ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನV/sಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯಕ್ಕೆ ಪೊಲೀಸ್ ಬಿಗಿ ಭದ್ರತೆ!

By Ravi Janekal  |  First Published Oct 19, 2023, 8:03 PM IST

ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವೆ ಮೊದಲ ವರ್ಲ್ಡ್ ಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿರುವ ಹಿನ್ನೆಲೆ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


ಬೆಂಗಳೂರು (ಅ.19): ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವೆ ಮೊದಲ ವರ್ಲ್ಡ್ ಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿರುವ ಹಿನ್ನೆಲೆ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರಿಂದ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಟಿ.ಹೆಚ್ ಶೇಖರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್. ಶ್ವಾನದಳ ಮತ್ತು ಬಾಂಬ್ ಡಿಟೆಕ್ಟರ್ ರಿಂದ ಭಧ್ರತಾ ಪರಿಶೀಲನೆ ನಡೆಸಲಾಗಿದೆ. ಕ್ರೀಡಾಂಗಣದಲ್ಲಿ 9 ಎಸಿಪಿ, 25 ಜನ ಇನ್ಸ್ಪೆಕ್ಟರ್, 86 ಪಿಎಸ್ಐ, 404 ಕಾನ್ಸ್ಟೇಬಲ್ ಗಳ ಸೇರಿದಂತೆ ಒಟ್ಟು 623 ಪೊಲೀಸರನ್ನು ನಿಯೋಜಿಸಲಾಗಿದೆ.

Tap to resize

Latest Videos

ವಿಶ್ವಕಪ್‌ ಕ್ರಿಕೆಟ್ 2023 ಎಫೆಕ್ಟ್‌: ಈ ಇಬ್ಬರು ಉದ್ಯಮಿಗಳಿಗೆ ಭರ್ಜರಿ ಹಣದ ಹೊಳೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಪಂದ್ಯವಾಗಿರುವುದರಿಂದ ಮತ್ತು. ಪಾಕಿಸ್ತಾನ 10 ವರ್ಷಗಳ ನಂತರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿರುವದರಿಂದ ಹೈವೋಲ್ಟೇಜ್ ಪಂದ್ಯವಾಗಿರಲಿದ್ದು, ಮುಂಜಾಗ್ರತಾ ಕ್ರಮವಾಗಿ ಕ್ರೀಡಾಂಗಣ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.

ಇನ್ನು ಬಹಳಷ್ಟು ಆಸ್ಟ್ರೇಲಿಯನ್ ಆಟಗಾರರು IPL ಪಂದ್ಯ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದಾರೆ ಅಲ್ಲದೆ ಅವರು ಬೆಂಗಳೂರಿನ ಸ್ಥಳೀಯ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ RCB ಗಾಗಿ IPL ಆಡುತ್ತಾರೆ. ಇಲ್ಲಿನ ಜನರ ನೆಚ್ಚಿನವರಾಗಿದ್ದಾರೆ. ಅಲ್ಲದೆ ಆಲ್‌ರೌಂಡರ್‌ಗೆ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿರುತ್ತವೆ. ಸಾಂಪ್ರದಾಯಿಕವಾಗಿ ಚಿನ್ನಸ್ವಾಮಿ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ, ಏಕೆಂದರೆ ಮೇಲ್ಮೈಯ ಎರಡೂ ಬದಿಯಲ್ಲಿ ಸಣ್ಣ ಬೌಂಡರಿಗಳಿವೆ.

World Cup 2023: ಧರ್ಮಶಾಲಾದಲ್ಲಿ ಡಚ್ಚರ ಡಿಚ್ಚಿ, ದಕ್ಷಿಣ ಆಫ್ರಿಕಾ ಅಪ್ಪಚ್ಚಿ!

click me!