Breaking: ವಿಶ್ವಕಪ್‌ ಆಘಾತದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್‌ಗೆ ಇನ್ನೊಂದು ಆಘಾತ!

By Santosh Naik  |  First Published Nov 10, 2023, 8:40 PM IST

ವಿಶ್ವಕಪ್‌ನಲ್ಲಿ ಆಘಾತಕಾರಿ ನಿರ್ವಹನೆ ತೋರಿದ್ದ ಬೆನ್ನಲ್ಲಿಯೇ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ಶುಕ್ರವಾರ ಅಮಾನತು ಮಾಡಿದೆ.
 


ದುಬೈ (ನ.10): ವಿಶ್ವಕಪ್‌ನಲ್ಲಿ ಹೀನಾಯ ನಿರ್ವಹಣೆಯ ಬೆನ್ನಲ್ಲಿಯೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಮತ್ತೊಂದು ಆಘಾತ ಎದುರಾಗಿದೆ. ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿದೆ. ದೇಶದ ಕ್ರಿಕೆಟ್‌ ಆಡಳಿತದಲ್ಲಿ ಅಲ್ಲಿನ ಸರ್ಕಾರದ ಅತೀವ ಹಸ್ತಕ್ಷೇಪ ಇರುವ ಕಾರಣ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದೆ. . ಶ್ರೀಲಂಕಾ ಕ್ರಿಕೆಟ್ (SLC) ಅನ್ನು ತಕ್ಷಣವೇ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ. ಎಸ್‌ಎಲ್‌ಸಿ ಆಡಳಿತದಲ್ಲಿ ವ್ಯಾಪಕವಾದ ಸರ್ಕಾರದ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ದೇಶದ ಕ್ರಿಕೆಟ್ ಮಂಡಳಿಯನ್ನು ವಿಸರ್ಜಿಸಲಾಗಿದೆ.

"ಐಸಿಸಿ ಮಂಡಳಿಯು ಇಂದು ಸಭೆ ನಡೆಸಿತು ಮತ್ತು ಶ್ರೀಲಂಕಾ ಕ್ರಿಕೆಟ್ ಸದಸ್ಯರಾಗಿ ಅದರ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿದೆ. ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಮತ್ತು/ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ' ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ." ಎಂದು ಮಾಹಿತಿ ನೀಡಿದೆ.

Latest Videos

undefined

22.5 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ 2,24,811 ಕೋಟಿ ಮೌಲ್ಯದ ಕಂಪನಿಯ ಭಾರತದ ಮುಖ್ಯಸ್ಥೆ

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ ತನ್ನ ಕೊನೆಯ ಲೀಗ್‌ ಪಂದ್ಯ ಆಡಿದ ಒಂದು ದಿನದ ಬಳಿಕ ಐಸಿಸಿ ಈ ನಿರ್ಧಾರ ಮಾಡಿದೆ. 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ಆಡಿದ 9 ಪಂದ್ಯಗಳ ಪೈಕಿ 2 ರಲ್ಲಿ ಮಾತ್ರವೇ ಗೆಲುವು ಕಂಡಿತ್ತು.

ಶಕೀಬ್ ಲಂಕಾಕ್ಕೆ ಬಂದ್ರೆ ಕಲ್ಲೇಟು: ಬಾಂಗ್ಲಾ ನಾಯಕನಿಗೆ ಮ್ಯಾಥ್ಯೂಸ್ ಬ್ರದರ್ ಖಡಕ್ ವಾರ್ನಿಂಗ್

ಐಸಿಸಿ ಮಂಡಳಿಯ ಮುಂದಿನ ಸಭೆ ನವೆಂಬರ್‌ 21ಕ್ಕೆ ನಡೆಯಲಿದೆ. ಈ ವೇಳೆ, ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಆಗಲಿರುವ ಕ್ರಮವೇನು ಅನ್ನೋದು ನಿರ್ಧಾರವಾಗಲಿದೆ.ಶ್ರೀಲಂಕಾವು ಜನವರಿ ಮತ್ತು ಫೆಬ್ರವರಿಯಲ್ಲಿ ICC ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸಲು ನಿರ್ಧಾರ ಮಾಡಿದೆ. ಈ ಟೂರ್ನಿಯ ಬಗ್ಗೆ ಐಸಿಸಿ ನಿರ್ಧಾರ ಮಾಡಲಿದೆ.

click me!