ಇಂದು ಆಸೀಸ್-ಕಿವೀಸ್ ಹೈವೋಲ್ಟೇಜ್ ಫೈಟ್; ಯಾವ ತಂಡ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆಗೆ ಲಾಭ?

By Naveen KodaseFirst Published Oct 8, 2024, 1:47 PM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಈ ಪಂದ್ಯದ ಫಲಿತಾಂಶ ಭಾರತದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ದುಬೈ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಭಾನುವಾರ ಬದ್ದ ಎದುರಾಳಿ ಪಾಕಿಸ್ತಾನ ಎದುರು 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಹೀಗಿದ್ದೂ, ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಸೆಮೀಸ್ ಕನಸು ತೂಗುಯ್ಯಾಲೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ತನ್ನ ಪಾಲಿನ ಗ್ರೂಪ್ ಹಂತದ ಇನ್ನೆರಡು ಪಂದ್ಯ ಗೆದ್ದರೂ ಸೆಮೀಸ್ ಸ್ಥಾನ ಖಚಿತವಾಗಬೇಕಿದ್ದರೇ ಅದೃಷ್ಟ ಕೈಹಿಡಿಯಬೇಕಿದೆ. 

ಹೌದು, ಭಾರತ ಮಹಿಳಾ ಕ್ರಿಕೆಟ್ ತಂಡವು ತಾನಾಡಿದ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು 58 ರನ್ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಪಾಕಿಸ್ತಾನ ಎದುರು 6 ವಿಕೆಟ್ ಅಂತರದ ಗೆಲುವು ಸಾಧಿಸಿದ ಹೊರತಾಗಿಯೂ ಹರ್ಮನ್‌ಪ್ರೀತ್ ಕೌರ್ ಪಡೆಯ ನೆಟ್ ರನ್‌ರೇಟ್ -1.217 ಆಗಿದೆ. 

Latest Videos

ಹಾಂಕಾಂಗ್‌ ಸಿಕ್ಸ್‌ನಲ್ಲಿ ಮತ್ತೆ ಭಾರತ ಕಣಕ್ಕೆ: ಪ್ರತಿ ತಂಡದಲ್ಲಿ ಆರು ಆಟಗಾರರು, ತಲಾ 5 ಓವರ್‌ ಆಟ!

ಇದೀಗ ಭಾರತ ತಂಡವು ಇಂದು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಕಾದಾಟದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸುತ್ತಿದೆ. ಯಾಕೆಂದರೆ ಅಲಿಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡದ ನೆಟ್‌ ರನ್‌ರೇಟ್ +1.908 ಆಗಿದ್ದರೇ, ಸೋಫಿ ಡಿವೈನ್ ನೇತೃತ್ವದ ನ್ಯೂಜಿಲೆಂಡ್ ತಂಡದ ನೆಟ್‌ ರನ್‌ರೇಟ್ +2.900 ಆಗಿದೆ. ಇದೀಗ ಹರ್ಮನ್‌ಪ್ರೀತ್ ಕೌರ್ ಪಡೆ ಇಂದು ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. 

ಒಂದು ವೇಳೆ ನ್ಯೂಜಿಲೆಂಡ್, ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಏನಾಗುತ್ತೆ?

ನ್ಯೂಜಿಲೆಂಡ್ ತಂಡವು ಒಂದು ವೇಳೆ ಇಂದು ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಹಾಗೂ ಆ ಬಳಿಕ ಶ್ರೀಲಂಕಾ ಹಾಗೂ ಪಾಕಿಸ್ತಾನವನ್ನು ಮಣಿಸಿದ್ರೆ ಕಿವೀಸ್ ತಂಡವು 8 ಅಂಕಗಳೊಂದಿಗೆ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಲಿದೆ. 

ಹೀಗಾದಲ್ಲಿ ಭಾರತ ತಂಡವು ಮುಂಬರುವ ಗ್ರೂಪ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಗೆಲುವು ಸಾಧಿಸಿದರೆ, 6 ಅಂಕಗಳೊಂದಿಗೆ ಅನಾಯಾಸವಾಗಿ ಹರ್ಮನ್‌ ಪಡೆ ಸೆಮೀಸ್ ಪ್ರವೇಶಿಸಲಿದೆ.

ಮಿಂಚಿನ ವೇಗ, ಮೊದಲ ಓವರ್ ಮೇಡನ್; ಪದಾರ್ಪಣಾ ಪಂದ್ಯದಲ್ಲೇ ಮಯಾಂಕ್ ದಾಖಲೆ!

ಇದೇ ವೇಳೆ ಆಸ್ಟ್ರೇಲಿಯಾ ತಂಡವು 4 ಅಂಕಗಳೊಂದಿಗೆ ಗ್ರೂಪ್ ಹಂತದಲ್ಲಿಯೇ ಹೊರಬೀಳಲಿದೆ.

ಒಂದು ವೇಳೆ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ರೆ?

ಒಂದು ವೇಳೆ ಇಂದು ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ರೆ ಭಾರತ ತಂಡವು ಸೆಮೀಸ್‌ ರೇಸ್‌ನಲ್ಲಿ ಉಳಿಯಲಿದೆ.

ಹೀಗಾದಲ್ಲಿ ಭಾರತ ತಂಡವು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಗೆಲುವು ಸಾಧಿಸಬೇಕು. ಆಗ ಭಾರತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಗ್ರೂಪ್ ಹಂತದ ಪಂದ್ಯಗಳ ಅಂತ್ಯದ ವೇಳೆಗೆ 6 ಅಂಕ ಪಡೆಯಲಿವೆ. ಆಗ ಯಾವ ಎರಡು ತಂಡಗಳು ಉತ್ತಮ ರನ್‌ರೇಟ್‌ ಹೊಂದಿರುತ್ತವೋ ಆ ಎರಡು ತಂಡಗಳು ಸೆಮೀಸ್‌ಗೆ ಎಂಟ್ರಿ ಪಡೆಯಲಿವೆ.

ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವು ಉಭಯ ತಂಡಗಳ ಪಾಲಿಗೆ ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಲಿದೆ
 

click me!