T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!

By Suvarna News  |  First Published Oct 29, 2021, 6:33 PM IST

* ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ವಾರ್ನರ್

* ಕ್ರಿಸ್ಟಿಯಾನೋ ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್‌

* ಲಂಕಾ ಎದುರು ಆಕರ್ಷಕ ಅರ್ಧಶತಕ ಚಚ್ಚಿದ ವಾರ್ನರ್


ದುಬೈ(ಅ.29): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ಕ್ರಿಕೆಟ್ ತಂಡದ (Australia Cricket Team) ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಶ್ರೀಲಂಕಾ ವಿರುದ್ದ ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮಗೋಷ್ಠಿ ವೇಳೆ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಅವರನ್ನು ನೆನಪಿಸುವ ರೀತಿಯ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.  

ಹೌದು, ಕ್ರಿಸ್ಟಿಯಾನೋ ರೊನಾಲ್ಡೋ, 2020ರ ಯೂರೋ ಕಪ್‌ ಟೂರ್ನಿಯಲ್ಲಿ (Euro Cup) ಪ್ರೆಸ್‌ ಕಾನ್ಫರೆನ್ಸ್‌ ವೇಳೆ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಮುಂದಿದ್ದ ಕೋಕಾ ಕೋಲಾ (Coca Cola) ಬಾಟಲ್ ಬದಿಗೆ ಸರಿಸಿಟ್ಟಿದ್ದರು. ಇದರ ಬೆನ್ನಲ್ಲೇ ಕೋಕಾ ಕೋಲಾ ಕಂಪನಿ 4 ಬಿಲಿಯನ್ ಡಾಲರ್ ನಷ್ಟವಾಗಿತ್ತು. ಅದೇ ರೀತಿ ಡೇವಿಡ್ ವಾರ್ನರ್ (David Warner) ಕೂಡಾ ಟೇಬಲ್‌ ಮುಂದಿದ್ದ ಕೋಕಾ ಕೋಲಾ ಬಾಟಲ್ ಸರಿಸಿದ್ದಾರೆ. 35 ವರ್ಷದ ಆಟಗಾರರ ವಾರ್ನರ್ ಕುರಿತಂತೆ ಚುಟುಕಾಗಿ ಪ್ರತಿಕ್ರಿಯಿಸಿದ್ದು, ನಾನು ಇದನ್ನು ತೆಗೆಯಬಹುದೇ..? ಇದು ಕ್ರಿಸ್ಟಿಯಾನೋ ರೊನಾಲ್ಡೋಗೆ ಒಳ್ಳೆಯದು ಎಂದಾದರೇ ನನಗೂ ಕೂಡಾ ಒಳ್ಳೆಯದೇ ಎಂದು ನಗು ಬೀರಿದ್ದಾರೆ 

Tap to resize

Latest Videos

undefined

T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ, ಲಂಕಾ ಎದುರು ಆಸೀಸ್‌ಗೆ ಸುಲಭ ಜಯ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ (Sri Lanka Cricket Team) ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡವು 6 ವಿಕೆಟ್ ಕಳೆದುಕೊಂಡು 154 ರನ್‌ ಕಲೆಹಾಕಿತ್ತು. 14ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2021) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಡೇವಿಡ್ ವಾರ್ನರ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಲಂಕಾ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 42 ಎಸೆತಗಳನ್ನು ಎದುರಿಸಿ 65 ರನ್‌ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಇನ್ನೂ 3 ಓವರ್‌ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಕೋಕಾ ಕೋಲಾ ಬದಿಗಿಟ್ಟು ನೀರು ಕುಡಿಯಲು ಸಲಹೆ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೋ..!

ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಡೇವಿಡ್ ವಾರ್ನರ್, ಕಾಂಗರೂ ತಂಡದ ಪರ 83 ಇನಿಂಗ್ಸ್‌ಗಳನ್ನಾಡಿ 31.67ರ ಬ್ಯಾಟಿಂಗ್ ಸರಾಸರಿಯಲ್ಲಿ 2344 ರನ್‌ ಬಾರಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವಾರ್ನರ್‌ ಒಂದು ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದಾರೆ. 

IPL: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್‌ ಪಾಂಡ್ಯಗೆ ಕೋಕ್?‌

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತಾನಾಡಿದ ಮೊದಲೆರಡು ಟಿ20 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಅಕ್ಟೋಬರ್ 30ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಅಸ್ಟ್ರೇಲಿಯಾ ಕ್ರಿಕೆಟ್ ತಂಡವು ಇದುವರೆಗೂ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಜಯಿಸಿಲ್ಲ. ಹೀಗಾಗಿ ಆರೋನ್ ಫಿಂಚ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸುವ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪೈಪೋಟಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಯಿದೆ. ಉಭಯ ತಂಡಗಳು ಟೂರ್ನಿಯಲ್ಲಿ ತಲಾ 2 ಗೆಲುವುಗಳನ್ನು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಪೈಪೋಟಿ ನಡೆಸಲಿವೆ. 

click me!