* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ಐಸಿಸಿ
* ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಟೂರ್ನಿ
* ವಿಶ್ವಕಪ್ ಪಾಲ್ಗೊಳ್ಳುವಿಕೆ ಬಗ್ಗೆ ಪಾಕ್ ನಿರ್ಧಾರ ತಿಳಿಯಲು ಮುಂದಾದ ಐಸಿಸಿ
ಕರಾಚಿ(ಜೂ.01): ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಹಾಗೂ ತನ್ನ ಪಂದ್ಯಗಳಿಗೆ ಹೈಬ್ರೀಡ್ ಮಾದರಿಗೆ ಒತ್ತಾಯಿಸುವುದಿಲ್ಲ ಎಂಬುದರ ಖಾತರಿ ಪಡೆದುಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಅಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಐಸಿಸಿ ಮುಖ್ಯಸ್ಥ ಗ್ರೆಗ್ ಬಾಕ್ಲೇರ್ ಹಾಗೂ ಸಿಇಒ ಜೆಫ್ ಆ್ಯಲರ್ರ್ಡೆಸ್ ಲಾಹೋರ್ಗೆ ತೆರಳಿ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧಿಕಾರಿಗಳ ಜೊತೆ ಚರ್ಚಿಸಿ, ವಿಶ್ವಕಪ್ನಲ್ಲಿ ಆಡುವ ಬಗ್ಗೆ ಭರವಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಏಷ್ಯಾಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ಕೂಡಾ ಭಾರತದಲ್ಲಿ ವಿಶ್ವಕಪ್ ಆಡುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಇತ್ತೀಚೆಗೆ ಎಚ್ಚರಿಸಿದ್ದರು. ಅಲ್ಲದೇ, ಏಕದಿನ ವಿಶ್ವಕಪ್ನ ತನ್ನ ಪಂದ್ಯಗಳನ್ನು ಭಾರತದ ಹೊರಗಡೆ ನಡೆಸಲು ಒತ್ತಾಯಿಸಿದ್ದಾಗಿ ವರದಿಯಾಗಿತ್ತು.
undefined
ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಸಿ: ಬಿಸಿಸಿಐ ಒತ್ತಾಯ
ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನ ಅಥವಾ ಹೈಬ್ರೀಡ್ ಮಾದರಿಯಲ್ಲಿ ನಡೆಸಲು ಒಪ್ಪದ ಬಿಸಿಸಿಐ, ಶ್ರೀಲಂಕಾದಲ್ಲಿ ಟೂರ್ನಿ ಆಯೋಜಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಗೆ ಮನವಿ ಮಾಡಿದ್ದು, ಇದನ್ನು ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳು ಬೆಂಬಲಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗಿಲ್-ರಿಂಕು: ಐಪಿಎಲ್-16ರಲ್ಲಿ ಉದಯಿಸಿದ 11 ನವತಾರೆಯರು!
ಮೂರೂ ಮಂಡಳಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಜೊತೆ ನಿಲ್ಲಲು ನಿರಾಕರಿಸಿದ್ದು, ಹೀಗಾಗಿ ಲಂಕಾದಲ್ಲೇ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚು. ಆರಂಭದಿಂದಲೂ ಬಿಸಿಸಿಐ, ಪಾಕ್ನಲ್ಲಿ ಟೂರ್ನಿ ಆಯೋಜನೆಯನ್ನು ವಿರೋಧಿಸುತ್ತಿದ್ದು, ಪಿಸಿಬಿ ಪ್ರಸ್ತಾಪಿಸಿದ್ದ ಹೈಬ್ರೀಡ್ ಮಾದರಿಗೂ ಒಪ್ಪಿರಲಿಲ್ಲ. ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾರತ ತಂಡ ಪಾಲ್ಗೊಳ್ಳಲಿದೆ ಎಂದು ಪಟ್ಟುಹಿಡಿದಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಈ ನಡುವೆ ಟೂರ್ನಿ ಆಯೋಜನೆಗೆ ಸಿದ್ಧವಿರುವುದಾಗಿ ಲಂಕಾ ಮಂಡಳಿ ಕೂಡಾ ತಿಳಿಸಿದೆ.
ಟೆಸ್ಟ್ ಫೈನಲ್‌ಗೆ ನಾಯಕ ರೋಹಿತ್ ಅಭ್ಯಾಸ ಶುರು
ಲಂಡನ್: ಐಪಿಎಲ್‌ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತ ಬಳಿಕ ಲಂಡನ್‌ಗೆ ಪ್ರಯಾಣಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಂಗಳವಾರ ತಂಡದೊಂದಿಗೆ ಸಸೆಕ್ಸ್‌ನ ಅರುಂಡೆಲ್ ಕ್ಯಾಸೆಲ್ ಕೌಂಟಿ ಮೈದಾನದಲ್ಲಿ ಅಭ್ಯಾಸ ನಡೆಸಿದರು. ತಂಡದ ಸದಸ್ಯರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ರೋಹಿತ್, ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಜೊತೆಯೂ ಮಾತುಕತೆ ನಡೆಸಿದರು.
ಐಪಿಎಲ್‌ನಲ್ಲಿ ಮಿಂಚಿದ ಮೋಹಿತ್ ಭಾರತ ತಂಡಕ್ಕೆ?
ನವದೆಹಲಿ: ಕಳೆದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ನೆಟ್ ಬೌಲರ್ ಆಗಿದ್ದ ಮೋಹಿತ್ ಶರ್ಮಾ ಈ ವರ್ಷ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡರು. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ 34 ವರ್ಷದ ಮೋಹಿತ್, ಅಭೂತಪೂರ್ವ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿದರು. 2015ರಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡ ಮೋಹಿತ್, ಇದೀಗ ಮತ್ತೆ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿದ್ದಾರೆ. ಈ ವರ್ಷ ಜುಲೈನಲ್ಲಿ ವಿಂಡೀಸ್‌ನಲ್ಲಿ 5 ಟಿ20 ಪಂದ್ಯಗಳ ಸರಣಿ ಆಡಲಿರುವ ಭಾರತ ತಂಡಕ್ಕೆ ಮೋಹಿತ್ ಆಯ್ಕೆಯಾಗುವ ನಿರೀಕ್ಷೆ ಇದೆ.
ನಮೀಬಿಯಾ ಪ್ರವಾಸಕ್ಕೆ ರಾಜ್ಯ ಕ್ರಿಕೆಟ್ ತಂಡ
ಬೆಂಗಳೂರು: 2023-24ರ ದೇಸಿ ಋುತು ಆರಂಭಕ್ಕೂ ಮುನ್ನ ಕರ್ನಾಟಕ ಕ್ರಿಕೆಟ್ ತಂಡ ನಮೀಬಿಯಾ ಪ್ರವಾಸಕ್ಕೆ ತೆರಳಿದೆ. ಕಳೆದ ಋುತುವಿನಲ್ಲಿ ಹಿರಿಯ, ಅಂಡರ್-25, ಅಂಡರ್-19 ತಂಡಗಳಲ್ಲಿದ್ದ ಆಟಗಾರರನ್ನು ಒಟ್ಟುಗೂಡಿಸಿ ತಂಡ ರಚಿಸಲಾಗಿದೆ. ತಂಡದಲ್ಲಿ ಹಿರಿಯ ಆಟಗಾರರಾದ ಆರ್.ಸಮಥ್‌ರ್, ಕೆ.ವಿ.ಸಿದ್ಧಾಥ್‌ರ್ ಜೊತೆ ಯುವ ಬ್ಯಾಟರ್ ನಿಕಿನ್ ಜೋಸ್, ವೇಗಿಗಳಾದ ವೈಶಾಖ್, ವಿದ್ವತ್ ಕೂಡಾ ಇದ್ದಾರೆ. ರಾಜ್ಯ ತಂಡವು ನಮೀಬಿಯಾ ವಿರುದ್ಧ 5 ಏಕದಿನ ಪಂದ್ಯಗಳನ್ನು ಆಡಲಿದ್ದು, ಜೂ.2, 4, 7, 9 ಹಾಗೂ 11ರಂದು ಪಂದ್ಯಗಳು ನಡೆಯಲಿವೆ.