ICC World Cup 2023: ಭಾರತ ಎದುರು ಪಾಕ್‌ಗೆ ಟಿ20 ವಿಶ್ವಕಪ್‌ ಆಟ ಮರುಕಳಿಸುವ ತುಡಿತ!

By Kannadaprabha News  |  First Published Oct 14, 2023, 11:01 AM IST

ಏಕದಿನ ವಿಶ್ವಕಪ್‌ನಂತೆ, ಟಿ20 ವಿಶ್ವಕಪ್‌ನಲ್ಲೂ ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಓಟ ಮುಂದುವರಿಸಿಕೊಂಡು ಸಾಗಿತ್ತು. ಆದರೆ 2021ರಲ್ಲಿ ಭಾರತದ ಅಜೇಯ ಓಟಕ್ಕೆ ಪಾಕಿಸ್ತಾನ ತಡೆಯೊಡ್ಡಿತು. ದುಬೈನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದು ಪಾಕಿಸ್ತಾನ ಸಂಭ್ರಮಿಸಿತ್ತು. 2022ರಲ್ಲಿ ಭಾರತ ಮತ್ತೆ ಗೆದ್ದು ಹೊಸ ಲೆಕ್ಕ ಆರಂಭಿಸಿದ್ದು ಬೇರೆ ಮಾತು.


ಅಹಮದಾಬಾದ್‌(ಅ.14): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ವಿಶ್ವಕಪ್‌ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಪಾಕಿಸ್ತಾನ ಎದುರು ಮುಗ್ಗರಿಸಿಲ್ಲ. 1992ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, ಏಳೂ ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್‌. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದೆ.

ಇನ್ನು ಏಕದಿನ ವಿಶ್ವಕಪ್‌ನಂತೆ, ಟಿ20 ವಿಶ್ವಕಪ್‌ನಲ್ಲೂ ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಓಟ ಮುಂದುವರಿಸಿಕೊಂಡು ಸಾಗಿತ್ತು. ಆದರೆ 2021ರಲ್ಲಿ ಭಾರತದ ಅಜೇಯ ಓಟಕ್ಕೆ ಪಾಕಿಸ್ತಾನ ತಡೆಯೊಡ್ಡಿತು. ದುಬೈನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದು ಪಾಕಿಸ್ತಾನ ಸಂಭ್ರಮಿಸಿತ್ತು. 2022ರಲ್ಲಿ ಭಾರತ ಮತ್ತೆ ಗೆದ್ದು ಹೊಸ ಲೆಕ್ಕ ಆರಂಭಿಸಿದ್ದು ಬೇರೆ ಮಾತು. 2021ರ ಗೆಲುವನ್ನೇ ಸ್ಫೂರ್ತಿಯಾಗಿಸಿಕೊಂಡು, ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಮೊದಲ ಗೆಲುವು ಒಲಿಸಿಕೊಂಡು ಗೆಲುವು-ಸೋಲಿನ ದಾಖಲೆಯನ್ನು 1-7ಕ್ಕೆ ತಗ್ಗಿಸಲು ಪಾಕಿಸ್ತಾನ ತುಡಿಯುತ್ತಿದೆ.

Latest Videos

undefined

ICC World Cup 2023: ಸೆವೆನ್‌ಸ್ಟಾರ್ ಭಾರತಕ್ಕೆ 8-0 ಧ್ಯಾನ..! ಇಂದು ಬದ್ಧ ಎದುರಾಳಿಗಳ ಕದನ

ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ: ಮ.12.30ಕ್ಕೆ ಆರಂಭ

ಉದ್ಘಾಟನಾ ಪಂದ್ಯಕ್ಕೆ ಇರದ ಅದ್ಧೂರಿ ಕಾರ್ಯಕ್ರಮವನ್ನು ಬಿಸಿಸಿಐ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಆಯೋಜಿಸಿದೆ. ಮಧ್ಯಾಹ್ನ 12.30ರಿಂದ 1.30ರ ವರೆಗೂ ಮೋದಿ ಕ್ರೀಡಾಂಗಣದಲ್ಲಿ ಬಾಲಿವುಡ್‌ ಗಾಯಕರಾದ ಅರಿಜಿತ್‌ ಸಿಂಗ್‌, ಶಂಕರ್‌ ಮಹದೇವನ್‌, ಸುಖ್ವಿಂದರ್‌ ಸಿಂಗ್‌ ಸೇರಿ ಇನ್ನೂ ಕೆಲವು ತಾರೆಯರು ಪ್ರದರ್ಶನ ನೀಡಲಿದ್ದಾರೆ.

ಇಂಡೋ-ಪಾಕ್‌ ವಿಶ್ವಕಪ್‌ ಮುಖಾಮುಖಿಗಳ ಮೆಲುವು

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ವೈರತ್ವ ಇಂದು ನಿನ್ನೆಯದಲ್ಲ. ಸಾಂಪ್ರದಾಯಿಕ ಬದ್ಧವೈರಿಗಳು ಏಕದಿನ ವಿಶ್ವಕಪ್‌ನಲ್ಲಿ ಈ ವರೆಗೆ 7 ಬಾರಿ ಮುಖಾಮುಖಿಯಾಗಿವೆ. 7 ಬಾರಿಯೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 1992ರಿಂದ 2019ರ ವರೆಗಿನ ಪಂದ್ಯಗಳ ವಿವರ ಇಲ್ಲಿದೆ.

ವರ್ಷ ಫಲಿತಾಂಶ ಸ್ಥಳ

1992 ಭಾರತಕ್ಕೆ 43 ರನ್‌ ಜಯ ಸಿಡ್ನಿ

1996 ಭಾರತಕ್ಕೆ 39 ರನ್‌ ಜಯ ಬೆಂಗಳೂರು

1999 ಭಾರತಕ್ಕೆ 47 ರನ್‌ ಗೆಲುವು ಮ್ಯಾಂಚೆಸ್ಟರ್‌

2003 ಭಾರತಕ್ಕೆ 6 ವಿಕೆಟ್‌ ಜಯ ಸೆಂಚೂರಿಯನ್‌

2011 ಭಾರತಕ್ಕೆ 29 ರನ್‌ ಗೆಲುವು ಮೊಹಾಲಿ

2015 ಭಾರತಕ್ಕೆ 76 ರನ್‌ ಜಯ ಅಡಿಲೇಡ್‌

2019 ಭಾರತಕ್ಕೆ 89 ರನ್‌ ಗೆಲುವು ಮ್ಯಾಂಚೆಸ್ಟರ್‌

'ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ': ಭಾರತ ಎದುರಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ವಾರ್ನಿಂಗ್..!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಕಿಶನ್‌/ಗಿಲ್‌, ಕೊಹ್ಲಿ, ಶ್ರೇಯಸ್‌, ರಾಹುಲ್‌, ಹಾರ್ದಿಕ್‌, ಜಡೇಜಾ, ಅಶ್ವಿನ್‌/ಶಮಿ/ಶಾರ್ದೂಲ್‌, ಬೂಮ್ರಾ, ಕುಲ್ದೀಪ್‌, ಸಿರಾಜ್‌.

ಪಾಕಿಸ್ತಾನ: ಶಫೀಕ್‌, ಇಮಾಮ್‌, ಬಾಬರ್‌ ಆಜಂ (ನಾಯಕ), ರಿಜ್ವಾನ್‌, ಶಕೀಲ್‌, ಇಫ್ತಿಕಾರ್‌, ಶದಾಬ್‌, ನವಾಜ್‌, ಶಾಹೀನ್‌, ಹಸನ್‌/ವಸೀಂ, ಹ್ಯಾರಿಸ್‌ ರೌಫ್‌.

ಪಂದ್ಯ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

click me!