ಶ್ರೀಲಂಕಾ ಮಣಿಸಿ 6ನೇ ಸ್ಥಾನಕ್ಕೆ ಜಿಗಿದ ಆಫ್ಘಾನಿಸ್ತಾನ, ಸೆಮಿಫೈನಲ್‌‌ಗೆ ಇದೆ ಚಾನ್ಸ್!

Published : Oct 30, 2023, 11:23 PM IST
ಶ್ರೀಲಂಕಾ ಮಣಿಸಿ 6ನೇ ಸ್ಥಾನಕ್ಕೆ ಜಿಗಿದ ಆಫ್ಘಾನಿಸ್ತಾನ, ಸೆಮಿಫೈನಲ್‌‌ಗೆ ಇದೆ ಚಾನ್ಸ್!

ಸಾರಾಂಶ

ಐಸಿಸಿ ವಿಶ್ವಕಪ್ ಟೂರ್ನಿಯ ಬಲಿಷ್ಠ ತಂಡಗಳ ಸಾಲಿನಲ್ಲಿ ಆಫ್ಘಾನಿಸ್ತಾನ ಕೂಡ ಸೇರಿಕೊಂಡಿದೆ. ಘಟಾನುಘಟಿ ತಂಡಗಳಿಗೆ ಶಾಕ್ ನೀಡುತ್ತಿರುವ ಆಫ್ಘಾನಿಸ್ತಾನ ಇದೀಗ ಶ್ರೀಲಂಕಾ ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ.   

ಪುಣೆ(ಅ.30) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ಹೋರಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂಗ್ಲೆಂಡ್, ಪಾಕಿಸ್ತಾನದಂತ ಬಲಿಷ್ಠ ತಂಡವನ್ನೇ ಮಣಿಸಿದ ಆಫ್ಘಾನಿಸ್ತಾನ ಇದೀಗ ಶ್ರೀಲಂಕಾ ತಂಡಕ್ಕೆ ಸೋಲಿನ ಶಾಕ್ ನೀಡಿದೆ. ಶ್ರೀಲಂಕಾ ನೀಡಿದ 242 ರನ್ ಟಾರ್ಗೆಟ್ ಚೇಸ್ ಮಾಡಿದ ಆಫ್ಘಾನಿಸ್ತಾನ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಆಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ. ಇಷ್ಟೇ ಅಲ್ಲ ಆಫ್ಘಾನಿಸ್ತಾನದ ಸೆಮಿಫೈನಲ್ ಅವಕಾಶ ಮತ್ತಷ್ಟು ತೆರೆದುಕೊಂಡಿದೆ.

ಆಫ್ಘಾನಿಸ್ತಾನ ದಾಳಿಗೆ ಅಬ್ಬರಿಸಲು ವಿಫಲವಾದ ಶ್ರೀಲಂಕಾ 241 ರನ್ ಸಿಡಿಸಿತ್ತು. ಈ ಗುರಿಯನ್ನು ಆಫ್ಗಾನಿಸ್ತಾನ ಸುಲಭವಾಗಿ ಚೇಸ್ ಮಾಡಿದೆ. ಇಬ್ರಾಯಿಂ ಜರ್ದಾನ್ 39, ರಹಮತ್ ಶಾ 62, ನಾಯಕ ಹಶ್ಮುತುಲ್ಹಾ ಶಾಹಿದಿ ಅಜೇಯ 58 ಹಾಗೂ ಅಜ್ಮತುಲ್ಹಾ ಅಜೇಯ 78 ರನ್ ಸಿಡಿಸಿದರು. ಈ ಮೂಲಕ ಆಫ್ಘಾನಿಸ್ತಾನ45.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಕೊಹ್ಲಿ ಹುಟ್ಟಹಬ್ಬ ದಿನ INDvSA ಪಂದ್ಯ; ಈಡನ್ ಗಾರ್ಡನ್ಸಲ್ಲಿ ಕೇಕ್, 70 ಸಾವಿರ ಮಾಸ್ಕ್, ಸಿಡಿಮದ್ದು ಪ್ರದರ್ಶನ!

ವಿಶೇಷ ಅಂದರೆ ಈ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್, 1992ರ ಚಾಂಪಿಯನ್ ಪಾಕಿಸ್ತಾನ ಹಾಗೂ 1996ರ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮಣಿಸಿದ ಸಾಧನೆ ಮಾಡಿದೆ.  

ವಿಶ್ವಕಪ್ ಟೂರ್ನಿಗಲ್ಲಿ ಆಫ್ಘಾನಿಸ್ತಾನದ ಗೆಲುವು
ಸ್ಕಾಟ್‌ಲೆಂಡ್ ವಿರುದ್ದ 1 ವಿಕೆಟ್ ಗೆಲುವು, 2015
ಇಂಗ್ಲೆಂಡ್ ವಿರುದ್ಧ 69 ರನ್ ಗೆಲುವು, 2023
ಪಾಕಿಸ್ತಾನ ವಿರುದ್ಧ 8 ವಿಕೆಟ್ ಗೆಲುವು, 2023
ಶ್ರೀಲಂಕಾ ವಿರುದ್ದ 7 ವಿಕೆಟ್ ಗೆಲುವು, 2023

ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಇದುವರೆಗೆ ಒಟ್ಟು 4 ಗೆಲುವು ಸಾಧಿಸಿದೆ. ಈ ಪೈಕಿ ಮೂರು ಗೆಲುವು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅನ್ನೋದು ವಿಶೇಷ. ಇದುವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಆಡಿದ ಆರಂಭಿಕ 17 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿದೆ. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ 3 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.  

Breaking: ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ನಿರ್ವಹಣೆ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜುಮಾಮ್‌ ರಾಜೀನಾಮೆ!

ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ vs ಆಫ್ಘಾನಿಸ್ತಾನ
2015ರಲ್ಲಿ ಶ್ರೀಲಂಕಾಗೆ 4 ವಿಕೆಟ್ ಗೆಲುವು
2019ರಲ್ಲಿ ಶ್ರೀಲಂಕಾಗೆ 34 ರನ್ ಗೆಲುವು
2023ರಲ್ಲಿ ಆಫ್ಘಾನಿಸ್ತಾನಕ್ಕೆ 7 ವಿಕೆಟ್ ಗೆಲುವು

ಆಫ್ಘಾನಿಸ್ತಾನ ವಿರುದ್ಧದ ಸೋಲಿನೊಂದಿಗೆ ಶ್ರೀಲಂಕಾ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೋಲು ಕಂಡ ತಂಡ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೋಲು
ಶ್ರೀಲಂಕಾ: 43 ಸೋಲು
ಜಿಂಬಾಬ್ವೆ: 42 ಸೋಲು
ಇಂಗ್ಲೆಂಡ್: 37 ಸೋಲು
ಪಾಕಿಸ್ತಾನ: 36 ಸೋಲು
ನ್ಯೂಜಿಲೆಂಡ್: 35 ಸೋಲು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!