2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ
ಬೆಂಗಳೂರಿನಲ್ಲಿ ಟೀಂ ಇಂಡಿಯಾಗೆ ಡಮ್ಮಿ ಮ್ಯಾಚ್
ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ್ರೂ ಬೆಂಗಳೂರಿಗೆ ಸಿಕ್ಕಿಲ್ಲ ಒಳ್ಳೆ ಮ್ಯಾಚ್
ಬೆಂಗಳೂರು(ಜೂ.28) ರೋಜರ್ ಬಿನ್ನಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ. ಅಷ್ಟೇ ಅಲ್ಲ, ಕರ್ನಾಟಕ ತಂಡದ ಮಾಜಿ ಆಲ್ರೌಂಡರ್ ಕೂಡ. 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಸದ್ಯ BCCI ಅಧ್ಯಕ್ಷ. ಇದು ಕರ್ನಾಟಕದ ಮಟ್ಟಿಗೆ ಹೆಮ್ಮೆಯ ವಿಷಯವೇ. BCCI ಅಧ್ಯಕ್ಷ ಅಂದ್ರೆ ಇಡೀ ಭಾರತೀಯ ಕ್ರಿಕೆಟ್ ಇವರ ಕಂಟ್ರೋಲ್ನಲ್ಲಿ ಇರುತ್ತೆ. ಆದ್ರೆ ರೋಜರ್ ಬಿನ್ನಿ ಮಾತ್ರ ಡಮ್ಮಿ ಅಧ್ಯಕ್ಷರಾಗಿದ್ದಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ.
BCCI ಅಧ್ಯಕ್ಷ ಅಂದ್ರೆ ಖಡಕ್ಕಾಗಿ ಇರ್ಬೇಕು. ಆದ್ರೆ ಈ ಯಪ್ಪನ ಮುಖ ನೋಡಿದ್ರೆ ಎಲ್ಲವುದಕ್ಕೂ ತಲೆ ಆಡಿಸುವಂತಿದ್ದಾನೆ ಕಂಡ್ರಿ. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ಮಹಾ ಟೂರ್ನಿಗೆ ಆತಿಥ್ಯ ವಹಿಸ್ತಿದೆ. ಹೇಳಿಕೊಳ್ಳೋಕೆ BCCI ಅಧ್ಯಕ್ಷ. ಕರ್ನಾಟಕವನ್ನ ಪ್ರತಿನಿಧಿಸುತ್ತಾರೆ. ಆದ್ರೆ ಬೆಂಗಳೂರಿನಲ್ಲಿ ಒಂದೊಳ್ಳೆ ಮ್ಯಾಚ್ ತಂದಿಲ್ಲ. ಡಮ್ಮಿ ಮ್ಯಾಚೊಂದು ತಂದುಬಿಟ್ಟಿದ್ದಾರೆ. ಹೀಗಾಗಿ ಬಿನ್ನಿ ವಿರುದ್ಧ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ವಾಗ್ದಾಳಿ ಮಾಡ್ತಿದ್ದಾರೆ.
8 ಸ್ಟೇಡಿಯಂನಲ್ಲಿ ಮಹತ್ವದ ಪಂದ್ಯಗಳು.. ಬೆಂಗಳೂರಿನಲ್ಲಿ ಮಾತ್ರ ಡಮ್ಮಿ ಮ್ಯಾಚ್. ಯೆಸ್, ಟೀಂ ಇಂಡಿಯಾ ಪಂದ್ಯಗಳಿಗೆ 9 ಸ್ಟೇಡಿಯಂ ಆತಿಥ್ಯ ವಹಿಸ್ತಿವೆ. 8 ಸ್ಟೇಡಿಯಂನಲ್ಲಿ ಉತ್ತಮ ಪಂದ್ಯಗಳು ನಡೆಯುತ್ತವೆ. ಚೆನ್ನೈ, ಧರ್ಮಶಾಲಾ, ಅಹ್ಮದಾಬಾದ್, ಪುಣೆ, ಮುಂಬೈ, ಕೋಲ್ಕತ್ತಾ, ಧರ್ಮಶಾಲಾ, ಲಖನೌ ಹೀಗೆ ಎಲ್ಲಾ ಸ್ಟೇಡಿಯಂನಲ್ಲೂ ಭಾರತಕ್ಕೆ ಬಲಿಷ್ಠ ತಂಡಗಳು ಎದುರಾಳಿಗಳು. ಆದ್ರೆ ಬೆಂಗಳೂರಿನಲ್ಲಿ ಮಾತ್ರ ಡಮ್ಮಿ ಮ್ಯಾಚ್ ಹಾಕಿದ್ದಾರೆ. ಅದು ಯಾವ ತಂಡ ಅನ್ನೋದಕ್ಕೆ ಕ್ವಾಲಿಫೈಯರ್ ಟೂರ್ನಿ ಮುಗಿಯುವವರೆಗೂ ಕಾಯಬೇಕು.
ಏಕದಿನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ 4 ತಂಡ ಯಾವುದು? ಭವಿಷ್ಯ ನುಡಿದ ಸೆಹ್ವಾಗ್!
ಹೌದು, ಸದ್ಯ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ವಿನ್ನರ್ಸ್ ವಿರುದ್ಧ ಭಾರತ ತಂಡ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. ಅಲ್ಲಿಗೆ ಅದು ಡಮ್ಮಿ ಟೀಂ ಅನ್ನೋದ್ರಲ್ಲಿ ಎರಡು ಮಾತಿಲ್ಲ ಬಿಡಿ. ಲಂಕಾ, ಜಿಂಬಾಬ್ವೆ, ವಿಂಡೀಸ್ ಹೀಗೆ ಯಾವುದಾದ್ರೂ ಒಂದು ಡಮ್ಮಿ ಟೀಂ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತೀಯರು ಪಂದ್ಯ ಆಡಲಿದ್ದಾರೆ.
ಕಳೆದೆರಡು ವಿಶ್ವಕಪ್ನಲ್ಲಿ ಬೆಂಗಳೂರಿನಲ್ಲಿ ಭಾರತಕ್ಕೆ ಬಲಿಷ್ಠ ಎದುರಾಳಿ
1996ರಲ್ಲಿ ಏಷ್ಯಾಖಂಡದಲ್ಲಿ ನಡೆದ ಏಕದಿನ ವಿಶ್ವಕಪ್ನ ಭಾರತ-ಪಾಕಿಸ್ತಾನ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಆ ಪಂದ್ಯವನ್ನ ಟೀಂ ಇಂಡಿಯಾ ರೋಚಕವಾಗಿ ಗೆದ್ದುಕೊಂಡಿತ್ತು. ಇನ್ನು 2011ರ ವಿಶ್ವಕಪ್ನ ಭಾರತ-ಇಂಗ್ಲೆಂಡ್ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆದಿತ್ತು. ಈ ಪಂದ್ಯ ಟೈ ಆಗೋ ಮೂಲಕ ರೋಚಕ ಅಂತ್ಯ ಕಂಡಿತ್ತು.
ಆಗ BCCIನಲ್ಲಿ ಯಾವ್ದೇ ಕರ್ನಾಟಕ ಪ್ರತಿನಿಧಿ ಇರಲಿಲ್ಲ. ಆದ್ರೆ ಈಗ ಕರ್ನಾಟಕದ ರೋಜರ್ ಬಿನ್ನಿಯೇ BCCI ಅಧ್ಯಕ್ಷ. ಆದ್ರೂ ಬೆಂಗಳೂರಿನಲ್ಲಿ ಭಾರತ ಆಡೋ ಒಂದು ಮಹತ್ವದ ಪಂದ್ಯ ನಡೆಯುತ್ತಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಭಾರತದಲ್ಲಿ ಅತ್ಯುತ್ತಮ ಸ್ಟೇಡಿಯಂಗಳಲ್ಲಿ ಒಂದು. ಇಲ್ಲಿ ಅನೇಕ ಮಹತ್ವದ ಪಂದ್ಯಗಳು ನಡೆದಿವೆ. ಬೆಂಗಳೂರಿನಲ್ಲಿ ಕ್ರಿಕೆಟ್ ಫ್ಯಾನ್ಸ್ ಜಾಸ್ತಿ ಇದ್ದಾರೆ. ಇಲ್ಲಿ ಯಾವ್ದೇ ಪಂದ್ಯ ನಡೆಯಲಿ ಸ್ಟೇಡಿಯಂ ಭರ್ತಿಯಾಗುತ್ತೆ. ಆದ್ರೂ ಇಲ್ಲಿ ಈ ಸಲ ಮಹತ್ವದ ವಿಶ್ವಕಪ್ ಪಂದ್ಯ ನಡೆಯುತ್ತಿಲ್ಲ. ಇದಕ್ಕಿಂತ ದುರಂತ ಮತ್ತೊಂದಿಲ್ಲ.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ;