ಶ್ರೀಲಂಕಾ ವಿರುದ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನದ ಸೆಮೀಸ್ ದಾರಿ ಬಹುತೇಕ ಬಂದ್!

By Suvarna News  |  First Published Nov 9, 2023, 8:04 PM IST

ವಿಶ್ವಕಪ್ ಟೂರ್ನಿಯ ಮಹತ್ವದ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವಿನ ನಗೆ ಬೀರಿದೆ. ಶ್ರೀಲಂಕಾ ತಂಡವನ್ನು 5 ವಿಕೆಟ್‌ನಿಂದ ಮಣಿಸಿದೆ. ನ್ಯೂಜಿಲೆಂಡ್ ಭರ್ಜರಿ ಗೆಲುವು ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.


ಬೆಂಗಳೂರು(ನ.09) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಅಂತ್ಯಗೊಂಡರೂ ಉಳಿದಿರುವ ಒಂದು ಸ್ಥಾನ ಇನ್ನೂ ಖಚಿತವಾಗಿಲ್ಲ. ಶ್ರೀಲಂಕಾ ವಿರುದ್ದದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಗೆಲುವು ದಾಖಲಿಸಿದೆ. ವಿಶೇಷ ಅಂದರೆ ಶ್ರೀಲಂಕಾ ನೀಡಿದ 171 ರನ್ ಟಾರ್ಗೆಟನ್ನು ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಗೊಂಡಿದೆ. ಇತ್ತ ಪಾಕಿಸ್ತಾನದ ಸೆಮೀಸ್ ಹಾದಿ ಬಹುತೇಕ ಕಮರಿದೆ.

150ಕ್ಕೂ ಹೆಚ್ಚಿನ ಬಾಲ್ ಉಳಿಸಿ ನ್ಯೂಜಿಲೆಂಡ್ ಪಂದ್ಯ ಗೆದ್ದುಕೊಂಡಿದೆ. ಹೀಗಾಗಿ ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಲದು, ಸೆಮಿಫೈನಲ್ ಸ್ಥಾನ ಖಚಿತಪಡಿಸಲು ಕನಿಷ್ಠ 270ಕ್ಕೂ ಹೆಚ್ಚು ರನ್‌ ಗೆಲುವು ಅಥವಾ 275 ಬಾಲ್ ಬಾಕಿ ಉಳಿಸಿ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ನ್ಯೂಜಿಲೆಂಡ್ ನೆಟ್ ರನ್ ರೇಟ್ ಹಿಂದಿಕ್ಕಲು ಸಾಧ್ಯ. ಹೀಗಾಗಿ ಈ ಎರಡು ಅವಕಾಶಗಳು ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

Latest Videos

undefined

ರಚಿನ್ ರವೀಂದ್ರ ಮುಟ್ಟಿದ್ದೆಲ್ಲಾ ಚಿನ್ನ, ಎರಡು ಅಪರೂಪದ ದಾಖಲೆ ಬರೆದ ಬೆಂಗಳೂರು ಮೂಲದ ಕಿವೀಸ್ ಆಟಗಾರ

ಸೆಮಿಫೈನಲ್ ಸ್ಥಾನಕ್ಕಾಗಿ ಒಂದೊಂದು ರನ್ , ಒಂದೊಂದು ಎಸೆತ ಹಾಗೂ ವಿಕೆಟ್ ಅಷ್ಟೇ ಮುಖ್ಯವಾಗುತ್ತಿದೆ. ನ್ಯೂಜಿಲೆಂಡ್ ಸದ್ಯ ತನ್ನ 9 ಲೀಗ್ ಪಂದ್ಯದಿಂದ 5 ಗೆಲುವಿನ ಮೂಲಕ 10 ಅಂಕ ಸಂಪಾದಿಸಿದೆ. ನೆಟ್ ರನ್‌ರೇಟ್     +0.922. ಇತ್ತ ಪಾಕಿಸ್ತಾನ 8 ಪಂದ್ಯಗಳಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ದ ಗೆಲುವು ದಾಖಲಿಸಿದರೆ 10 ಅಂಕ ಆಗಲಿದೆ. ಆದರೆ ನ್ಯೂಜಿಲೆಂಡ್ ನೆಟ್ ರನ್‌ರೇಟ್ ಹಿಂದಿಕ್ಕುವುದು ಪಾಕಿಸ್ತಾನಕ್ಕೆ ಕಷ್ಟ ಸಾಧ್ಯ.

171 ರನ್ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿಲೆಂಡ್ ನೆಟ ರನ್‌ರೇಟ್ ದೃಷ್ಟಿಯಲ್ಲಿಟ್ಟುಕೊಂಡೇ ಬ್ಯಾಟಿಂಗ್ ನಡೆಸಿತ್ತು. ಡೇವನ್ ಕೋನ್ವೆ ಹಾಗೂ ರಾಚಿನ್ ರವೀಂದ್ರ ಸ್ಫೋಟಕ ಆರಂಭ ನ್ಯೂಜಿಲೆಂಡ್ ತಂಡ ಆತ್ಮವಿಶ್ವಾಸ ಹೆಚ್ಚಿಸಿತು. ಕೋನ್ವೆ 45 ರನ್ ಸಿಡಿಸಿದರೆ, ರವೀಂದ್ರ 34 ಎಸೆತದಲ್ಲಿ 42 ರನ್ ಸಿಡಿಸಿದರು. ನಾಯಕ ಕೇನ್ ವಿಲಿಯ್ಸನ್ ನಿರಾಸೆ ಮೂಡಿಸಿದರು. 14 ರನ್ ಸಿಡಿಸಿ ಔಟಾದರು. 

ಯಾರಾಗ್ತಾರೆ ಟೀಂ ಇಂಡಿಯಾಗೆ ಸೆಮೀಸ್ ಎದುರಾಳಿ? ಇಂಡೋ-ಪಾಕ್ ಸೆಮೀಸ್ ಸಾಧ್ಯತೆ ಎಷ್ಟು?

ಮಾರ್ಕ್ ಚಂಪನ್ ಕೇವಲ 7ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಗ್ಲೆನ್ ಫಿಲಿಪ್ಸ್ ಅಜೇಯ 17 ರನ್ ಸಿಡಿಸಿದರೆ, ಟಾಮ್ ಲಾಥಮ್ ಅಜೇಯ 2 ರನ್ ಸಿಡಿಸುವ ಮೂಲಕ ನ್ಯೂಜಿಲೆಂಡ್ 23. 2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿತು.

 

click me!