T20 World Cup: ಲಂಕಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್‌ ಆಯ್ಕೆ

By Suvarna News  |  First Published Oct 30, 2021, 3:09 PM IST

* ಶಾರ್ಜಾ ಮೈದಾನದಲ್ಲಿ ಆಫ್ರಿಕಾ-ಲಂಕಾ ಮುಖಾಮುಖಿ

* ಲಂಕಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ

* ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ


ಶಾರ್ಜಾ(ಅ.30): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿಂದು ದಕ್ಷಿಣ ಆಫ್ರಿಕಾ (South Africa Cricket) ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಈ ಪಂದ್ಯಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ತಂಡ ಕೂಡಿಕೊಂಡಿದ್ದಾರೆ. ಕ್ವಿಂಟನ್ ಡಿ ಕಾಕ್‌ ವರ್ಣಭೇದ ವಿರುದ್ದದ ಆಂದೋಲನ Black Lives Matter ಅಭಿಯಾನಕ್ಕೆ ಬೆಂಬಲ ಸೂಚಿಸಿದ ಬೆನ್ನಲ್ಲೇ ತಂಡದೊಳಗೆ ಸ್ಥಾನ ಕಲ್ಪಿಸಲಾಗಿದೆ. ಕ್ವಿಂಟನ್ ಡಿ ಕಾಕ್‌ ತಂಡ ಕೂಡಿಕೊಂಡ ಬೆನ್ನಲ್ಲೇ ಹೆನ್ರಿಚ್ ಕ್ಲಾಸೆನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ (Sri Lanka Cricket) ಯಾವುದೇ ಬದಲಾವಣೆ ಮಾಡಿಲ್ಲ.

Latest Videos

undefined

ICC T20 World Cup: ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

ಗ್ರೂಪ್‌ 1 ರಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ತಲಾ 2 ಪಂದ್ಯಗಳನ್ನಾಡಿದ್ದು, ಈ ಪೈಕಿ ಒಂದು ಪಂದ್ಯದಲ್ಲಿ ಗೆಲುವು ಹಾಗೂ ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿವೆ. ಸೆಮೀಸ್‌ ಕನಸನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.

T20 World Cup ನಾಯಕನಾಗಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್‌ ಅಜಂ..!

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ತನ್ನ ಬೌಲರ್‌ಗಳಾದ ಕಗಿಸೋ ರಬಾಡ, ಏನ್ರಿಚ್ ನೊಕಿಯೆ, ಕೇಶವ್‌ ಮಹರಾಜ್ ಹಾಗೂ ತಬ್ರೀಜ್ ಸಂಶಿ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಕಳೆದ ಪಂದ್ಯದಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಏಯ್ಡನ್‌ ಮಾರ್ಕ್‌ರಮ್‌ ರೆಡ್‌ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇದಷ್ಟೇ ಅಲ್ಲದೇ ವ್ಯಾನ್ ಡರ್‌ ಡುಸೇನ್, ಕ್ವಿಂಟನ್‌ ಡಿ ಕಾಕ್ ಹಾಗೂ ಡೇವಿಡ್‌ ಮಿಲ್ಲರ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದರೆ ಲಂಕಾ ಎದುರು ಪ್ರಾಬಲ್ಯ ಮೆರೆಯಬಹುದಾಗಿದೆ.

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ಇನ್ನೊಂದೆಡೆ ಶ್ರೀಲಂಕಾ ಕ್ರಿಕೆಟ್ ತಂಡವು ಕಳೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದೆದರು 7 ವಿಕೆಟ್ ಅಂತರದ ಆಘಾತಕಾರಿ ಸೋಲು ಕಂಡಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫಾರ್ಮ್‌ಗೆ ಮರಳಲು ಶನಕಾ ಪಡೆ ಎದುರು ನೋಡುತ್ತಿದೆ. ವನಿಂದು ಹಸರಂಗ, ಆವಿಷ್ಕಾ ಫರ್ನಾಂಡೋ ಮಿಂಚಿದರೆ, ಹರಿಣಗಳಿಗೆ ಪೈಪೋಟಿ ನೀಡಬಹುದಾಗಿದೆ. 

ತಂಡಗಳು ಹೀಗಿವೆ:

ಶ್ರೀಲಂಕಾ ಕ್ರಿಕೆಟ್ ತಂಡ:
ಕುಸಾಲ್ ಪೆರೆರಾ (ವಿಕೆಟ್ ಕೀಪರ್), ಪತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಆವಿಷ್ಕಾ ಫರ್ನಾಂಡೋ, ಭಾನುಕಾ ರಾಜಪಕ್ಸಾ, ದಶುನ್ ಶನಕಾ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ದುಸ್ಮಂತ್ ಚಮಿರಾ, ಮಹೀಶ್ ತೀಕ್ಷಣ, ಲಹಿರು ಕುಮಾರ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ:
ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡರ್ ಡುಸೇನ್, ಏಯ್ಡನ್ ಮಾರ್ಕ್‌ರಮ್, ರೀಜಾ ಹೆಂಡ್ರಿಕ್ಸ್, ಡೇವಿಡ್‌ ಮಿಲ್ಲರ್, ಡ್ವೇನ್ ಪ್ರಿಟೋರಿಯಸ್‌, ಕೇಶವ್ ಮಹರಾಜ್, ಕಗಿಸೋ ರಬಾಡ, ಏನ್ರಿಚ್ ನೊಕಿಯೆ, ತಬ್ರೀಜ್ ಸಂಶಿ

click me!