T - 20 ವಿಶ್ವಕಪ್ ಸೋಲಿನ ಬಳಿಕ ನಾಯಕ ಬದಲು; ಹಲವರ ನಿವೃತ್ತಿ ಸಾಧ್ಯತೆ: ಸುನೀಲ್ ಗವಾಸ್ಕರ್‌

By BK AshwinFirst Published Nov 10, 2022, 11:38 PM IST
Highlights

ಭಾರತ 10 ವಿಕೆಟ್‌ಗಳ ಅವಮಾನಕರ ಸೋಲಿನ ನಂತರ ಕೆಲವು ಹಿರಿಯ ಆಟಗಾರರು ನಿವೃತ್ತಿ ಘೋಷಿಸಬಹುದು ಎಂದು ಭಾರತೀಯ ಕ್ರಿಕೆಟ್‌ನ ದಂತಕಥೆ ಸುನಿಲ್ ಗವಾಸ್ಕರ್ ನಿರೀಕ್ಷಿಸಿದ್ದಾರೆ. ಅಲ್ಲದೆ, ನಾಯಕ ಸ್ಥಾನದಲ್ಲೂ ಬದಲಾವಣೆಯಾಗಬಹುದು ಎಂದಿದ್ದಾರೆ. 

ಆಸ್ಟ್ರೇಲಿಯಾದ (Australia) ಆಡಿಲೇಡ್‌ನಲ್ಲಿ (Adelaide) ಇಂದು ನಡೆದ ಟಿ20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾ (India) ಇಂಗ್ಲೆಂಡ್‌ (England) ವಿರುದ್ಧ ಹೀನಾಯ ಸೋಲನುಭವಿಸಿದೆ. ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಅವಮಾನಕರ ಸೋಲಿನ ನಂತರ ಕೆಲವು ಹಿರಿಯ ಆಟಗಾರರು ನಿವೃತ್ತಿ ಘೋಷಿಸಬಹುದು ಎಂದು ಭಾರತೀಯ ಕ್ರಿಕೆಟ್‌ನ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ನಿರೀಕ್ಷಿಸಿದ್ದಾರೆ. ಅಲ್ಲದೆ, ನಾಯಕ ಸ್ಥಾನದಲ್ಲೂ ಬದಲಾವಣೆ ನಿರೀಕ್ಷಿಸಿರುವ ಸುನೀಲ್ ಗವಾಸ್ಕರ್‌ ಈ ಆಟಗಾರ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಾಯಕನಾಗಿ ಮೊದಲ ಬಾರಿಗೆ ಅಸೈನ್‌ಮೆಂಟ್‌ ವಹಿಸಿಕೊಂಡು ಟೂರ್ನಿಯನ್ನು ಗೆದ್ದ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಮುಂದಿನ ನಾಯಕನಾಗಿ ಗುರುತಿಸಬಹುದು ಎಂದು ಭಾರತದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.  "ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ತಂಡದ ನೇತೃತ್ವ ವಹಿಸಿಕೊಳ್ಳುತ್ತಾರೆ ಮತ್ತು ಕೆಲವು ನಿವೃತ್ತಿಗಳು ಇರುತ್ತವೆ, ಇದು ನಿಮಗೆ ಗೊತ್ತಿಲ್ಲದಿರಬಹುದು. ಆಟಗಾರರು ಅದರ ಬಗ್ಗೆ ಸಾಕಷ್ಟು ಯೋಚಿಸುತ್ತಾರೆ ಎಂದು ಸುನೀಲ್‌ ಗವಾಸ್ಕರ್ ಹೇಳಿದ್ದಾರೆ.

ಇದನ್ನು ಓದಿ: T20 World cup ಹೀನಾಯ ಸೋಲಿಗೆ ತಲೆದಂಡ, ಕೋಚ್ ದ್ರಾವಿಡ್ ಅಮಾನತಿಗೆ ಹೆಚ್ಚಿದ ಒತ್ತಡ!

"30ರ ವಯಸ್ಸಿನ ನಡುವೆ ಹಲವಾರು ಆಟಗಾರರಿದ್ದು, ಇವರು ಭಾರತೀಯ T20I ತಂಡದಲ್ಲಿ ತಮ್ಮ ಸ್ಥಾನವನ್ನು ಮರುಪರಿಶೀಲಿಸುತ್ತಿದ್ದಾರೆ’’ ಎಂದು ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾದ ಸೋಲಿನ ನಂತರ ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ. 

ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಈ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ ಸ್ಕೋರರ್ ಆಗಿದ್ದರೆ, 30 ರ ದಶಕದ ವಯಸ್ಸಿನ ಆಸುಪಾಸಿನಲ್ಲಿರುವ ನಾಯಕ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಇತರ ಹಿರಿಯ ಆಟಗಾರರಿಗೆ ಇದು ನಿರಾಶಾದಾಯಕ ಸರಣಿಯಾಗಿದೆ. 

ಇದನ್ನೂ ಓದಿ: ಸೋಲಿನ ಆಘಾತಕ್ಕೆ ಕಣ್ಣೀರಿಟ್ಟ ನಾಯಕ ರೋಹಿತ್, ಸಮಾಧಾನ ಪಡಿಸಿದ ದ್ರಾವಿಡ್!

ಈ ಮಧ್ಯೆ, ಕೋಚ್‌ ರಾಹುಲ್ ದ್ರಾವಿಡ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.  ದ್ರಾವಿಡ್ ಔಟ್ ಎಂದು ಟ್ವಿಟ್ಟರ್‌ನಲ್ಲಿ ಭಾರಿ ಟ್ರೆಂಡ್ ಆಗಿದೆ. ಈ ಸೋಲಿಗೆ ಕೋಚ್ ರಾಹುಲ್ ದ್ರಾವಿಡ್ ಹೊಣೆಯಾಗಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಯಾವ ಪಂದ್ಯದಲ್ಲೂ ಅತ್ಯುತ್ತಮ ಗೆಲುವು ಸಾಧಿಸಿಲ್ಲ. ಎಲ್ಲವೂ ಪ್ರಯಾಸದ ಗೆಲುವಾಗಿತ್ತು. ಉತ್ತಮ ತಂಡ ಆಯ್ಕೆ ಮಾಡುವಲ್ಲಿ ಕೋಚ್ ವಿಫಲರಾಗಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್ ಅವರನ್ನು ವಜಾ ಮಾಡಿ ಎಂಬ ಅಭಿಯಾನ ಶುರುವಾಗಿದೆ.

ಇದರ ಜತೆಗೆ, ರೋಹಿತ್ ಶರ್ಮಾ ನಾಯಕತ್ವದಿಂದ ಕಿತ್ತೆಸೆಯಿರಿ, ಹಿರಿಯ ಆಟಗಾರರನ್ನು ಏಕದಿನ ಅಥವಾ ಟೆಸ್ಟ್ ಪಂದ್ಯಕ್ಕೆ ಸೀಮಿತಗೊಳಿಸಿ, ಯುವ ಆಟಗಾರರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಈ ಸಲಹೆಯಲ್ಲಿ ರಾಹುಲ್‌ ದ್ರಾವಿಡ್‌ರನ್ನು ಕೋಚ್ ಸ್ಥಾನದಿಂದ ವಜಾ ಮಾಡಿ ಎಂದೂ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಚೋಕರ್ಸ್ ಪಟ್ಟ, ಮಿಸ್ ಯು ಧೋನಿ ಎಂದ ಭಾರತ!

click me!