
ದುಬೈ(ಅ.16): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಮತ್ತೊಂದು ಸುತ್ತಿನ ತಿಕ್ಕಾಟ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಬಿಸಿಸಿಐ ವಿರೋಧದ ನಡುವೆಯೂ ಮುಂಬರುವ ಭವಿಷ್ಯದ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ(ಎಫ್‌ಟಿಪಿ)ಯಲ್ಲಿ ವರ್ಷಕ್ಕೊಂದು ವಿಶ್ವಕಪ್ ಆಯೋಜಿಸಲು ಐಸಿಸಿ ಮುಂದಾಗುತ್ತಿದೆ. ಕಳೆದ ವಾರ ಇಲ್ಲಿ ನಡೆದ ಸಭೆಯಲ್ಲಿ 2023-2028ರ ಅವಧಿಯಲ್ಲಿ ವರ್ಷಕ್ಕೊಂದು ವಿಶ್ವಕಪ್ (ಪುರುಷ ಹಾಗೂ ಮಹಿಳಾ) ಆಯೋಜಿಸಲು ಐಸಿಸಿ ನಿರ್ಧರಿಸಿತು ಎಂದು ಪ್ರತಿಷ್ಠಿತ ಮಾಧ್ಯವಮೊಂದು ವರದಿ ಮಾಡಿದೆ. ಈ ಅವಧಿಯಲ್ಲಿ ಒಟ್ಟು ಎರಡು 50 ಓವರ್ ವಿಶ್ವಕಪ್, 4 ಟಿ20 ವಿಶ್ವಕಪ್ ಹಾಗೂ 2 ಹೊಸ ಟೂರ್ನಿಗಳನ್ನು ನಡೆಸಲು ಐಸಿಸಿ ಯೋಜನೆ ರೂಪಿಸಿದೆ. ಹೊಸ ಟೂರ್ನಿಯೂ 50 ಓವರ್ ಮಾದರಿಯ ಟೂರ್ನಿಯೇ ಆಗಿರಲಿದ್ದು, ಚಾಂಪಿಯನ್ಸ್ ಟ್ರೋಫಿ ರೀತಿಯಲ್ಲಿ 6 ತಂಡಗಳ ನಡುವೆ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೌಂಡರಿ ಕೌಂಟ್ ನಿಯಮಕ್ಕೆ ಫುಲ್ ಸ್ಟಾಪ್‌ಯಿಟ್ಟ ICC
ಬಿಸಿಸಿಐ ವಿರೋಧವೇಕೆ?: ಒಂದೊಮ್ಮೆ ಐಸಿಸಿ ವರ್ಷಕ್ಕೊಂದು ವಿಶ್ವಕಪ್ ನಡೆಸಿದರೆ ಬಿಸಿಸಿಐಗೆ ಪ್ರಸಾರ ಹಕ್ಕು ನಷ್ಟವಾಗಲಿದೆ. ಉದಾಹರಣೆಗೆ, ಸ್ಟಾರ್ ಸ್ಪೋಟ್ಸ್‌ರ್ ಇಲ್ಲವೇ ಸೋನಿ ವಾಹಿನಿ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕು (ಟೀವಿ, ರೇಡಿಯೋ, ಡಿಜಿಟಲ್) ಪಡೆಯಲು .100 ಬಂಡವಾಳ ಹೂಡಲು ಇಚ್ಛಿಸಿವೆ ಎಂದುಕೊಂಡರೆ, ಇಲ್ಲಿ ಐಸಿಸಿ ಹಾಗೂ ಬಿಸಿಸಿಐ ನಡುವೆ ಸ್ಪರ್ಧೆ ಏರ್ಪಡಲಿದೆ. ಬಿಸಿಸಿಐ ಜನಪ್ರಿಯ ಐಪಿಎಲ್ ಹಾಗೂ ಪ್ರಮುಖ ದಿಪಕ್ಷೀಯ ಸರಣಿಗಳನ್ನು ಹೊಂದಿದೆ. ಐಸಿಸಿ, ವರ್ಷಕ್ಕೊಂದು ವಿಶ್ವಕಪ್ (ಟಿ20 ಇಲ್ಲವೇ ಏಕದಿನ) ನಡೆಸಿದರೆ ಸಹಜವಾಗಿಯೇ ವಾಹಿನಿಗಳು ಐಸಿಸಿ ಟೂರ್ನಿಗಳ ಪ್ರಸಾರ ಹಕ್ಕು ಖರೀದಿಸಲು ಮುಂದಾಗುತ್ತವೆ. ವಿಶ್ವಕಪ್ ಪ್ರಸಾರಕ್ಕೆ .60 ಖರ್ಚು ಮಾಡಿದರೆ, ಬಿಸಿಸಿಐಗೆ ನೀಡಲು ಉಳಿಯುವುದು ಕೇವಲ .40. ಪ್ರಸಾರ ಹಕ್ಕು ಹಣದಲ್ಲಿ ಸಿಂಹಪಾಲು ಅನುಭವಿಸುತ್ತಿರುವ ಬಿಸಿಸಿಐಗೆ ಭಾರೀ ನಷ್ಟಉಂಟಾಗಲಿದೆ.
ಇದನ್ನೂ ಓದಿ: ಜಿಂಬಾಬ್ವೆ ಕ್ರಿಕೆಟ್ ತಂಡದ ಮೇಲಿನ ನಿಷೇಧ ತೆರವುಗೊಳಿಸಿದ ICC
ಬಿಸಿಸಿಐನಿಂದಲೇ ಐಸಿಸಿಗೆ ಹಣ: ಐಸಿಸಿಗೆ ಬರುವ ಜಾಹೀರಾತು, ಪ್ರಸಾರ ಹಕ್ಕು, ಪ್ರಯೋಜಕತ್ವ ಮೊತ್ತದ ಶೇ. ಶೇ 75-80ರಷ್ಟುಹಣ ಭಾರತದಿಂದಲೇ ಸಿಗಲಿದೆ. ಹೀಗಿರುವಾಗ ಸಹಜವಾಗಿಯೇ ಬಿಸಿಸಿಐ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದೆ. ವರ್ಷಕ್ಕೊಂದು ವಿಶ್ವಕಪ್ ಆಯೋಜಿಸುವ ಮೂಲಕ ಬಿಸಿಸಿಐಗೆ ಹರಿಯುವ ಹಣದ ಹೊಳೆಯನ್ನು ತಪ್ಪಿಸುವುದು ಐಸಿಸಿಯ ತಂತ್ರವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.