IPL 2023 ಆರ್‌ಸಿಬಿ ಘರ್ಜನೆಗೆ ಮುಂಬೈ ಸೈಲೆಂಟ್, ಮೊದಲ ಪಂದ್ಯದಲ್ಲಿ ಬೆಂಗಳೂರಿಗೆ 8 ವಿಕೆಟ್ ಗೆಲುವು!

Published : Apr 02, 2023, 11:09 PM ISTUpdated : Apr 02, 2023, 11:17 PM IST
IPL 2023 ಆರ್‌ಸಿಬಿ ಘರ್ಜನೆಗೆ ಮುಂಬೈ ಸೈಲೆಂಟ್, ಮೊದಲ ಪಂದ್ಯದಲ್ಲಿ ಬೆಂಗಳೂರಿಗೆ 8 ವಿಕೆಟ್ ಗೆಲುವು!

ಸಾರಾಂಶ

ಐಪಿಎಲ 2023 ಟೂರ್ನಿಯಲ್ಲಿ ಆರ್‌ಸಿಬಿ ತಂಡ ಭರ್ಜರಿ ಶುಭಾರಂಭ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬರೋಬ್ಬರಿ 8 ವಿಕೆಟ್ ಭರ್ಜರಿ ಗೆಲವು ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್‌ಗೆ ಮುಂಬೈ ಸೋಲಿಗೆ ಶರಣಾಗಿದೆ.  

ಚಿನ್ನಸ್ವಾಮಿ(ಏ.02) ಐಪಿಎಲ್ 2023 ಟೂರ್ನಿಯಲ್ಲಿ ಆರ್‌ಸಿಬಿ ಭರ್ಜರಿ ಗೆಲುವಿನ ಆರಂಭ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 10 ವಿಕೆಟ್ ಗೆಲವು ದಾಖಲಿಸಿದೆ. ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮುಂಬೈ ನೀಡಿದ್ದ 172 ರನ್ ಟಾರ್ಗೆಟ್ ಸುಲಭವಾಗಿ ಚೇಸ್ ಮಾಡಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಟ್ರೋಫಿ ರೇಸ್‌ನಲ್ಲಿ ಕಾಣಿಸಿಕೊಳ್ಳುವ ತಂಡ ಅನ್ನೋ ಸ್ಪಷ್ಟ ಸೂಚನೆ ನೀಡಿದೆ.

ಮುಂಬೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅಬ್ಬರದಿಂದ 171 ರನ್ ಸಿಡಿಸಿತು. ಈ ಗುರಿ ಪಡೆದ ಆರ್‌ಸಿಬಿ ಚೇಸಿಂಗ್ ಇಳಿಯಿತು. ಆದರೆ ಯಾವುದೇ ಹಂತದಲ್ಲಿ ಆತಂಕ ಎದುರಿಸಲಿಲ್ಲ. ವಿಶೇಷ ಅಂದರೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಐಪಿಎಲ್ ಟೂರ್ನಿಯಲ್ಲಿ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದರು. ಇದು ಆರ್‌ಸಿಬಿ ಪಾಲಿಗೆ ಅತ್ಯಂತ ಮುಖ್ಯ. ಇವರಿಬ್ಬರು ಇದೇ ರೀತಿ ಫಾರ್ಮ್ ಮುಂದುವರಿಸಿದರೆ, ಮುಂದಿನ ಪಂದ್ಯಗಳಲ್ಲೂ ಗೆಲುವು ಕಷ್ಟವಲ್ಲ. 

ಚುನಾವಣಾ ಕಸರತ್ತಿನ ನಡುವೆ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ!

ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ಮೊದಲ ಎಸೆತದಿಂದಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.ದಿಟ್ಟ ಹೋರಾಟ ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. ಆರ್‌ಸಿಬಿ ಟಾಪ್ ಆರ್ಡರ್ ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಮುಂಬೈ ಪ್ರಯತ್ನಿಸಿತು. ಆದರೆ ಯಾವುದೂ ಕೈಗೂಡಲಿಲ್ಲ.

IPL 2023 ಚಹಾಲ್ ಮೋಡಿಗೆ ಪರದಾಡಿದ ಸನ್‌ರೈಸರ್ಸ್, ರಾಜಸ್ಥಾನ ರಾಯಲ್ಸ್‌ಗೆ 72 ರನ್ ಭರ್ಜರಿ ಗೆಲುವು!

ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ತಲಾ ಅರ್ಧತಕ ಸಿಡಿಸಿ ಸಂಭ್ರಮಿಸಿದರು. ಇನ್ನೇನು ಆರ್‌ಸಿಬಿ ಗೆಲುವಿನ ದಡ ಸೇರುತ್ತಿದೆ ಅನ್ನುವಷ್ಟರಲ್ಲಿ ಫಾಫ್ ಡುಪ್ಲೆಸಿಸ್ 43 ಎಸೆತದಲ್ಲಿ 73 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ದಿನೇಶ್ ಕಾರ್ತಿಕ್ ವಿಕೆಟ್ ಕೂಡ ಪತನಗೊಂಡಿತು. ಗ್ಲೆನ್ ಮ್ಯಾಕ್ಸ್‍ವೆಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಕೊಹ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಿದರು. 16ನೇ ಓವರ್‌ನಲ್ಲಿ  ಒಂದು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ತಂಡಕ್ಕೆ 8 ವಿಕೆಟ್ ಗೆಲುವು ತಂದುಕೊಟ್ಟರು. 16.2 ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿನ ದಡ ಸೇರಿತು.

ಮೊದಲ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್ ಭರ್ಜರಿ ಗೆಲುವಿನ ಸಂಭ್ರಮ ಆಚರಿಸಿದೆ. ಇತ್ತ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕ್ರೀಡಾಂಗಣದೊಳಗೆ ಹಾಗೂ ಹೊರಭಾಗದಲ್ಲಿ ಸಂಭ್ರಮ ಜೋರಾಗಿತ್ತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ