ನೀವು ಗಂಭೀರ್‌ ಕಾಲು ನೆಕ್ಕುತ್ತಿದ್ದೀರಿ: ಕ್ರೀಡಾ ತಜ್ಞರ ಹೊಗಳಿಕೆಗೆ ಗವಾಸ್ಕರ್‌ ಕಿಡಿ

By Naveen KodaseFirst Published Oct 8, 2024, 11:59 AM IST
Highlights

ಕಾನ್ಪುರ ಟೆಸ್ಟ್ ಗೆಲುವಿನ ಬೆನ್ನಲ್ಲೇ ಗೌತಮ್ ಗಂಭೀರ್ ಗುಣಗಾನ ಮಾಡುತ್ತಿರುವವರ ವಿರುದ್ಧ ದಿಗ್ಗಜ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಟಿ20 ಶೈಲಿಯಲ್ಲಿ ಆಡಿ ಭಾರತ ಗೆಲುವು ಸಾಧಿಸಿದ್ದಕ್ಕೆ ಹಲವು ಮಾಜಿ ಕ್ರಿಕೆಟಿಗರು ಕೋಚ್‌ ಗೌತಮ್‌ ಗಂಭೀರ್‌ರನ್ನು ಹೊಗಳುತ್ತಿದ್ದಾರೆ. ಇಂಗ್ಲೆಂಡ್‌ನ ಬಾಜ್‌ಬಾಲ್‌ ರೀತಿ ಭಾರತವೂ ಗಂಭೀರ್‌ ಕೋಚಿಂಗ್‌ನಲ್ಲಿ ಆಕ್ರಮಣಕಾರಿಯಾಡಿ ಆಡುತ್ತಿದೆ ಎಂದಿದ್ದಾರೆ.

ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌, ‘ಗಂಭೀರ್ ಕೇವಲ ಒಂದೆರಡು ತಿಂಗಳಿನಿಂದ ತರಬೇತಿ ನೀಡುತ್ತಿದ್ದಾರೆ. ಈಗಲೇ ಈ ರೀತಿ ಹೊಗಳಿಕೆ ಮೂಲಕ ಅವರ ಕಾಲು ನೆಕ್ಕುತ್ತಿದ್ದೀರಿ. ಸ್ವತಃ ಗಂಭೀರ್‌ ಕೂಡಾ ಆಕ್ರಮಣಕಾರಿ ಶೈಲಿಯಲ್ಲಿ ಹೆಚ್ಚೂನೂ ಆಡಿಲ್ಲ. ಭಾರತದ ಗೆಲುವಿಗೆ ಯಾವುದೇ ಕ್ರೆಡಿಟ್ ನೀಡಬಹುದಾಗಿದ್ದಾರೆ ಅದು ಕೇವಲ ರೋಹಿತ್‌ ಶರ್ಮಾಗೆ ಮಾತ್ರ’ ಎಂದಿದ್ದಾರೆ.

Latest Videos

ಈ ಸಲ ಕಪ್‌ ಬಿಟ್ಟು ಕೊಡಲ್ಲ: ಬೆಂಗಳೂರು ಬುಲ್ಸ್ ನಾಯಕ ಪ್ರದೀಪ್ ನರ್ವಾಲ್

ಮಳೆಯ ಅಡಚಣೆಯ ನಡುವೆಯೂ ನಡೆದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 7 ವಿಕೆಟ್ ರೋಚಕ ಜಯ ಸಾಧಿಸಿತ್ತು. ಟೀಂ ಇಂಡಿಯಾ ಬ್ಯಾಟರ್‌ಗಳು ಟಿ20 ಮಾದರಿಯ ರೀತಿಯಲ್ಲಿ ಬ್ಯಾಟ್ ಬೀಸಿ ಡ್ರಾ ಆಗುವಂತಿದ್ದ ಪಂದ್ಯವನ್ನು ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. 

ಶ್ರೀಲಂಕಾದ ಪೂರ್ಣಾವಧಿ ಕೋಚ್‌ ಆಗಿ ಜಯಸೂರ್ಯ

ಕೊಲಂಬೊ: ದಿಗ್ಗಜ ಕ್ರಿಕೆಟಿಗ ಸನತ್‌ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್‌ ತಂಡದ ಪೂರ್ಣಾವಧಿ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಅವರು 2026ರ ಟಿ20 ವಿಶ್ವಕಪ್‌ ಮುಕ್ತಾಯದ ವರೆಗೂ ತಂಡಕ್ಕೆ ಕೋಚ್‌ ಆಗಿರಲಿದ್ದಾರೆ ಎಂದು ಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ರೋಹಿತ್ ಶರ್ಮಾ ಆರ್‌ಸಿಬಿ ಬರ್ತಾರಾ? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್!

ಲಂಕಾದ ಮಾಜಿ ಆರಂಭಿಕ ಆಟಗಾರ ಜಯಸೂರ್ಯ ಜುಲೈನಲ್ಲಿ ತಂಡದ ಹಂಗಾಮಿ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರ ಅವಧಿಯಲ್ಲಿ ಭಾರತ ವಿರುದ್ಧ 27 ವರ್ಷ ಬಳಿಕ ಏಕದಿನ ಸರಣಿ ಗೆದ್ದಿದ್ದ ಲಂಕಾ, ಇಂಗ್ಲೆಂಡ್‌ ವಿರುದ್ಧ ಅದರದೇ ತವರಿನಲ್ಲಿ ಟೆಸ್ಟ್‌ ಪಂದ್ಯ ಜಯಿಸಿತ್ತು. ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ವಿರುದ್ಧ ತವರಿನ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಗೆದ್ದಿತ್ತು.

click me!