಯನ್ನು ವಿರಾಟ್ ಈಗಾಗಲೇ ಸರಿಗಟ್ಟಿದ್ದಾರೆ. ಕಿವೀಸ್  ವಿರುದ್ಧ ಕಿಂಗ್ ಕೊಹ್ಲಿ ಶತಕ ಬಾರಿಸಿ, ಟೀಮ್ ಇಂಡಿಯಾ ಗೆದ್ದರೆ, ಅತೀ ಹೆಚ್ಚು ಮ್ಯಾಚ್ ವಿನ್ನಿಂಗ್ ಶತಕ ದಾಖಲಿಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಸದ್ಯ ಕೊಹ್ಲಿ ಜಬರರ್ದಸ್ತ್ ಫಾರ್ಮ್ನಲ್ಲಿದ್ದು, ಇಂದೇ ಈ ಮೂರು ದಾಖಲೆಗಳನ್ನು ಅಳಸಿ ಹಾಕಿದ್ರೂ ಅಚ್ಚರಿ ಇಲ್ಲ. 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!