ಕೊರೋನಾ ವೈರಸ್ ಕಾರಣ ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಹಾಗೂ ಐಪಿಎಲ್ ಟೂರ್ನಿ ಕುರಿತು ನಿರ್ಧರಿಸಲು ಐಸಿಸಿ ಸಭೆ ಸೇರಿತ್ತು. ಪ್ರಮುಖ ಚರ್ಚೆ ನಡೆಸಿದ ಐಸಿಸಿ, ಮುಂದಿನ ತಿಂಗಳು ನಿರ್ಧಾರ ಪ್ರಕಟಿಸಲಿದೆ.
ದುಬೈ(ಜೂ.10): ಕೊರೋನಾ ವೈರಸ್ ಕಾರಣ ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿದೆ. ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಇದೀಗ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಆಯೋಜನೆ ಸವಾಲಾಗಿದೆ. ಇತ್ತ ಆಸ್ಟ್ರೇಲಿಯಾ, ವಿಶ್ವಕಪ್ ಟೂರ್ನಿ ಮುಂದೂಡಲು ಐಸಿಸಿಗೆ ಮನವಿ ಮಾಡಿತ್ತು. ಕುರಿತು ಐಸಿಸಿ ಇಂದು(ಜೂ.10) ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಸೇರಿತ್ತು.
ಐಪಿಎಲ್ ನಡೆಯುತ್ತಾ? ಸಿಹಿ ಸುದ್ದಿ ನೀಡಿದ ಬಿಸಿಸಿಐ
undefined
ಆಕ್ಟೋಬರ್-ನೆವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಯೋಜನೆ ಕುರಿತು ಐಸಿಸಿ ಚರ್ಚೆ ನಡೆಸಿತು. ಸದ್ಯ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ. ಇಷ್ಟೇ ಅಲ್ಲ, ಕೆಲ ದೇಶಗಳಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಮುಂದಿನ ತಿಂಗಳು ಪರಿಸ್ಥಿತಿ ಅವಲೋಕಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ನಿರ್ಧಾರ ಪ್ರಕಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಟಿ20 ವಿಶ್ವಕಪ್ ಮುಂದೂಡಿ: ಐಸಿಸಿಗೆ ಆಸ್ಪ್ರೇಲಿಯಾ ಮನವಿ
ಟಿ20 ವಿಶ್ವಕಪ್ ಭವಿಷ್ಯದ ಮೇಲೆ ಐಪಿಎಲ್ ಟೂರ್ನಿ ಆಯೋಜನೆ ನಿಂತಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಆದರೆ ಟಿ20 ವಿಶ್ವಕಪ್ ರದ್ದಾದರೆ ಮಾತ್ರ ಐಪಿಎಲ್ ಆಯೋಜನೆಗೆ ಅವಕಾಶ ಸಿಗಲಿದೆ. ಹೀಗಾಗಿ ಬಿಸಿಸಿಐ ಇದೀಗ ಮುಂದಿನ ತಿಂಗಳ ವರೆಗೆ ಕಾಯಬೇಕಿದೆ.