*ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಸಾರಾ ಟೇಲರ್
*ಅಬು ಧಾಬಿ ತಂಡಕ್ಕೆ ಸಹಾಯಕ ಕೋಚ್ ಆಗಿ ನೇಮಕ
*ಪುರುಷರ ಫ್ರಾಂಚೈಸಿ ಕ್ರಿಕೆಟ್‌ನ ತಂಡಕ್ಕೆ ಕೋಚ್ ಆಗಿ ನೇಮಕಗೊಂಡ ಮೊದಲ ಮಹಿಳೆ
ಅಬು ಧಾಬಿ (ಅ. 30 ) : ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಸಾರಾ ಟೇಲರ್ (Sarah Taylor), ಅಬು ಧಾಬಿ ಟಿ10 ಟೂರ್ನಿಯ ಅಬು ಧಾಬಿ (Abu Dhabi) ತಂಡಕ್ಕೆ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪುರುಷರ ಫ್ರಾಂಚೈಸಿ ಕ್ರಿಕೆಟ್‌ನ ತಂಡವೊಂದಕ್ಕೆ ಕೋಚ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಸಾರಾ ಪಾತ್ರರಾಗಿದ್ದಾರೆ. ತಂಡದಲ್ಲಿ ಕ್ರಿಸ್ ಗೇಲ್, ಕಾಲಿನ್ ಇನ್‌ಗ್ರಾಂ, ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿ ಅನೇಕ ತಾರಾ ಆಟಗಾರರಿದ್ದಾರೆ.
T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!
undefined
ಸಾರಾ ಇಂಗ್ಲೆಂಡ್‌ನ ಸಸೆಕ್ಸ್ ತಂಡದ ಕೋಚ್ ಆಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 2006ರಲ್ಲಿ ಅಂ.ರಾ.ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಾರಾ 10 ಟೆಸ್ಟ್, 126 ಏಕದಿನ ಹಾಗೂ 90 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸಾರಾ ಮಾನಸಿಕ ಸಮಸ್ಯೆಯಿಂದಾಗಿ ಕೆಲ ದಿನಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಬಯೋ ಬಬಲ್‌ನೊಳಗೆ ಆಟಗಾರರು ಅನುಭವಿಸುತ್ತಿರುವ ಮಾನಸಿಕ ತಂದರೆಗಳಿಗೂ ಸಾರಾ ಸಲಹೆಗಳನ್ನು ನೀಡಬಲ್ಲರು.
IPL: ಬೆಟ್ಟಿಂಗ್ ಸಂಸ್ಥೆಗಳಲ್ಲಿ ಪಾಲುದಾರ ಸಿವಿಸಿ ಐಪಿಎಲ್ ತಂಡ ಮಾಲಿಕರು!
ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಟೇಲರ್ ಯುನೈಟೆಡ್ ಕಿಂಗ್‌ಡಂನಲ್ಲಿ ಪುರುಷರ ತಂಡದೊಂದಿಗೆ ಮೊದಲ ಮಹಿಳಾ ಸ್ಪೆಷಲಿಸ್ಟ್ ತರಬೇತುದಾರರಾಗಿದ್ದರು. ಈಗ ಅಬುಧಾಬಿ ತಂಡಕ್ಕೆ ಸಹಾಯಕ ಕೋಚ್ ಆಗಿ ನೇಮಕಗೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ತಮ್ಮ ಈ ಹೆಜ್ಜೆಯೂ ಜಗತ್ತಿನ ಇತರ ಮಹಿಳಾ ಕ್ರಿಕೆಟ್ ಆಟಗಾರರಿಗೆ ಸ್ಪೂರ್ಥಿಯಾಗಬೇಕೆಂದು ಎಂದು ಸಾರಾ ಆಶಿಸಿದ್ದಾರೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ, ಡಬಲ್ ಸಂಭ್ರಮದಲ್ಲಿ ದಿನೇಶ್ ಕಾರ್ತಿಕ್!
"ಈ ಫ್ರಾಂಚೈಸಿ ಸೇರಿರುವುದು ಮೊದಲ ಅನುಭವ , ವಿಶ್ವದೆಲ್ಲೆಡೆಯ ಆಟಗಾರರು ಮತ್ತು ತರಬೇತುದಾರರನ್ನು ಇಲ್ಲಿ ಭೇಟಿಯಾಗಬಹುದು. ನನ್ನನ್ನು ಕೊಚಿಂಗ್ ತಂಡದಲ್ಲಿ ನೋಡಿ ಇತರ ಮಹಿಳಾ ಆಟಾಗರರು ಕೂಡ ತಮಗೂ ಈ ರೀತಿ ಅವಕಾಶಗಳು ಇವೆ ಎಂಬುದನ್ನು ಅರಿತು, ಪ್ರೇರಣೆ ಪಡೆಯಬೇಕು" ಎಂದು ಸಾರಾ ಟೇಲರ್ ಹೇಳಿದ್ದಾರೆ. ಎರಡು ಐಸಿಸಿ ಮಹಿಳಾ ವಿಶ್ವಕಪ್, ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಗೆದ್ದಿರುವ ಟೇಲರ್ ವೃತ್ತಿಜೀವನದ ಅವಧಿಯಲ್ಲಿ ಇಂಗ್ಲೆಂಡ್ ಅನ್ನು 226 ಬಾರಿ ಪ್ರತಿನಿಧಿಸಿದ್ದಾರೆ. ಈಗ ಅಬು ಧಾಬಿ ತಂಡಕ್ಕೆ ಸಹಾಯಕ ಕೋಚ್ ಆಗಿ ನೇಮಕಗೊಂಮುಖ್ಯ ಕೋಚ್ ಪಾಲ್ ಫಾರ್ಬ್ರೇಸ್‌ಗೆ (Paul Farbrace) ಸಹಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?
2019ರ ಸೆಪ್ಟೆಂಬರ್‌ನಲ್ಲಿ ವಿಶ್ವಕ್ರಿಕೆಟ್ ನ ಮೋಸ್ಟ್ ಗ್ಲಾಮರಸ್ ಆಟಗಾರ್ತಿ, ಚಾಣಾಕ್ಷ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಇಂಗ್ಲೆಂಡ್‌ನ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಚುರುಕಿನ ವಿಕೆಟ್ ಕೀಪಿಂಗ್ ಜತೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ಸಾರಾರನ್ನು ಲೇಡಿ ಧೋನಿ ಎಂದೇ ಗುರುತಿಸಲಾಗುತ್ತಿತ್ತು. ಟೀಂ ಇಂಡಿಯಾದ ಯಶಸ್ವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗಿಂತ ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಸಾರಾ ಟೇಲರ್ ಶ್ರೇಷ್ಠ ವಿಕೆಟ್ ಕೀಪರ್ ಎಂದು ಆ್ಯಡಂ ಗಿಲ್ ಹೇಳಿದ್ದರು. ಈ ಹಿಂದೆ ತಮ್ಮದೇ ಅರೆಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳವ ಮೂಲಕ ಸುದ್ದಿಯಾಗಿದ್ದರು. ಆಟದ ಜತೆಗೆ ವಿವಾದಗಳು ಸಾರಾ ಜತೆಗೆ ಬಂದಿದ್ದವು.