ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಆಟಗಾರರು ಟ್ರೋಲಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ಹಾಗೂ ಅಭಿಮಾನಿಗಳನ್ನು ಟ್ರೋಲ್ ಮಾಡಿದ್ದಾರೆ. ಇದರ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರಿಫ್ ಇದೀಗ ಟೀಂ ಇಂಡಿಯಾ ಅಣಕಿಸಿದ್ದಾರೆ.
ಆಡಿಲೇಡ್(ನ.10): ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡು ಭಾರತ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಟ್ರೋಲ್ ಆಗಿದೆ. ಆಟಗಾರರು, ಕೋಚ್ ಟ್ರೋಲಿಗೆ ಗುರಿಯಾಗಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ಕಿತ್ತೆಯೆಸಲು ಆಗ್ರಹ ಕೇಳಿಬರುತ್ತಿದೆ. ಪಾಕಿಸ್ತಾನ ಟ್ರೋಲಿಗರು ಕೂಡ ಭಾರತವನ್ನು ಹಿಗ್ಗಾ ಮುಗ್ಗ ಟ್ರೋಲ್ ಮಾಡಿ ಬಿಸಾಕಿದ್ದಾರೆ. ಟೀಂ ಇಂಡಿಯಾ ಕಳಪೆ ಪ್ರದರ್ಶನ ಸ್ವತಃ ಭಾರತದ ಅಭಿಮಾನಿಗಳ ಆಕ್ರೋಶವನ್ನು ಹೆಚ್ಚಿಸಿದೆ. ಮೊದಲೇ ಸಂಕಷ್ಟದಲ್ಲಿರುವ ಟೀಂ ಇಂಡಿಯಾವನ್ನು ಇದೀಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರಿಫ್ ಅಣಕಿಸಿದ್ದಾರೆ. ಟ್ವೀಟ್ ಮೂಲಕ ಷರಿಫ್ ಟೀಂ ಇಂಡಿಯಾದ ಗಾಯದ ಮೇಲೆ ಬರೆ ಎಳೆದಿದ್ದಾರೆ.
ಪ್ರಧಾನಿ ಶೆಹಬಾಜ್ ಷರಿಫ್ ಟ್ವೀಟ್ ಮೂಲಕ ಈ ಭಾನುವಾರ 152/0 vs 170/0 ಎಂದು ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಈ ಮಾರ್ಮಿಕ ಟ್ವೀಟ್ ಹಿಂದಿನ ವ್ಯಂಗ್ಯ ಹಾಗೂ ಅಣಕಿಸಿದ ರೀತಿ ಅರ್ಥವಾಗಿದೆ. ಶಹೂಾದ್ ಷರೀಫ್ ಟ್ವೀಟ್‌ನ ಅರ್ಥ ಹೀಗಿದೆ. 152/0 ಎಂದರೆ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ 152ರನ್ ಚೇಸ್ ಮಾಡಿ ಸೋಲಿಸಿತ್ತು. ಇನ್ನು 170/0 ಎಂದರೆ ಇಂದು ಭಾರತ ತಂಡವನ್ನು ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 170 ರನ್ ಚೇಸ್ ಮಾಡಿ ಸೋಲಿಸಿದೆ. ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿದ ಎರಡು ತಂಡ ಅಂದರೆ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಈ ಭಾನುವಾರ ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದೆ ಎಂದು ಟೀಂ ಇಂಡಿಯಾವನ್ನು ಅಣಕಿಸಿ ಟ್ವೀಟ್ ಮಾಡಿದ್ದಾರೆ.
undefined
So, this Sunday, it’s:
152/0 vs 170/0
🇵🇰 🇬🇧
T20 WORLD CUP ಹೀನಾಯ ಸೋಲಿಗೆ ತಲೆದಂಡ, ಕೋಚ್ ದ್ರಾವಿಡ್ ಅಮಾನತಿಗೆ ಹೆಚ್ಚಿದ ಒತ್ತಡ!
ಶೆಹಬಾಜ್ ಷರೀಫ್ ಟ್ರೋಲ್‌ಗೆ ಭಾರತೀಯ ಅಭಿಮಾನಿಗಳು ಖಡಕ್ ತಿರುಗೇಟು ನೀಡಿದ್ದಾರೆ. 152/0 vs 170/0 ನಿಮ್ಮ ಈ ಎರಡು ಗೆಲುವುಗಿಂತ 93,000/0 ದಾಖಲೆ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ. 93,000/0 ಅಂಕಿ ಸಂಖ್ಯೆ ಹಿಂದೆ ಅತೀ ದೊಡ್ಡ ಇತಿಹಾಸವಿದೆ. ಇದು 1971ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಯುದ್ಧಕ್ಕೆ ಸಂಬಂಧ ಪಟ್ಟಿದೆ. ಬಾಂಗ್ಲಾದೇಶ ವಿಮುಕ್ತಿಗಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ದ ಯುದ್ಧ ಮಾಡಿತ್ತು. ಭಾರತೀಯ ಸೇನೆ ಆಕ್ರಮಣಕ್ಕೆ ಪಾಕ್ ಬಳಿ ಉತ್ತರವೇ ಇರಲಿಲ್ಲ. ಆರಂಭಿಕ ದಿನದಲ್ಲಿ ಗೆಲುವು ನಮ್ಮದೆ ಎಂದು ಬೀಗಿದ ಪಾಕಿಸ್ತಾನ ಬಳಿಕ ಸೋಲೊಪ್ಪಿಕೊಂಡಿತು. 93,000 ಸೈನಿಕರ ಜೊತೆ ಭಾರತೀಯ ಸೇನೆ ಮುಂದೆ ಮಂಡಿಯೂರಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದೀಗ 93,000/0 ಸಂಖ್ಯೆ 152/0 vs 170/0 ರೆಕಾರ್ಡ್‌ಗಿಂತ ಉತ್ತಮವಾಗಿದೆ ಎಂದು ತಿರುಗೇಟು ನೀಡಲಾಗಿದೆ.
Still your 93,000/0 record is better pic.twitter.com/OE4AEG1Kjv
— DShashwaTx (@LamerGappu)
ಸೋಲಿನ ಆಘಾತಕ್ಕೆ ಕಣ್ಣೀರಿಟ್ಟ ನಾಯಕ ರೋಹಿತ್, ಸಮಾಧಾನ ಪಡಿಸಿದ ದ್ರಾವಿಡ್!
ಪಾಕಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾವನ್ನು ಟ್ರೋಲ್ ಮಾಡಿದ್ದಾರೆ. ಗಾಯಗೊಂಡ ಸಿಂಹಕ್ಕೆ ಪ್ರಬಲ ಎದುರಾಳಿ ಇರಬೇಕು. ಇದಕ್ಕೆ ಟೀಂ ಇಂಡಿಯಾ ಲಾಯಕ್ಕಿಲ್ಲ ಎಂದು ಹಲವು ಪಾಕಿಸ್ತಾನ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು, ಭಾರತ ಮತ್ತೆ ಟೂರ್ನಿಯಿಂದ ಹೊರಬಿದ್ದಿದೆ. ಇದು ಕೇಳುವುದಕ್ಕೆ ಆನಂದ ಎಂದಿದ್ದಾರೆ.