
ಮುಂಬೈ(ಜೂ.10): ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ ಪೈಕಿ ಯುವರಾಜ್ ಸಿಂಗ್‌ಗೆ ಅಗ್ರಸ್ಥಾನವಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಆಗಿ, ಸ್ಪಿನ್ನರ್ ಆಗಿ, ಮಿಂಚಿನ ಫೀಲ್ಡರ್ ಆಗಿ ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಟೂರ್ನಿಯಲ್ಲಿ ಕೆಚ್ಚೆದೆಯ ಹೋರಾಟ ನೀಡಿ ಭಾರತಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಬಳಿಕ ಫಾರ್ಮ್ ಸಮಸ್ಯೆ, ಫಿಟ್ನೆಸ್ ಸಮಸ್ಯೆಗಳಿಂದ ತಂಡದಿಂದ ಹೊರಗುಳಿದ ಯುವಿ, 2019ರ, ಜೂನ್ 10 ರಂದು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ
ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿ ಇದೀಗ ಒಂದು ವರ್ಷ ಕಳೆದಿದೆ. ಈ ಕುರಿತು ಯುವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಕ್ರಿಕೆಟ್ ನನ್ನ ಸರ್ವಸ್ವ, ಕ್ರಿಕೆಟ್ ಹೊರತುಪಡಿಸಿದ ಜೀವನವೇ ಇಲ್ಲ. ಈ ವೇಳೆ ನಾವು ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ, ಕೊರೋನಾ ವೈರಸ್ ಮುಕ್ತವಾಗಿಸಲು ಪ್ರಯತ್ನಿಸೋಣ ಎಂದು ಯುವಿ ಪೋಸ್ಟ್ ಹಾಕಿದ್ದರು.
ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!
ಈ ಪೋಸ್ಟ್‌ಗೆ ಯುವರಾಜ್ ಸಿಂಗ್ ಮಾಜಿ ಗೆಳತಿ, ಬಾಲಿವುಡ್ ನಟಿ ಕಿಮ್ ಶರ್ಮಾ, ಯುವರಾಜ್ ಸಿಂಗ್ ವಿದಾಯದ ವರ್ಷಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಿಮ್ ಶರ್ಮಾ ಗೋಟ್(G.O.A.T) ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂದು ಕಿಮ್ ಶರ್ಮಾ ಶಾರ್ಟ್ ಆಗಿ ಗೋಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಯುವರಾಜ್ ಸಿಂಗ್, 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಬಳಿಕ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. 2 ವರ್ಷ ಸತತ ಪ್ರಯತ್ನ ಮಾಡಿದ ಯುವಿನಯನ್ನು ಆಯ್ಕೆ ಸಮಿತಿಯೂ ಕಡೆಗಣಿಸಿತ್ತು. ಹೀಗಾಗಿ 2019ರ ಜೂನ್ 10 ರಂದು ಯುವಿ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.