ಎಂಎಸ್ ಧೋನಿ, ಸಾಕ್ಷಿ ಧೋನಿ ಮತ್ತು ಝಿವಾ ಧೋನಿ ವಿಮಾನದಲ್ಲಿ ಬೆಂಗಳೂರಿನ ಕುಟುಂಬವೊಂದನ್ನು ಭೇಟಿಯಾದರು. ಈ ವೇಳೆ ಬಾಲಕಿಯ 4ನೇ ವರ್ಷದ ಜನ್ಮದಿನವನ್ನು ಇನ್ನಷ್ಟು ಸ್ಪೆಷಲ್ ಮಾಡಿದ್ದಾರೆ.
ಬೆಂಗಳೂರು (ನ.7): ಇತ್ತೀಚೆಗೆ ಎಂಎಸ್ ಧೋನಿ, ಸಾಕ್ಷಿ ಧೋನಿ ಹಾಗೂ ಅವರ ಪುತ್ರ ಜೀವಾ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಹೃದಯಸ್ಪರ್ಶಿ ಘಟನೆ ನಡೆದಿದೆ. ಈ ವೇಳೆ ಟೀಮ್ ಇಂಡಿಯಾ ಮಾಜಿ ನಾಯಕನ ಫ್ಯಾಮಿಲಿ ವಿಮಾನದಲ್ಲಿ ಬೆಂಗಳೂರು ಮೂಲದ ಕುಟುಂಬವೊಂದನ್ನು ಭೇಟಿ ಮಾಡಿದ್ದಾರೆ. ನಾಲ್ಕು ವರ್ಷದ ಬಾಲಕಿಯ ತಾಯಿ ನೇತ್ರಾ ಗೌಡ ಈ ಸಂಭ್ರಮವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಐಕಾನ್‌ಅನ್ನು ಮೀಟ್ ಆಗಿದ್ದು ತಮ್ಮ ಸಂಭ್ರಮವಾಗಿದ್ದರೆ, ಅವರ ಪತಿಗೆ ಇದು ಕನಸು ನನಸಾದಂಥ ಅನುಭವ ಎಂದು ವರ್ಣಿಸಿದ್ದಾರೆ. ಅದಲ್ಲದೆ, ನನ್ನ ಮಗಳ ನಾಲ್ಕನೇ ವರ್ಷದ ಜನ್ಮದಿನಕ್ಕೆ ಇದೇ ದೊಡ್ಡ ಹಾಗೂ ಬೆಸ್ಟ್ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಸಾಕ್ಷಿ ಸಿಂಗ್ ಧೋನಿ, ಬೆಂಗಳೂರು ಮೂಲದ ಕುಟುಂಬದೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಇನ್ನು ಜೀವಾ ಹಾಗೂ ಎಂಎಸ್ ಧೋನಿ ನಗುತ್ತಲೇ ಅವರನ್ನು ಮಾತನಾಡಿಸಿದ್ದಯ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು. ಈ ವೀಡಿಯೊ ವೈರಲ್ ಆಗುತ್ತಿದ್ದು, ಧೋನಿ ಕುಟುಂಬದ ಸರಳತೆಯನ್ನು ಜನರು ಮೆಚ್ಚಿದ್ದಾರೆ.
undefined
ನೇತ್ರಾ ಗೌಡ (@iamnethra_gowdaa) ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಲ್ಲಿನ ಸಂವಾದದ ಬಗ್ಗೆ ಮಾತನಾಡಿದ್ದಾರೆ. 'ಯೆಸ್ ನಾವು ಎಂಎಸ್ ಧೋನಿ ಸರ್ ಅವರನ್ನು ಮೀಟ್ ಆದೆವು. ಅದೃಷ್ಟಕ್ಕೆ ಅದು ವಿಮಾನದಲ್ಲಿ ಪ್ರಯಾಣ ಮಾಡುವಾಗ ಆಯಿತು. ನನ್ನ ಪತಿಗೆ ಇದು ಕನಸು ನನಸಾದಂಥ ಅನುಭವ. ಅದರೊಂದಿಗೆ ನಾವು ನಮ್ಮ ಮಗಳ ನಾಲ್ಕನೇ ವರ್ಷದ ಜನ್ಮದಿನಕ್ಕೆ ಬೆಸ್ಟ್ ಗಿಫ್ಟ್ ಪಡೆದುಕೊಂಡಿದ್ದೇವೆ' ಎಂದು ಬರೆದಿದ್ದಾರೆ.
ಅದೇ ಪೋಸ್ಟ್‌ನಲ್ಲಿ ಸಾಕ್ಷಿ ಧೋನಿ ಅವರು ಎಷ್ಟು ಸರಳ ಸ್ವಭಾವದವರು ಎನ್ನುವುದನ್ನೂ ತಿಳಿಸಿದ್ದಾರೆ. ಎಷ್ಟೋ ವರ್ಷಗಳಿಂದ ಪರಿಚಿತರೇನೋ ಎನ್ನುವಷ್ಟು ಆತ್ಮೀಯವಾಗಿ ಸಾಕ್ಷಿ ಧೋನಿ ಮಾತನಾಡಿದ್ದರಿಂದ ನನ್ನ ಅನುಭವ ಇನ್ನಷ್ಟು ಸ್ಪೆಷಲ್ ಆಗಿತ್ತು ಎಂದಿದ್ದಾರೆ. 'ಎಂಎಸ್ ಧೋನಿ ಮಾಸ್ಕ್ ಧರಿಸಿದ್ದರಿಂದ ನನ್ನ ಮಗಳು ಅವರ ಬಳಿ ಹೋಗಲು ಕೂರಲು ಸ್ವಲ್ಪ ಭಯಪಡುತ್ತಿದ್ದಳು. ಈ ಹಂತದಲ್ಲಿ ಮಾತನಾಡಿದ ಸಾಕ್ಷಿ. ಅವರು ತುಂಬಾ ಹೆದರಿಸ್ತಾರೆ. ನನಗೂ ಕೂಡ ಹೆದರಿಸುತ್ತಲೇ ಇರ್ತಾರೆ ಎಂದು ಹೇಳಿದ್ದಾಗಿ ನೇತ್ರಾ ಗೌಡ ಬರೆದುಕೊಂಡಿದ್ದಾರೆ.
Udupi: 2 ಸಾವಿರ ವರ್ಷಗಳಷ್ಟು ಹಿಂದಿನ ಆರು ಫೀಟ್ ಎತ್ತರದ ಗಡಿಕಲ್ಲು ಪತ್ತೆ!
ಇನ್ಸ್‌ಟಾಗ್ರಾಮ್ ಯೂಸರ್‌ಗಳ ಈ ವಿಡಿಯೋವನ್ನು ಮೆಚ್ಚಿದ್ದು, ಧೋನಿ ಕುಟುಂಬದ ಸರಳತೆಯ ಬಗ್ಗೆ ಹಾಗೂ ಬಾಲಕಿಯ ಜೀವನದ ಸ್ಪೆಷಲ್ ಕ್ಷಣದ ಬಗ್ಗೆ ಸಂಭ್ರಮಿಸಿದ್ದಾರೆ. ಈ ವೈರಲ್ ವೀಡಿಯೊವನ್ನು ಸೋಮವಾರ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ ಇದು 10.1 ಮಿಲಿಯನ್ ವೀವ್ಸ್‌ಗಳನ್ನು ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಒರಿಜಿನಲ್ ಚಾಯ್ಸ್ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್!