2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡು ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸದ್ಯ ನೀರಸ ಪ್ರದರ್ಶನ ತೋರಿದೆ. ಸದ್ಯ ಆಡಿದ 6 ಪಂದ್ಯಗಳ ಪೈಕಿ 2 ಗೆಲುವು ಹಾಗೂ 4 ಸೋಲು ಸಹಿತ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇಸ್ಲಾಮಾಬಾದ್(ಅ.31): ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸತತ ಸೋಲು ಕಾಣುತ್ತಿರುವ ಬೆನ್ನಲ್ಲೇ, ತಂಡದ ನಾಯಕ ಬಾಬರ್ ಆಜಂ ವಿರುದ್ಧ ಅನೇಕರು ಹರಿಹಾಯಲು ಆರಂಭಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ಜಾಕಾ ಷರೀಫ್, ಬಾಬರ್‌ರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಇತ್ತೀಚೆಗೆ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಟೀವಿ ಚರ್ಚೆಯೊಂದರಲ್ಲಿ ಹೇಳಿದ್ದರು.
ಈ ಸಂಬಂಧ ವಿಚಾರಿಸಲು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್, ಬಾಬರ್ ಜೊತೆ ವಾಟ್ಸ್‌ಆ್ಯಪ್‌ನಲ್ಲಿ ನಡೆಸಿರುವ ಸಂವಹನವನ್ನೂ ಪಾಕಿಸ್ತಾನದ ಸುದ್ದಿ ವಾಹಿನಿಯೊಂದು ಬಿತ್ತರಿಸಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
Shoaib Jatt leaked Babar Azam’s private conversation to a TV channel without obtaining his consent. Well done, Azhar Ali, for pointing that out. That is disgusting, Lakh lanat!!!! pic.twitter.com/6XGecOAMI4
— Shaharyar Ejaz 🏏 (@SharyOfficial)
undefined
ಸ್ವಹಿತಾಸಕ್ತಿ ಆರೋಪ: ಆಯ್ಕೆಗಾರ ಹುದ್ದೆಗೆ ಇಂಜಿ ರಾಜೀನಾಮೆ!
ಲಾಹೋರ್: ಆಟಗಾರರ ಆಯ್ಕೆ ವಿಚಾರದಲ್ಲಿ ಸ್ವಹಿತಾಸಕ್ತಿ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಇಂಜಮಾಮ್-ಉಲ್-ಹಕ್ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇಂಜಿ ಬ್ರಿಟನ್ ಮೂಲದ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿದ್ದು, ಆ ಸಂಸ್ಥೆಯ ಪಾಲುದಾರರಾಗಿರುವ ತಲ್ಹಾ ರಹ್ಮಾನಿ ಪಾಕ್‌ನ ಬಾಬರ್ ಆಜಂ, ರಿಜ್ವಾನ್, ಶಾಹೀನ್ ಸೇರಿ 12 ಆಟಗಾರರ ಪ್ರಾಯೋಜಕತ್ವ, ಜಾಹೀರಾತು ಒಪ್ಪಂದಗಳ ನಿರ್ವಹಣೆ ಮಾಡುತ್ತಾರೆ.
'ದೇಶಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..?' ವೇಗಿ ಮೊಹಮ್ಮದ್ ಶಮಿಯ ಹೇಳಿಕೆ ಈಗ ವೈರಲ್..!
ಹೀಗಾಗಿ ರಾಷ್ಟ್ರೀಯ ತಂಡದ ಆಯ್ಕೆ ವಿಚಾರದಲ್ಲಿ ತಲ್ಹಾ, ಇಂಜಿ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎಂದು ಪಿಸಿಬಿ ಮುಖ್ಯಸ್ಥ ಜಾಕಾ ಆಶ್ರಫ್ ಆರೋಪಿಸಿ, ಈ ಬಗ್ಗೆ ತನಿಖೆ ಅಗತ್ಯವಿದೆ ಎಂದಿದ್ದಾರೆ. ಆದರೆ ತಮ್ಮ ಘನತೆ ಪ್ರಶ್ನಿಸಿದ್ದಕ್ಕಾಗಿ ಸಿಟ್ಟಾದ ಇಂಜಮಾಮ್, ಆರೋಪ ನಿರಾಕರಿಸುವುದರ ಜೊತೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಪಿಸಿಬಿ ಘಟನೆ ಬಗ್ಗೆ ತನಿಖೆಗೆ 5 ಮಂದಿಯ ಸಮಿತಿ ರಚಿಸಿದೆ.
ಸೆಮೀಸ್ ರೇಸ್‌ನಿಂದ ಬಹುತೇಕ ಹೊರಬಿದ್ದ ಪಾಕಿಸ್ತಾನ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡು ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸದ್ಯ ನೀರಸ ಪ್ರದರ್ಶನ ತೋರಿದೆ. ಸದ್ಯ ಆಡಿದ 6 ಪಂದ್ಯಗಳ ಪೈಕಿ 2 ಗೆಲುವು ಹಾಗೂ 4 ಸೋಲು ಸಹಿತ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನೊಂದು ಸೋಲು ಪಾಕಿಸ್ತಾನ ತಂಡವನ್ನು ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬೀಳುವಂತೆ ಮಾಡಲಿದೆ. ಇಂದು ಪಾಕಿಸ್ತಾನ ತಂಡವು ಬಾಂಗ್ಲಾದೇಶ ಎದುರು ಕಾದಾಡಲಿದ್ದು, ದೊಡ್ಡ ಅಂತರದ ಗೆಲುವು ದಾಖಲಿಸಿ ಸೆಮೀಸ್ ಆಸೆ ಜೀವಂತವಾಗಿಟ್ಟುಕೊಳ್ಳಲು ಎದುರು ನೋಡುತ್ತಿದೆ.