2023ರ ಐಸಿಸಿ ಏಕದಿನ ವಿಶ್ವಕಪ್‌ ಲೋಗೋ ಅನಾವರಣ, ಲೋಗೋದಲ್ಲಿದೆ ನವರಸದ ಮ್ಯಾಜಿಕ್‌..!

Published : Apr 03, 2023, 10:56 AM ISTUpdated : Apr 03, 2023, 11:00 AM IST
2023ರ ಐಸಿಸಿ ಏಕದಿನ ವಿಶ್ವಕಪ್‌ ಲೋಗೋ ಅನಾವರಣ, ಲೋಗೋದಲ್ಲಿದೆ ನವರಸದ ಮ್ಯಾಜಿಕ್‌..!

ಸಾರಾಂಶ

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ಇದೇ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ರ ವಿಶ್ವಕಪ್‌ನ ಅಧಿಕೃತ ಚಿಹ್ನೆ ಅನಾವರಣಗೊಳಿದ ಐಸಿಸಿ

ದುಬೈ(ಏ.03): ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯ ಲೋಗೋವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಭಾನುವಾರ ಬಿಡುಗಡೆಗೊಳಿಸಿತು. 2011ರ ಏಕದಿನ ವಿಶ್ವಕಪ್‌ ಫೈನಲ್‌ ನಡೆದಿದ್ದ ದಿನವೇ(ಏ.2), 2023ರ ವಿಶ್ವಕಪ್‌ನ ಅಧಿಕೃತ ಚಿಹ್ನೆ ಅನಾವರಣಗೊಳಿಸಲಾಗಿದೆ. 

ಈ ಲೋಗೋ ‘ನವರಸ’ದಿಂದ ಕೂಡಿದ್ದು, ಅಭಿಮಾನಿಗಳು ವಿಶ್ವಕಪ್‌ ಪಂದ್ಯಗಳ ವೇಳೆ ಎಲ್ಲಾ 9 ರೀತಿಯ ಭಾವನೆಗಳನ್ನು ಅನುಭವಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 10 ತಂಡಗಳ ಟೂರ್ನಿಗೆ ಈಗಾಗಲೇ 7 ತಂಡಗಳು ಅರ್ಹತೆ ಪಡೆದಿದ್ದು, ಸೂಪರ್‌ ಲೀಗ್‌ ಮುಕ್ತಾಯದ ಬಳಿಕ ಇನ್ನೊಂದು ತಂಡಕ್ಕೆ ನೇರ ಅರ್ಹತೆ ಸಿಗಲಿದೆ. ಬಾಕಿ 2 ಸ್ಥಾನಗಳಿಗೆ 10 ತಂಡಗಳನ್ನು ಒಳಗೊಂಡ ಅರ್ಹತಾ ಟೂರ್ನಿಯು ಜೂನ್‌-ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ.

ಮುಂಬರುವ ಅಕ್ಟೋಬರ್ ತಿಂಗಳಿನಿಂದ ನವೆಂಬರ್ ತಿಂಗಳಿನವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ನ್ಯೂಜಿಲೆಂಡ್, ಇಂಗ್ಲೆಂಡ್‌, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ನೇರ ಅರ್ಹತೆಗಿಟ್ಟಿಸಿಕೊಂಡಿವೆ.

ದಶಕದ ಬಳಿಕ ತವರಿನಲ್ಲಿ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಾ ಭಾರತ..?

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೊಫಿ ಜಯಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ, ಪದೇ ಪದೇ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಿದೆ. 2014ರಲ್ಲಿ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಇನ್ನು 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಇನ್ನು 2016ರಲ್ಲಿ ನಡೆದ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಟೀಂ ಇಂಡಿಯಾ, ವೆಸ್ಟ್ ಇಂಡೀಸ್‌ಗೆ ಶರಣಾಗಿತ್ತು. ಇದಾದ ಬಳಿಕ 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಆಘಾತಕಾರಿ ಸೋಲು ಅನುಭವಿಸಿತ್ತು. 

ಜನ ಕೇಳಿ​ದಾ​ಗ ಸಿಕ್ಸ್‌ ಹೊಡೀ​ತಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ..!

ಇದಾದ ನಂತರ ಟೀಂ ಇಂಡಿಯಾ, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ಕಿವೀಸ್ ಎದುರು ಸೋಲು ಅನುಭವಿಸಿತ್ತು. ಇನ್ನು 2021ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಸೋಲು ಅನುಭವಿಸುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇನ್ನು, ಕಳೆದ ವರ್ಷ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಟೀಂ ಇಂಡಿಯಾ ಸೆಮೀಸ್‌ನಲ್ಲೇ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ಬರೋಬ್ಬರಿ ಒಂದು ದಶಕದ ಬಳಿಕ ಟೀಂ ಇಂಡಿಯಾ, ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಜಯಿಸುವ ಮೂಲಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಜೂನ್‌ ತಿಂಗಳಿನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಅಲ್ಲಿಯೂ ಐಸಿಸಿ ಮೇಸ್ ಜಯಿಸುವ ಸಾಧ್ಯತೆಯಿದೆ.

ಟಿ20: ಕಿವೀಸ್‌ ವಿರು​ದ್ಧ ಲಂಕಾಕ್ಕೆ ‘ಸೂಪರ್‌’ ಜಯ!

ಆಕ್ಲೆಂಡ್‌: ನ್ಯೂಜಿ​ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯ​ದಲ್ಲಿ ಶ್ರೀಲಂಕಾ ಸೂಪರ್‌ ಓಪ​ನ್‌​ನಲ್ಲಿ ಗೆಲುವು ಸಾಧಿ​ಸಿದ್ದು, 3 ಪಂದ್ಯ​ಗಳ ಸರ​ಣಿ​ಯಲ್ಲಿ 1-0 ಮುನ್ನಡೆ ಪಡೆ​ದಿದೆ. ಮೊದಲು ಬ್ಯಾಟ್‌ ಮಾಡಿದ ಲಂಕಾ ಅಸ​ಲಂಕ​(67), ಕುಸಾಲ್‌ ಪೆರೆ​ರಾ​(​ಔ​ಟಾ​ಗದೆ 53) ಅಬ್ಬ​ರ​ದಿಂದಾಗಿ 5 ವಿಕೆ​ಟ್‌ಗೆ 196 ರನ್‌ ಕಲೆ​ಹಾ​ಕಿತು. ಬೃಹತ್‌ ಮೊತ್ತ ಬೆನ್ನ​ತ್ತಿದ ಕಿವೀಸ್‌ಗೆ ಗೆಲ್ಲಲು ಕೊನೆ ಎಸೆತದಲ್ಲಿ 7 ರನ್‌ ಬೇಕಿತ್ತು. ಇಶ್‌ ಸೋಧಿ ಸಿಕ್ಸರ್‌ ಸಿಡಿಸಿ ಪಂದ್ಯ ಟೈ ಆಗುವಂತೆ ಮಾಡಿದರು. ಕಿವೀಸ್‌ 8 ವಿಕೆಟ್‌ಗೆ 196 ರನ್‌ ಗಳಿಸಿತು. ಸೂಪರ್‌ ಓವ​ರ್‌​ನಲ್ಲಿ ಕಿವೀಸ್‌ 8 ರನ್‌ ಗಳಿ​ಸಿ 2 ವಿಕೆಟ್‌ ಕಳೆದುಕೊಂಡರೆ, ಲಂಕಾ ಮೂರೇ ಎಸೆ​ತ​ಗ​ಳಲ್ಲಿ ಗುರಿ ತಲು​ಪಿ​ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್ 19 ವಿಶ್ವಕಪ್ ಆಡಿ ಸೂಪರ್ ಸ್ಟಾರ್‌ಗಳಾದ ಟಾಪ್-7 ಆಟಗಾರರಿವರು!
ಆಟಗಾರರಿಂದ ಪಂದ್ಯ ಬಹಿಷ್ಕಾರ, ಟಾಸ್‌ಗೆ ಬಂದಿದ್ದು ಮ್ಯಾಚ್ ರೆಫರಿ ಮಾತ್ರ! ಬಾಂಗ್ಲಾ ಕ್ರಿಕೆಟ್‌ನಲ್ಲಿ ಇದೆಂಥಾ ಅವಸ್ಥೆ?