ಪಾಕಿಸ್ತಾನಿ ನಟಿಯನ್ನು ಟ್ರೋಲ್ ಮಾಡುತ್ತಿರುವ ಕ್ರಿಕೆಟ್ ಪ್ರೇಮಿಗಳು, ಆಕೆಯ ಈ ಹಿಂದಿನ ಭವಿಷ್ಯವಾಣಿಯನ್ನು ಮರು ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಆಕೆ ಊಹಿಸಿದ್ದೆಲ್ಲ ತಪ್ಪಾಗುತ್ತಿದೆ ಎಂದು ಹಲವರು ಟ್ವೀಟ್ ಮಾಡುತ್ತಿದ್ದಾರೆ.
ಟಿ 20 ಕ್ರಿಕೆಟ್ (Cricket) ವಿಶ್ವಕಪ್ (T20 World Cup) ಕುತೂಹಲ ಘಟ್ಟದಲ್ಲಿದ್ದು, ಭಾರತ (India) ಸೆಮಿಫೈನಲ್ (Semifinal) ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಇನ್ನೊಂದೆಡೆ ಭಾರತ ಹಾಗೂ ಜಿಂಬಾಬ್ವೆ (Zimbabwe) ವಿರುದ್ಧ ಸೋಲನುಭವಿಸಿದ ಪಾಕಿಸ್ತಾನ (Pakistan) ತಂಡದ ಸೆಮಿಫೈನಲ್ ಆಸೆ ಬಹುತೇಕ ಕಮರಿ ಹೋಗಿದೆ. ಆದರೂ, ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಅದಕ್ಕೆ ಪಾಕ್ ದಕ್ಷಿಣ ಆಫ್ರಿಕಾ ಹಾಗೂ ಉಳಿದೆಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ. ಹಾಗೂ, ಭಾರತ ಸೇರಿ ಉಳಿದ ತಂಡಗಳ ಫಲಿತಾಂಶದ ಮೇಲೂ ಇದು ನಿರ್ಧಾರವಾಗುತ್ತದೆ. ಈ ಹಿನ್ನೆಲೆ ಪಾಕಿಸ್ತಾನಿ ನಟಿಯೊಬ್ಬಳು ಮುಂಬರುವ ಭಾರತ - ಜಿಂಬಾಬ್ವೆ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದರೆ ನಾನು ಆ ದೇಶದ ವ್ಯಕ್ತಿಯೊಬ್ಬರನ್ನು ಮದುವೆಯಾಗ್ತೀನಿ ಎಂದು ಟ್ವೀಟ್ ಮಾಡಿದ್ದಾಳೆ.
ಭಾನುವಾರ, ನವೆಂಬರ್ 6 ರಂದು ನಡೆಯಲಿರುವ ಭಾರತ - ಜಿಂಬಾಬ್ವೆ ಪಂದ್ಯ ಹಲವರ ಕುತೂಹಲ ಕೆರಳಿಸಿದೆ. ಏಕೆಂದರೆ, ಜಿಂಬಾಬ್ವೆ ಇತ್ತೀಚೆಗೆ ಪಾಕ್ ತಂಡವನ್ನು ಮಣಿಸಿತ್ತು. ಅಲ್ಲದೆ, ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧದ ಪಂದ್ಯದಲ್ಲಿ ನಟಿ ಸೆಹರ್ ಶಿನ್ವಾರಿ ಭಾರತ ಸೋಲಲೆಂದು ಆಶಿಸಿ ನಾನಾ ಟ್ವೀಟ್‌ಗಳನ್ನು ಮಾಡಿದ್ದಳು. ಆದರೂ, ಅಂತಿಮವಾಗಿ ಟೀಂ ಇಂಡಿಯಾ ಗೆಲುವು ಸಾಧಿಸಿತು. ನಂತರ ಇತ್ತೀಚೆಗಿನ ಆಕೆಯ ಟ್ವೀಟ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಪಾಕಿಸ್ತಾನ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನು ಓದಿ: T20 World Cup: ಇಫ್ತಿಕಾರ್, ಶಾದಾಬ್ ಅರ್ಧಶತಕ, ದಕ್ಷಿಣ ಆಫ್ರಿಕಾಕ್ಕೆ 186 ರನ್ ಟಾರ್ಗೆಟ್
I'll marry a Zimbabwean guy, if their team miraculously beats India in next match 🙂
— Sehar Shinwari (@SeharShinwari)ಜಿಂಬಾಬ್ವೆ ತಂಡ ಆಶ್ಚರ್ಯಕರವಾದ ರೀತಿಯಲ್ಲಿ ಅವರ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದರೆ ನಾನು ಜಿಂಬಾಬ್ವೆ ವ್ಯಕ್ತಿಯನ್ನು ಮದುವೆಯಾಗ್ತೀನಿ ಎಂದು ಟ್ವೀಟ್ ಮಾಡಿದ್ದಾರೆ. ಪಾಕ್ ನಟಿಯ ಈ ಟ್ವೀಟ್‌ಗೆ ಈವರೆಗೆ ಸುಮಾರು 1,900 ಜನರು ಲೈಕ್ ಮಾಡಿದ್ದು, ನೂರಾರು ಜನ ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ, ಪಾಕಿಸ್ತಾನಿ ನಟಿಯನ್ನು ಟ್ರೋಲ್ ಮಾಡುತ್ತಿರುವ ಕ್ರಿಕೆಟ್ ಪ್ರೇಮಿಗಳು, ಆಕೆಯ ಈ ಹಿಂದಿನ ಭವಿಷ್ಯವಾಣಿಯನ್ನು ಮರು ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಆಕೆ ಊಹಿಸಿದ್ದೆಲ್ಲ ತಪ್ಪಾಗುತ್ತಿದೆ ಎಂದು ಹಲವರು ಟ್ವೀಟ್ ಮಾಡುತ್ತಿದ್ದಾರೆ.
ಹಾಗೂ, ನೀನು ಜೀವನದುದ್ದಕ್ಕೂ ಒಂಟಿಯಾಗಿ ಹೇಗಿರುತ್ತೀಯಾ ಎಂದೂ ಒಬ್ಬರು ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಹಾಗೂ, ಭಾರತ ಬಾಂಗ್ಲಾದೇಶನ್ನು ಸೋಲಿಸಿದ ಬಳಿಕನೀನು ಟ್ವಿಟ್ಟರ್ ಖಾತೆಯನ್ನೇ ಡಿಲೀಟ್ ಮಾಡಬೇಕಿತ್ತು ಎಂದೂ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: T20 World Cup ಬಾಂಗ್ಲಾ ಎದುರು ರೋಚಕ ಜಯ, ಸೆಮೀಸ್‌ಗೆ ಟೀಂ ಇಂಡಿಯಾ ಸನಿಹ..!
ಇನ್ನು, ತನ್ನ ಟ್ವೀಟ್‌ಗಳಿಗಾಗಿ ಆಕೆ ಸುದ್ದಿಯಲ್ಲಿರುವುದು ಇದೇ ಮೊದಲನೇ ಬಾರಿಯೇನಲ್ಲ ಬಿಡಿ. ಭಾರತ - ಆಸ್ಟ್ರೇಲಿಯ ನಡುವಿನ ಸರಣಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯ ವಿರುದ್ಧ 4 ವಿಕೆಟ್‌ಗಳ ಅಂತರದ ಸೋಲಿನ ನಂತರ ಆಕೆ ಟೀಂ ಇಂಡಿಯಾವನ್ನು ಟೀಕಿಸಿದ್ದರು.
ಅಲ್ಲದೆ, ಜಿಂಬಾಬ್ವೆ ತಂಡ ಪಾಕಿಸ್ತಾನವನ್ನು 1 ರನ್‌ನಿಂದ ಸೋಲಿಸಿದ ಒಂದು ವಾರದ ಬಳಿಕ ಪಾಕ್ ನಟಿ ಈ ಟ್ವೀಟ್ ಮಾಡಿದ್ದಾರೆ. ಟಿ20 ವಿಶ್ವ ಕಪ್‌ನಿಂದ ಪಾಕ್ ಹೊರಹೋಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆ ಆಕೆಯ ಟ್ವೀಟ್ ಮಹತ್ವ ಪಡೆದುಕೊಂಡಿದೆ. ಕಳೆದ ನಿಮಿಷದವರೆಗೂ ಆ ಪಂದ್ಯ ಕುತೂಹಲ ಮೂಡಿಸಿತ್ತು. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 130 ರನ್ ಗಳಿಸಿದ್ದರೆ, ಪಾಕ್ 129 ರನ್ ಗಳಿಸಲಷ್ಟೇ ಶಕ್ತವಾಗಿ 1 ರನ್ ಅಂತರದಿಂದ ಸೋತಿತ್ತು.