ಟೆಸ್ಟ್ ಕ್ರಿಕೆಟ್‌ನಲ್ಲಿ ಪದೇ ಪದೇ ವಿಫಲವಾಗುತ್ತಿರುವ ವಿರಾಟ್ ಕೊಹ್ಲಿ
SENA ದೇಶಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಲು ಪದೇ ಪದೇ ವಿಫಲ
ಏಷ್ಯಾದಾಚೆ ರನ್ ಬಾರಿಸಲು ಕಿಂಗ್ ಕೊಹ್ಲಿ ಫೇಲ್
ಬೆಂಗಳೂರು(ಜೂ.28): ರನ್ ಮಷಿನ್ ವಿರಾಟ್ ಕೊಹ್ಲಿ ಏಕದಿನ ಮತ್ತು T20 ಕ್ರಿಕೆಟ್‌ನಲ್ಲಿ ಅಬ್ಬರಿಸ್ತಿದ್ದಾರೆ. ಆದ್ರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಖದರ್ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಕೊಹ್ಲಿ ಬ್ಯಾಟಿಂಗ್ ಆವರೇಜ್ ಡೌನ್ ಆಗ್ತಿದೆ. ಮೂರು ವರ್ಷಗಳ ಹಿಂದೆ ಟೆಸ್ಟ್ನಲ್ಲಿ ಕೊಹ್ಲಿ ಸರಾಸರಿ 53ರಷ್ಟಿತ್ತು. ಆದ್ರೀಗ, 48ಕ್ಕೆ ಕುಸಿದಿದೆ. ಕೊಹ್ಲಿಯ ಈ ಫ್ಲಾಪ್ ಶೋನಿಂದಾಗಿ ವಿದೇಶಗಳಲ್ಲಿ ಟೀಂ ಇಂಡಿಯಾ ಹಿನ್ನಡೆಯಾಗ್ತಿದೆ.
ಹೌದು, ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ ಮಕಾಡೆ ಮಲಗಿದ್ದಾರೆ. ಇದು ಟೀಂ ಇಂಡಿಯಾದ ಯಶಸ್ಸಿನ ಓಟಕ್ಕೆ ಪೆಟ್ಟು ನೀಡಿದೆ. WTC ಫೈನಲ್ನಲ್ಲಿ ಕೊಹ್ಲಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿತ್ತು. ಆದ್ರೆ, ತಮ್ಮ ಮೇಲಿನ ನಿರೀಕ್ಷೆಗಳನ್ನ ತಲುಪುವಲ್ಲಿ ಕೊಹ್ಲಿ ವಿಫಲರಾದರು. ಇನ್ನು ಕೊಹ್ಲಿ 2019ರಿಂದ ಈವರೆಗು ಔಟ್ ಆಫ್ ಏಷ್ಯಾ ಅಂದ್ರೆ, SENA ದೇಶಗಳಲ್ಲಿ ಕಂಪ್ಲೀಟ್ ಫೇಲ್ ಆಗಿದ್ದಾರೆ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ..!
undefined
2019 ಜನವರಿಯಿಂದ 2023ರವರೆಗು ಕೊಹ್ಲಿ ಏಷ್ಯಾದಾಚೆ 15 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 28 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ ಕೇವಲ 27.41ರ ಸರಾಸರಿಯಲ್ಲಿ 805 ರನ್ಗಳಿಸಿದ್ದಾರೆ. 6 ಅರ್ಧಶತಕ ಸಿಡಿಸಿರೋ ಕೊಹ್ಲಿ ಒಂದೇ ಒಂದು ಶತಕ ಬಾರಿಸಿಲ್ಲ.
Ashes 2023: ಇಂದಿನಿಂದ ಲಾರ್ಡ್ಸ್‌ನಲ್ಲಿ ಎರಡನೇ ಆ್ಯಷಸ್ ಟೆಸ್ಟ್, ಉಭಯ ತಂಡದಲ್ಲಿ ಮಹತ್ವದ ಬದಲಾವಣೆ?
2019ರವರೆಗೆ ವಿರಾಟ್ ಟೆಸ್ಟ್ ಫಾರ್ಮ್ ಪೀಕ್ನಲ್ಲಿತ್ತು. 2019ರಲ್ಲಿ ಕೊಹ್ಲಿ 11 ಇನ್ನಿಂಗ್ಸ್ಗಳಿಂದ 68.00ರ ಸರಾಸರಿಯಲ್ಲಿ 612 ರನ್ಗಳಿಸಿದ್ರು. ಇದ್ರಲ್ಲಿ 2 ಶತಕ ಮತ್ತು 2 ಅರ್ಧಶತಕ ಸೇರಿದ್ವು. 254 ಕೊಹ್ಲಿಯ ಹೈಯೆಸ್ಟ್ ಸ್ಕೋರ್ ಆಗಿತ್ತು. 2020ರಲ್ಲಿ ಕೊಹ್ಲಿ 6 ಇನ್ನಿಂಗ್ಸ್ಗಳಿಂದ ಕೇವಲ 19.33ರ ಸರಾಸರಿಯಲ್ಲಿ 116 ರನ್ಗಳಿಸಿದ್ರು. ಜಸ್ಟ್ ಒಂದೇ ಒಂದು ಅರ್ಧಶತಕ ದಾಖಲಿಸಿದ್ರು.
ಟೆಸ್ಟ್ ಫಾರ್ಮ್ಯಾಟ್ನಲ್ಲಿ ಕೊಹ್ಲಿ ಸತತ ವೈಫಲ್ಯ..!
2021ರಲ್ಲಿ ಕೊಹ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ರು. 19 ಇನ್ನಿಂಗ್ಸ್ಗಲ್ಲಿ ಬ್ಯಾಟಿಂಗ್ ಮಾಡಿದ್ರು. ಇದ್ರಲ್ಲಿ 28.21ರ ಸರಾಸರಿಯಲ್ಲಿ 4 ಅರ್ಧಶತಕಗಳ ಸಹಿತ 536 ರನ್ಗಳಿಸಿದ್ರು. ಕಳೆದ ವರ್ಷವೂ ಕೊಹ್ಲಿ ರೆಡ್ಬಾಲ್ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸಿದ್ರು. 2022ರಲ್ಲಿ ಕೊಹ್ಲಿ ಒಟ್ಟು 11 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ರು. 26.50ರ ಸರಾಸರಿಯಲ್ಲಿ 265 ಮಾತ್ರ ಸಿಡಿಸಿದ್ರು. ಒಮ್ಮೆ ಮಾತ್ರ ಅರ್ಧಶತಕ ಸಿಡಿಸಿದ್ರು. ಈ ವರ್ಷ ಕೊಹ್ಲಿ 8 ಇನ್ನಿಂಗ್ಸ್ಗಳಿಂದ 45ರ ಸರಾಸರಿಯಲ್ಲಿ 360 ರನ್ಗಳಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಸೇರಿದೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಿಂದ SENA ದೇಶಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಇದು ಟೀಮ್ ಇಂಡಿಯಾದ ಗೆಲವಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಆದಷ್ಟು ಬೇಗ ಟೆಸ್ಟ್ನಲ್ಲು ಕೊಹ್ಲಿ ತಮ್ಮ ಹಿಂದಿನ ಗತವೈಭವಕ್ಕೆ ಮರಳಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.