ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ತಂಡಗಳಿಗೆ ಬೋನಸ್‌ ಅಂಕ?

2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಬೋನಸ್‌ ಅಂಕ ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸುತ್ತಿದೆ. ಇನ್ನಿಂಗ್ಸ್ ಗೆಲುವು, ದೊಡ್ಡ ಅಂತರದ ಗೆಲುವು, ಬಲಿಷ್ಠ ತಂಡಗಳ ವಿರುದ್ಧದ ಗೆಲುವಿಗೆ ಬೋನಸ್ ಅಂಕ ನೀಡುವ ಸಾಧ್ಯತೆ ಇದೆ.

ICC Pondering Over New Bonus Point System For 2025 to 27 WTC Cycle kvn

ನವದೆಹಲಿ: 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಬೋನಸ್‌ ಅಂಕಗಳನ್ನು ನೀಡುವ ಐಸಿಸಿ ಚಿಂತನೆ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಮಂಡಳಿ ಸಭೆ ನಡೆಯಲಿದ್ದು, ಇದರಲ್ಲಿ ಹೊಸ ನಿಯಮ ಜಾರಿ ಬಗ್ಗೆ ಚರ್ಚೆಯಾಗಲಿದೆ ಎಂದು ವರದಿಯಾಗಿದೆ.

ಸದ್ಯ ಒಂದು ಟೆಸ್ಟ್‌ನಲ್ಲಿ ಕಡಿಮೆ ಅಥವಾ ಬೃಹತ್‌ ಅಂತರದಲ್ಲಿ ಗೆದ್ದರೂ ಆ ತಂಡಕ್ಕೆ 12 ಅಂಕ ಸಿಗುತ್ತಿದೆ. ಟೈ ಆದರೆ 6, ಡ್ರಾ ಆದರೆ 4 ಅಂಕ ಲಭಿಸುತ್ತಿದೆ. ಆದರೆ ಇನ್ನು ಮುಂದೆ ಇನ್ನಿಂಗ್ಸ್‌ ಗೆಲುವು ಹಾಗೂ 100 ರನ್‌ಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದರೆ ಹೆಚ್ಚುವರಿ ಅಂಕ ನೀಡಲು ಐಸಿಸಿ ಮುಂದಾಗಿದೆ. ಜೊತೆಗೆ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಸೇರಿದಂತೆ ಕೆಲ ಬಲಿಷ್ಠ ತಂಡಗಳ ವಿರುದ್ಧ ಗೆಲ್ಲುವ ತಂಡಗಳಿಗೆ ಹಾಗೂ ತವರಿನಾಚೆ ಜಯಗಳಿಸುವ ತಂಡಗಳಿಗೂ ಬೋನಸ್‌ ಅಂಕ ನೀಡುವ ಬಗ್ಗೆ ಗಂಭೀರ ಚಿಂತೆ ನಡೆಸಿದೆ. ಇನ್ನು, ಸಭೆಯಲ್ಲಿ 2 ದರ್ಜೆಯಲ್ಲಿ ಟೆಸ್ಟ್‌ ಸರಣಿಗಳನ್ನು ಆಡಿಸುವ ಬಗ್ಗೆಯೂ ಐಸಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Latest Videos

ಇದನ್ನೂ ಓದಿ: ಈ ಸಲದ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಇದೇನಾ?

2025 ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಫೈಟ್:

ಇನ್ನು 2023-25ನೇ ಸಾಲಿನ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯವು ಮುಂಬರುವ ಜೂನ್ 11ರಿಂದ 15ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾ ತಂಡವು ಸತತ ಎರಡನೇ ಬಾರಿಗೆ ಟೆಸ್ಟ್ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದರೇ, ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಿರುವ ಹರಿಣಗಳ ಪಡೆ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.

ಇನ್ನು ಮೊದಲೆರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಪಾಲ್ಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಟೀಂ ಇಂಡಿಯಾ, ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಸೋಲುತ್ತಿದ್ದಂತೆಯೇ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು.

ಇದನ್ನೂ ಓದಿ: IPL 2025ಗೂ ಮುನ್ನ ರಾಜಸ್ಥಾನ ರಾಯಲ್ಸ್‌ಗೆ ಬಿತ್ತು ಬಲವಾದ ಪೆಟ್ಟು; ಸಂಜು ಸ್ಯಾಮ್ಸನ್ ಔಟ್, ಈತನೇ ಹೊಸ ಕ್ಯಾಪ್ಟನ್!

2026ರ ಅಕ್ಟೋಬರ್‌ ವರೆಗೂ ದಕ್ಷಿಣ ಆಫ್ರಿಕಾಕ್ಕೆ ತವರಲ್ಲಿ ಒಂದೂ ಟೆಸ್ಟ್‌ ಪಂದ್ಯ ಇಲ್ಲ!

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ 2025-26ರ ತವರಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ತಂಡಕ್ಕೆ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ಯಾವುದೇ ಟೆಸ್ಟ್‌ ಪಂದ್ಯ ನಿಗದಿಯಾಗಿಲ್ಲ. ತಂಡ ತವರಿನಲ್ಲಿ ಮತ್ತೊಂದು ಟೆಸ್ಟ್‌ ಆಡಲು 2026ರ ಅಕ್ಟೋಬರ್‌ ವರೆಗೂ ಕಾಯಬೇಕಿದೆ. 

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ, 2026ರ ಅಕ್ಟೋಬರ್‌ ವರೆಗೂ ತಂಡ ತವರಿನಾಚೆ ಕೇವಲ 4 ಟೆಸ್ಟ್‌ಗಳನ್ನು ಆಡಲಿದೆ. 1991ರಲ್ಲಿ ಅಂ.ರಾ. ಕ್ರಿಕೆಟ್‌ಗೆ ವಾಪಸಾದ ಬಳಿಕ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸುವುದಿಲ್ಲ.
 

vuukle one pixel image
click me!