ದೀಪಕ ಅರ್ವಾಲ್‌ಗೆ 2 ವರ್ಷ ನಿಷೇಧ ಶಿಕ್ಷೆ; ಎಲ್ಲಾ ಕ್ರಿಕೆಟ್ ಚಟುವಟಿಕೆಯಿಂದ ಅಮಾನತು

By Suvarna NewsFirst Published Apr 29, 2020, 8:06 PM IST
Highlights

ಫಿಕ್ಸಿಂಗ್ ತನಿಖೆ ದಿಕ್ಕು ತಪ್ಪಿಸಲು ಯತ್ನ, ಮಹತ್ವದ ಸಾಕ್ಷ್ಯ ನಾಶ ಪ್ರಯತ್ನ ಸೇರಿದಂತೆ ಹಲವು ಆರೋಪಗಳ ಮೇಲೆ ಭಾರತದ ದೀಪಕ್ ಅಗರ್ವಾಲ್‌ಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ 2 ವರ್ಷ ಅಮಾನತು ಶಿಕ್ಷೆ ನೀಡಿದೆ.

ದುಬೈ(ಏ.29): ಕ್ರಿಕೆಟ್‌ನಲ್ಲಿ ಕಳ್ಳಾಟ ನಿಯಂತ್ರಿಸಲು ಐಸಿಸಿ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ . ಪ್ರತಿ ಟೂರ್ನಿಗೂ ಒರ್ವ ಭ್ರಷ್ಟಾಚಾರ ಅಧಿಕಾರಿಯನ್ನು ಐಸಿಸಿ ನೇಮಿಸುತ್ತದೆ. ಇಷ್ಟೇ ಅಲ್ಲ ಆಯಾ ಕ್ರಿಕೆಟ್ ಮಂಡಳಿ ವಿಶೇಶ ಭ್ರಷ್ಟಚಾರ ನಿಗ್ರಹ ದಳ ಕೂಡ ನೇಮಕ ಮಾಡಬೇಕು. ಇಷ್ಟಾದರೂ ಕ್ರಿಕೆಟ್‌ನಲ್ಲಿ ಫಿಕ್ಸಿಂಕ್ ಕೇಳಿ ಬರುತ್ತಿದೆ. ಇದೀಗ ಇದೇ ರೀತಿ ಮೋಸದಾಟದಲ್ಲಿ ಭಾಗಿಯಾದ ಆರೋಪದಡಿ ಟಿ10 ಲೀಗ್‌ನಲ್ಲಿ ಸಿಂಧಿ ಫ್ರಾಂಚೈಸಿ ಸಹ ಮಾಲೀಕ ದೀಪಕ್ ಅಗರ್ವಾಲ್‌ಗೆ 2 ವರ್ಷ ನಿಷೇಧದ ಶಿಕ್ಷೆ ಹೇರಿದೆ.

ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!.

ದುಬೈನಲ್ಲಿ 2018ರಲ್ಲಿ ಆಯೋಜಿಸಲಾದ ಟಿ10 ಲೀಗ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ಕುರಿತು ಐಸಿಸಿ ತನಿಖೆ ಕೈಗೊಂಡಿತ್ತು. ಆದರೆ ತನಿಖೆಯನ್ನು ವಿಳಂಬ ಮಾಡಿದ, ಸಾಕ್ಷ್ಯ ನಾಶ ಪಡಿಸಿದ ಹಾಗೂ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ ಆರೋಪದಡಿಯಲ್ಲಿ ಸಿಂಧ್ ಫ್ರಾಂಚೈಸಿ ಮಾಲೀಕ ದೀಪಕ್ ಅರ್ಗವಾಲ್‌ಗೆ 2 ವರ್ಷ ಅಮಾನತು ಮಾಡಲಾಗಿದೆ. 2 ವರ್ಷ ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ದೀಪಕ್ ಭಾಗವಹಿಸುವಂತಿಲ್ಲ ಎಂದು ಐಸಿಸಿ ಹೇಳಿದೆ.

ಪಾಕಿಸ್ತಾನದ ಅನುಭವಿ ಕ್ರಿಕೆಟಿಗ 3 ವರ್ಷ ಬ್ಯಾನ್..!

ದೀಪಕ್ ಅಗರ್ವಾಲ್ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.4.7 ಉಲ್ಲಂಘಿಸಿದ್ದಾರೆ. ಐಸಿಸಿ ಶಿಕ್ಷೆ ಪ್ರಕಟಿಸುತ್ತಿದ್ದಂತೆ ತನ್ನ ತಪ್ಪನ್ನು ಒಪ್ಪಿಕೊಂಡಿರುವ ದೀಪಕ್ ಅಗರ್ವಾಲ್ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ 6 ತಿಂಗಳ ಶಿಕ್ಷೆ ಕಡಿತಗೊಳಿಸಿ, ಇದೀಗ ಒಂದೂವರೆ ವರ್ಷಕ್ಕೆ ಇಳಿಸಲಾಗಿದೆ.

ದೀಪಕ್ ಅಗರ್ವಾಲ್ ಹಲವು ಬಾರಿ ಐಸಿಸಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ ಸಿಂಧ್ ಫ್ರಾಂಚೈಸಿ ಸಹ ಮಾಲೀಕರನಾಗಿ ಅವ್ಯವಹಾರ ನಡೆಸಿರುವ ಆರೋಪವೂ ಇದೆ. ಹೀಗಾಗಿ ಸಾಕ್ಷ್ಯಗಳ ಆಧಾರದಲ್ಲಿ ದೀಪಕ್ ಅಗರ್ವಾಲ್‌ಗೆ ಅಮಾನತು ಶಿಕ್ಷೆ ನೀಡುತ್ತಿದ್ದೇವೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಶಲ್ ಹೇಳಿದ್ದಾರೆ.
 

click me!